ಲೋಕಸಭೆಯಲ್ಲಿ ಭದ್ರತೆ ಉಲ್ಲಂಘನೆ
ಲೋಕಸಭೆಯಲ್ಲಿ ಭದ್ರತೆ ಉಲ್ಲಂಘನೆ

ಭಗತ್ ಸಿಂಗ್ ಮಾಡಿದ್ದನ್ನು ಅವರು ಅನುಕರಿಸಲು ಯತ್ನಿಸಿದ್ದಾರೆ: ಸಂಸತ್ ಭದ್ರತಾ ಲೋಪ ಪ್ರಕರಣದ ಬಗ್ಗೆ ಪೊಲೀಸ್

ಲೋಕಸಭೆಯಲ್ಲಿ ವೀಕ್ಷಕರ ಗ್ಯಾಲರಿಯಿಂದ ಚೇಂಬರ್ ಗೆ ನುಗ್ಗಿ ಭದ್ರತಾ ಉಲ್ಲಂಘನೆ ಮಾಡಿದ ಆರೋಪಿಗಳು ಭಗತ್ ಸಿಂಗ್ ಮಾದರಿಯನ್ನು ಅನುಕರಣೆಗೆ ಯತ್ನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Published on

ನವದೆಹಲಿ: ಲೋಕಸಭೆಯಲ್ಲಿ ವೀಕ್ಷಕರ ಗ್ಯಾಲರಿಯಿಂದ ಚೇಂಬರ್ ಗೆ ನುಗ್ಗಿ ಭದ್ರತಾ ಉಲ್ಲಂಘನೆ ಮಾಡಿದ ಆರೋಪಿಗಳು ಭಗತ್ ಸಿಂಗ್ ಮಾದರಿಯನ್ನು ಅನುಕರಣೆಗೆ ಯತ್ನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಭಾಗಿಯಾಗಿರುವ ಮನೋರಂಜನ್ ಡಿ ಎಂಬಾತ, ಭಗತ್ ಸಿಂಗ್ ಫ್ಯಾನ್ ಕ್ಲಬ್ ಎಂಬ ಸಾಮಾಜಿಕ ಜಾಲತಾಣ ಪೇಜ್ ನೊಂದಿಗೆ ಗುರುತಿಸಿಕೊಂಡಿದ್ದ, ಆತ ಕ್ರಾಂತಿಕಾರಿ ಮಾದರಿಯ ಆಲೋಚನೆಗಳನ್ನು ಹೊಂದಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮನೋರಂಜನ್ ಮೈಸೂರಿನ ಮೂಲದವನಾಗಿದ್ದು, ಘಟನೆ ನಡೆದ ಬೆನ್ನಲ್ಲೇ ಮೈಸೂರು ಪೊಲೀಸರು ಕಾರ್ಯಪ್ರವೃತ್ತರಾಗಿ ಆತನ ಹಿನ್ನೆಲೆ ಪರಿಶೀಲನೆ ನಡೆಸಲು ಮುಂದಾದರು. ಈ ವೇಳೆ ಆತ ಭಗತ್ ಸಿಂಗ್ ಫ್ಯಾನ್ ಕ್ಲಬ್ ಜೊತೆ ಗುರುತಿಸಿಕೊಂಡಿರುವುದು ಕಂಡುಬಂಡಿದೆ.

"ನಾವು ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಕಂಡಿಲ್ಲ. ಆತ  ಮೇಲ್ನೋಟಕ್ಕೆ ಶಾಂತ ವ್ಯಕ್ತಿಯಂತೆ ತೋರುತ್ತದೆ. ಆದರೆ ಆತ  ಓದಿದ ಪುಸ್ತಕಗಳನ್ನು ನೋಡಿದಾಗ 'ಕ್ರಾಂತಿಕಾರಿ ಮನಸ್ಥಿತಿ' ಇರುವವನು ಎಂಬುದು ಬಹಿರಂಗವಾಗಿದೆ ಎಂದು ಎಸಿಪಿ ಪಿಟಿಐಗೆ ತಿಳಿಸಿದ್ದಾರೆ.

1931 ರಲ್ಲಿ ಬ್ರಿಟಿಷರು 23ರ ವಯಸ್ಸಿನ ಭಗತ್ ಸಿಂಗ್ ನ್ನು ಬ್ರಿಟೀಷರು ಗಲ್ಲಿಗೇರಿಸಿದ್ದರು. ಮನೋರಂಜನ್ ಭಗತ್ ಸಿಂಗ್ ಅವರ ಅಭಿಮಾನಿಯಾಗಿರಬಹುದು ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಗತ್ ಸಿಂಗ್ ಮತ್ತು ಗುಂಪು ಮಾಡಿದ್ದನ್ನು ಅವರು ಪುನರಾವರ್ತಿಸಲು ಬಯಸುತ್ತಿರುವಂತೆ ತೋರುತ್ತಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 8, 1929 ರಂದು ಭಗತ್ ಸಿಂಗ್ ಮತ್ತು ಇತರರು ದೆಹಲಿಯ ಸೆಂಟ್ರಲ್ ಅಸೆಂಬ್ಲಿಯ ಮೇಲೆ ಸಾಂಕೇತಿಕವಾಗಿ ಬಾಂಬ್ ಸ್ಫೋಟಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com