ನಾಗ್ಪುರ: ಮೊಬೈಲ್ ಫೋನ್ ಕೊಡದ್ದಕ್ಕೆ ಆತ್ಮಹತ್ಯೆಗೆ ಶರಣಾದ ಬಾಲಕಿ

ಮೊಬೈಲ್ ಫೋನ್ ಹೆಚ್ಚಾಗಿ ಬಳಸಬೇಡ ಎಂದು ತಂದೆ ಗದರಿದ್ದಕ್ಕೆ ಮನನೊಂದು 16 ವರ್ಷದ ಬಾಲಕಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಾಗ್ಪುರ: ಮೊಬೈಲ್ ಫೋನ್ ಹೆಚ್ಚಾಗಿ ಬಳಸಬೇಡ ಎಂದು ತಂದೆ ಗದರಿದ್ದಕ್ಕೆ ಮನನೊಂದು 16 ವರ್ಷದ ಬಾಲಕಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ನಗರದ ಹಿಂಗ್ನಾ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಅಂಶು ಶಾಂತಾರಾಮ್ ಉಯಿಕೆ ತನ್ನ ಮೊಬೈಲ್ ಫೋನ್‌ ಅನ್ನು ಗಂಟೆಗಳ ಕಾಲ ಬಳಸುತ್ತಿದ್ದಳು ಎಂದು ಆಕೆಯ ಕುಟುಂಬ ಸದಸ್ಯರ ಹೇಳಿಕೆಯನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತನ್ನ ಮಗಳು ಮೊಬೈಲ್ ಫೋನ್ ಮೇಲೆ ಅತಿಯಾದ ಅವಲಂಬನೆಯ ಬಗ್ಗೆ ಕಳವಳಗೊಂಡ ತಂದೆ, ಇತ್ತೀಚೆಗೆ ಆಕೆಗೆ ಮೊಬೈಲ್ ಕೊಡಲು ನಿರಾಕರಿಸಿದ್ದರು. ಆದರೆ ಅವರ ನಿರ್ಧಾರ ಮಗಳ ದುರಂತ ಅಂತ್ಯಕ್ಕೆ ಕಾರಣವಾಗಿದೆ.

ಫೋನ್‌ ಕೊಡದಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಬಾಲಕಿ, ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com