ಅಕ್ಟೋಬರ್ 2025 ರಿಂದ ಟ್ರಕ್ ಕ್ಯಾಬಿನ್ ಗೆ ಎಸಿ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಅಕ್ಟೋಬರ್ 2025 ರಿಂದ ಜಾರಿಗೆ ಬರುವಂತೆ ಎಲ್ಲಾ ಹೊಸ ಲಾರಿಗಳ ಕ್ಯಾಬಿನ್ ಗೆ ಎಸಿ ಕಡ್ಡಾಗೊಳಿಸಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ

ನವದೆಹಲಿ: ಕೇಂದ್ರ ಸರ್ಕಾರ ಅಕ್ಟೋಬರ್ 2025 ರಿಂದ ಜಾರಿಗೆ ಬರುವಂತೆ ಎಲ್ಲಾ ಹೊಸ ಲಾರಿಗಳ ಕ್ಯಾಬಿನ್ ಗೆ ಎಸಿ ಕಡ್ಡಾಗೊಳಿಸಿದೆ.

ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಅಕ್ಟೋಬರ್ 1, 2025 ರಂದು ಅಥವಾ ನಂತರ ತಯಾರಾಗುವ ಎಲ್ಲಾ ಹೊಸ ಟ್ರಕ್‌ಗಳು ಚಾಲಕರಿಗೆ AC ಕ್ಯಾಬಿನ್‌ಗಳನ್ನು ಹೊಂದಿರಬೇಕು ಎಂದು ಹೇಳಿದೆ.

ಗೆಜೆಟ್ ಅಧಿಸೂಚನೆಯಲ್ಲಿ ಸಚಿವಾಲಯವು"... ಅಕ್ಟೋಬರ್ 1, 2025 ರಂದು ಅಥವಾ ನಂತರ ತಯಾರಾದ ವಾಹನಗಳು, N2 ಮತ್ತು N3 ವರ್ಗದ ವಾಹನಗಳ ಕ್ಯಾಬಿನ್‌ಗೆ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಬೇಕು" ಎಂದು ಹೇಳಿದೆ.

ಕಳೆದ ಜುಲೈನಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಟ್ರಕ್‌ಗಳ ಕ್ಯಾಬಿನ್‌ಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಕರಡು ಅಧಿಸೂಚನೆಯನ್ನು ಅನುಮೋದಿಸಲಾಗಿದೆ ಎಂದು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com