ಎಲ್‌ಒಸಿಯಾದ್ಯಂತ ಲಾಂಚ್‌ಪ್ಯಾಡ್‌ಗಳಲ್ಲಿ 250ಕ್ಕೂ ಹೆಚ್ಚು ಭಯೋತ್ಪಾದಕರಿದ್ದಾರೆ: ಬಿಎಸ್‌ಎಫ್

ಮತ್ತೊಮ್ಮೆ ಪಾಕಿಸ್ತಾನದಿಂದ ನುಸುಳುಕೋರರನ್ನು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ನುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಶ್ರೀನಗರ: ಮತ್ತೊಮ್ಮೆ ಪಾಕಿಸ್ತಾನದಿಂದ ನುಸುಳುಕೋರರನ್ನು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ನುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ. 

ಗುಪ್ತಚರ ಪ್ರಕಾರ, ಪ್ರಸ್ತುತ ಭಾರತದ ಗಡಿಯೊಳಗೆ ನುಗ್ಗಲು 250ಕ್ಕೂ ಹೆಚ್ಚು ಭಯೋತ್ಪಾದಕರು ಪ್ರಯತ್ನಿಸುತ್ತಿದ್ದಾರೆ. ಗಡಿಯಾಚೆಗಿನ ಲಾಂಚಿಂಗ್ ಪ್ಯಾಡ್‌ಗಳಲ್ಲಿ 250ಕ್ಕೂ ಹೆಚ್ಚು ಉಗ್ರರು ನೆಲೆಸಿದ್ದು ನಮಗೆ ಗುಪ್ತಚರ ಮಾಹಿತಿ ಸಿಕ್ಕಿದೆ ಎಂದು ಸೇನೆ (ಗಡಿ ಭದ್ರತಾ ಪಡೆ) ಹೇಳಿದೆ. ನುಸುಳುಕೋರರು ಮತ್ತು ತರಬೇತಿ ಪಡೆಯುವವರನ್ನು ತಡೆಯಲು ನಾವು ಸಿದ್ಧರಿದ್ದೇವೆ ಎಂದು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಆಕ್ರಮಿತ ಕಾಶ್ಮೀರದಲ್ಲಿರುವ ಲಾಂಚ್ ಪ್ಯಾಡ್‌ಗಳಲ್ಲಿ ಸುಮಾರು 250 ರಿಂದ 300 ಭಯೋತ್ಪಾದಕ ಗಡಿ ದಾಟಲು ಕಾದುಕುಳಿತಿದ್ದಾರೆ. ಹೀಗಾಗಿ ಗಡಿಯಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಗಡಿಯಾಚೆಯಿಂದ ಯಾವುದೇ ನುಸುಳುಕೋರರ ಯತ್ನವನ್ನು ವಿಫಲಗೊಳಿಸುತ್ತೇವೆ ಎಂದು ಅಧಿಕಾರಿ ತಿಳಿಸಿದ್ದಾರೆ. 

ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಜನರು ನಮ್ಮೊಂದಿಗೆ ಸಹಕರಿಸಿದರೆ, ನಾವು ಉತ್ತಮ ರೀತಿಯಲ್ಲಿ ಸೃಜನಶೀಲ ಬೆಳವಣಿಗೆಯನ್ನು ಮುಂದುವರಿಸಬಹುದು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com