NCF ಆಧಾರದ ಮೇಲೆ ರಾಜ್ಯಗಳು ತಮ್ಮದೇ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಬಹುದು: ಕೇಂದ್ರ

ರಾಜ್ಯ ಸರ್ಕಾರಗಳು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಅಳವಡಿಸಿಕೊಳ್ಳಬಹುದು ಅಥವಾ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (ಎನ್‌ಸಿಎಫ್) ಆಧಾರದ ಮೇಲೆ ತಮ್ಮದೇ ಆದ ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ರಾಜ್ಯ ಸರ್ಕಾರಗಳು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಅಳವಡಿಸಿಕೊಳ್ಳಬಹುದು ಅಥವಾ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (ಎನ್‌ಸಿಎಫ್) ಆಧಾರದ ಮೇಲೆ ತಮ್ಮದೇ ಆದ ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಈ ಕುರಿತು ಇಂದು ಲೋಕಸಭೆಗೆ ಲಿಖಿತ ಉತ್ತರ ನೀಡಿದ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಅವರು, ಎನ್‌ಸಿಎಫ್ ಸೂಚನೆ ನೀಡುವ ದಾಖಲೆಯಲ್ಲ. ಇದು ಸಲಹೆ ಅಥವಾ ಶಿಫಾರಸು ಮಾಡುತ್ತದೆ ಎಂದು ಹೇಳಿದರು.

ಎನ್‌ಸಿಇಆರ್‌ಟಿಯ ರಾಷ್ಟ್ರೀಯ ಪಠ್ಯಕ್ರಮವನ್ನು ತಿರಸ್ಕರಿಸಿದ ಮತ್ತು ರಾಜ್ಯಗಳು ತಮ್ಮದೇ ಪಠ್ಯಕ್ರಮವನ್ನು ಸಿದ್ಧಪಡಿಸಿದ ಕುರಿತು ತಮಿಳುನಾಡು ಸಂಸದರಾದ ಎ ರಾಜಾ ಮತ್ತು ಎ ಗಣೇಶಮೂರ್ತಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವೆ, ಎನ್‌ಸಿಎಫ್ ಶಾಲಾ ಶಿಕ್ಷಣದ ಫೆಡರಲ್ ರಚನೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೇಳಿದರು.

ರಾಜ್ಯಗಳು ಅಂತಿಮವಾಗಿ ತಮ್ಮ ರಾಜ್ಯ ಅಥವಾ ಪ್ರಾದೇಶಿಕ ಪಠ್ಯಕ್ರಮವನ್ನು ಹೊಂದುತ್ತವೆ ಮತ್ತು ಸುಲಭವಾಗಿ ಸ್ಥಳೀಯ ಅಂಶಗಳನ್ನು ಸೇರಿಸುತ್ತವೆ ಎಂದು ಕೇಂದ್ರ ಸಚಿವೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com