ಇದೇ ಮಾದರಿಯನ್ನು ಅನ್ವಯಿಸಿದರೆ ಬಿಜೆಪಿಯಲ್ಲಿ ಕೆಲವೇ ಕೆಲವು ಸಂಸದರು ಉಳಿಯುತ್ತಾರೆ: ಮಹುವಾ ಉಚ್ಚಾಟನೆ ಬಗ್ಗೆ ಅಖಿಲೇಶ್ 

ಇದೇ ಮಾದರಿಯ ಕ್ರಮ ಬೇರೆಯವರಿಗೂ ಅನ್ವಯಿಸುವುದಾದರೆ ಬಿಜೆಪಿಯಲ್ಲಿ ಕೆಲವೇ ಕೆಲವು ಸಂಸದರು ಉಳಿಯಲಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.
ಅಖಿಲೇಶ್ ಯಾದವ್- ಮೊಹುವಾ ಮೊಯಿತ್ರಾ
ಅಖಿಲೇಶ್ ಯಾದವ್- ಮೊಹುವಾ ಮೊಯಿತ್ರಾ

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೇ ಮಾದರಿಯ ಕ್ರಮ ಬೇರೆಯವರಿಗೂ ಅನ್ವಯಿಸುವುದಾದರೆ ಬಿಜೆಪಿಯಲ್ಲಿ ಕೆಲವೇ ಕೆಲವು ಸಂಸದರು ಉಳಿಯಲಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.

ಆಡಳಿತಾರೂಢ ಪಕ್ಷಕ್ಕೂ ಇದೇ ಮಾದರಿಯ ಕ್ರಮ ಅನ್ವಯಿಸುವುದಾದರೆ, ಉಭಯ ಸದನಗಳಲ್ಲಿಯೂ ಕೆಲವೇ ಕೆಲವು ಬಿಜೆಪಿ ಸಂಸದರು ಉಳಿಯಲಿದ್ದಾರೆ ಎಂದು ಹೇಳಿದ್ದಾರೆ. 

ತೃಣಮೂಲ ಕಾಂಗ್ರೆಸ್‌ ಸಂಸದೆ (TMC MP) ಮಹುವಾ ಮೊಯಿತ್ರಾ (Mahua Moitra) ವಿರುದ್ಧದ 'ಪ್ರಶ್ನೆಗಾಗಿ ಲಂಚ' ಪಡೆದ ಪ್ರಕರಣದ ಕುರಿತು ಸದನ ನೈತಿಕ ಸಮಿತಿಯು ತಯಾರಿಸಿರುವ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ ಈ ಪ್ರತಿಕ್ರಿಯೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com