ಹರ್ದೀಪ್ ನಿಜ್ಜರ್
ಹರ್ದೀಪ್ ನಿಜ್ಜರ್

ತಿರುಚಿದ, ನಕಲಿ ಮಾಹಿತಿ: ನಿಜ್ಜರ್ ಹೆಸರು ಉಲ್ಲೇಖಿಸಿ ರಹಸ್ಯ ಮೆಮೋ ಕುರಿತ ವರದಿ ಬಗ್ಗೆ ಭಾರತದ ಪ್ರತಿಕ್ರಿಯೆ

ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಏಪ್ರಿಲ್ ನಲ್ಲಿ ಸರ್ಕಾರ ರಹಸ್ಯ ಮೆಮೋ ಹೊರಡಿಸಿತ್ತು ಎಂಬ ಬಗ್ಗೆ ಪ್ರಕಟಗೊಂಡ ವರದಿಯನ್ನು ಭಾರತ ನಕಲಿ ಹಾಗೂ ಸಂಪೂರ್ಣವಾಗಿ ತಿರುಚಿದ ಮಾಹಿತಿ ಎಂದು ತಳ್ಳಿ ಹಾಕಿದೆ. 

ನವದೆಹಲಿ: ಹರ್ದೀಪ್ ಸಿಂಗ್ ನಿಜ್ಜರ್ ಸೇರಿದಂತೆ ನಿರ್ದಿಷ್ಟ ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಏಪ್ರಿಲ್ ನಲ್ಲಿ ಸರ್ಕಾರ ರಹಸ್ಯ ಮೆಮೋ ಹೊರಡಿಸಿತ್ತು ಎಂಬ ಬಗ್ಗೆ ಪ್ರಕಟಗೊಂಡ ವರದಿಯನ್ನು ಭಾರತ ನಕಲಿ ಹಾಗೂ ಸಂಪೂರ್ಣವಾಗಿ ತಿರುಚಿದ ಮಾಹಿತಿ ಎಂದು ತಳ್ಳಿ ಹಾಕಿದೆ. 

ವಿದೇಶಾಂಗ ಸಚಿವಾಲಯದ ವಕ್ತಾರರಾಗಿರುವ ಅರಿಂದಮ್ ಬಾಗ್ಚಿ ಈ ಬಗ್ಗೆ ಮಾತನಾಡಿದ್ದು, ಭಾರತದ ವಿರುದ್ಧದ ನಿರಂತರ ತಪ್ಪು ಮಾಹಿತಿ ಪ್ರಚಾರ ಭಾಗವಾಗಿ ಅದರೊಂದಿಗೆ ಜೋಡಿಸಿಕೊಂಡಿರುವ ಸಂಸ್ಥೆಗಳು ಪಾಕಿಸ್ತಾನಿ ಗುಪ್ತಚರದಿಂದ "ನಕಲಿ ನಿರೂಪಣೆಗಳನ್ನು" ಪ್ರಚಾರ ಮಾಡಲು ಹೆಸರುವಾಸಿಯಾದೆ ಎಂದು ಹೇಳಿದ್ದಾರೆ.

ಭಾರತ ಸರ್ಕಾರದ ವಿರುದ್ಧದ ಮಾಹಿತಿಯನ್ನೊಳಗೊಂಡ ವರದಿಯನ್ನು ಅಮೇರಿಕಾದ ಆನ್ ಲೈನ್ ಮಾಧ್ಯಮ ಸಂಸ್ಥೆಯೊಂದು ಪ್ರಕಟಿಸಿತ್ತು. "ಅಂತಹ ವರದಿಗಳು ನಕಲಿ ಮತ್ತು ಸಂಪೂರ್ಣವಾಗಿ ಕಪೋಲಕಲ್ಪಿತವಾಗಿವೆ ಎಂದು ನಾವು ಬಲವಾಗಿ ಪ್ರತಿಪಾದಿಸುತ್ತೇವೆ. ಅಂತಹ ಯಾವುದೇ ಮೆಮೊ ಇಲ್ಲ" ಎಂದು ಬಾಗ್ಚಿ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com