ಛತ್ತೀಸ್ ಗಢ ಮುಖ್ಯಮಂತ್ರಿಯಾಗಿ ಮಾಜಿ ಕೇಂದ್ರ ಸಚಿವ ವಿಷ್ಣುದೇವ್ ಸಾಯಿ ಆಯ್ಕೆ 

ಛತ್ತೀಸ್ ಗಢದ ನೂತನ ಮುಖ್ಯಮಂತ್ರಿಯಾಗಿ ಮಾಜಿ ಕೇಂದ್ರ ಸಚಿವ ವಿಷ್ಣುದೇವ್ ಸಾಯಿ ಆಯ್ಕೆಯಾಗಿದ್ದಾರೆ. 
ಛತ್ತೀಸ್ ಗಢ ಮುಖ್ಯಮಂತ್ರಿ  ವಿಷ್ಣುದೇವ್ ಸಾಯಿ
ಛತ್ತೀಸ್ ಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ

ರಾಯ್ಪುರ: ಛತ್ತೀಸ್ ಗಢದ ನೂತನ ಮುಖ್ಯಮಂತ್ರಿಯಾಗಿ ಮಾಜಿ ಕೇಂದ್ರ ಸಚಿವ ವಿಷ್ಣುದೇವ್ ಸಾಯಿ ಆಯ್ಕೆಯಾಗಿದ್ದಾರೆ. 

ಬಿಜೆಪಿ ವೀಕ್ಷಕರ ಸಮ್ಮುಖದಲ್ಲಿ ನಡೆದ ಶಾಸಕರ ಸಭೆಯಲ್ಲಿ ಸಿಎಂ ಹುದ್ದೆಗೆ ವಿಷ್ಣುದೇವ್ ಸಾಯಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. 

ಶಾಸಕಾಂಗ ಸಭೆಯಲ್ಲಿ ಬಿಜೆಪಿ ಹೈಕಮಾಂಡ್ ಕಳಿಸಿದ್ದ ವೀಕ್ಷಕರ ತಂಡ ವಿಷ್ಣುದೇವ್ ಸಾಯಿ ಅವರ ಹೆಸರನ್ನು ಸೂಚಿಸಿದ್ದು, ಶಾಸಕರು ಅದನ್ನು ಅನುಮೋದಿಸಿದ್ದಾರೆ. ಛತ್ತೀಸ್ ಗಢದ ರಾಯ್ಘರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ವಿಷ್ಣುದೇವ್ ಸಾಯಿ, ಪ್ರಧಾನಿ ಮೋದಿ ಅವರ ಮೊದಲ ಅವಧಿಯಲ್ಲಿ ಉಕ್ಕು ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

59 ವರ್ಷದ ವಿಷ್ಣುದೇವ್ ಸಾಯಿ ಮೂಲತಃ ಆರ್ ಎಸ್ಎಸ್ ಹಿನ್ನೆಲೆಯುಳ್ಳವರಾಗಿದ್ದು, ಮಾಜಿ ಸಿಎಂ ರಮಣ್ ಸಿಂಗ್ ಗೂ ಆಪ್ತರಾಗಿದ್ದಾರೆ. ವಿಷ್ಣುದೀಪ್ ಸಾಯಿ ನಾಲ್ಕನೇ ಅವಧಿಗೆ ಸಂಸದರಾಗಿದ್ದು, 2006ರಲ್ಲಿ ಛತ್ತೀಸ್ ಗಢ ಬಿಜೆಪಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದು, ಅತ್ಯುತ್ತಮ ಸಂಘಟಕರೆಂಬ ಖ್ಯಾತಿ ಹೊಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com