ಆರ್ಟಿಕಲ್ 370 ರದ್ದತಿ: ನ್ಯಾ. ಕೌಲ್ ಭಿನ್ನ ಆದೇಶದಲ್ಲೇನಿದೆ ಅಂದರೆ....

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ 5 ನ್ಯಾಯಾಧೀಶರ ಪೀಠ 370 ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ.
ನ್ಯಾ.ಸಂಜಯ್ ಕಿಶನ್ ಕೌಲ್
ನ್ಯಾ.ಸಂಜಯ್ ಕಿಶನ್ ಕೌಲ್

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ 5 ನ್ಯಾಯಾಧೀಶರ ಪೀಠ 370 ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ.

5 ಸದಸ್ಯರ ಪೀಠದಲ್ಲಿ ಒಬ್ಬರಾಗಿದ್ದ ನ್ಯಾ. ಕೌಲ್ ಉಳಿದ ನ್ಯಾಯಾಧೀಶರಿಗಿಂತ ಸ್ವಲ್ಪ ಭಿನ್ನವಾದ ಅಭಿಪ್ರಾಯವನ್ನು ಪ್ರಕಟಿಸಿದ್ದಾರೆ. 1980 ರಿಂದ ಜಮ್ಮು-ಕಾಶ್ಮೀರದಲ್ಲಿ ನಡೆದ ಮಾನವ ಹಕ್ಕುಗಳ ಮೇಲಿನ ದೌರ್ಜನ್ಯಗಳ ಮೇಲೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ನ್ಯಾ.ಸಂಜಯ್ ಕಿಶನ್ ಕೌಲ್ ತಮ್ಮ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

"1980 ರ ದಶಕದಿಂದಲೂ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ಅಥವಾ ಅಥವಾ ಸರ್ಕಾರದಲ್ಲಿರುವವರ ಹೊರತಾಗಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಗಳ ಕುರಿತು ತನಿಖೆ ನಡೆಸಿ ವರದಿ ನೀಡಲು ನಿಷ್ಪಕ್ಷಪಾತ ಸತ್ಯ ಮತ್ತು ಸಮನ್ವಯ ಸಮಿತಿಯನ್ನು ಸ್ಥಾಪಿಸಲು ನಾನು ಶಿಫಾರಸು ಮಾಡುತ್ತೇನೆ ಎಂದು ನ್ಯಾಯಮೂರ್ತಿ ಕೌಲ್ ಹೇಳಿದ್ದಾರೆ.

"ಭವಿಷ್ಯದೆಡೆಗೆ ಸಾಗಲು, ಈ ಹಿಂದೆ ಉಂಟಾಗಿರುವ ನೋವುಗಳನ್ನು, ಗಾಯಗಳನ್ನು ವಾಸಿಮಾಡುವ ಅಗತ್ಯವಿದೆ. ಪೀಳಿಗೆಗಳು ಕಳೆದರೂ ಜನರು ಆಘಾತವನ್ನು ಅನುಭವಿಸುತ್ತಾರೆ. ಆದ್ದರಿಂದ ಆಗಿರುವ ನೋವುಗಳನ್ನು ಗುಣಪಡಿಸುವ ಮೊದಲ ಹೆಜ್ಜೆಯಾಗಿ ಜಮ್ಮು-ಕಾಶ್ಮೀರದಲ್ಲಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಯ ಕೃತ್ಯಗಳು ನಡೆದಿರುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ" ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರವನ್ನು ಕ್ರಮೇಣ ಭಾರತಕ್ಕೆ ಸಂಯೋಜಿಸುವುದು 370 ರ ಮೂಲ ಗುರಿಯಾಗಿತ್ತು ಎಂದು ನ್ಯಾ. ಕೌಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com