
ದರ್ಭಾಂಗಾ: ರಾಷ್ಟ್ರವನ್ನು ಬೆಚ್ಚಿ ಬೀಳಿಸಿದ ಸಂಸತ್ ಭದ್ರತಾ ಲೋಪ ಘಟನೆ ನಡೆದು ಮೂರು ವಾರ ಕಳೆದರೂ ಅದರ ಮಾಸ್ಟರ್ ಮೈಂಡ್ ಲಲಿತ್ ಝಾ ಅವರ ಪೋಷಕರು ಇನ್ನೂ ನಂಬುವ ಸ್ಥಿತಿಯಲ್ಲಿಲ್ಲ.
ಬಿಹಾರದ ದರ್ಭಾಂಗಾ ಜಿಲ್ಲೆಯ ರಾಮ್‌ಪುರ ಉದಯ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಲಲಿತ್ ಅವರ ತಂದೆ ದೇವಾನಂದ್, "ನನ್ನ ಮಗನ ಬಂಧನದ ಬಗ್ಗೆ ಇತರ ಜನರ ಮೂಲಕ ನನಗೆ ತಿಳಿಯಿತು. ನೀವೆಲ್ಲರೂ ನೋಡುವಂತೆ, ನಮ್ಮಲ್ಲಿ ಟಿವಿ ಸೆಟ್ ಕೂಡಾ ಇಲ್ಲ" ಎಂದರು.
ದಿಗ್ಭ್ರಮೆಗೊಂಡಂತೆ ಕಾಣುತ್ತಿದ್ದ ಅವರ ಪತ್ನಿ ಮಂಜುಳಾ ಗದ್ಗದಿತರಾಗಿ "ನನ್ನ ಮಗ ರೌಡಿ ಅಲ್ಲ. ತಪ್ಪುಗಳನ್ನು ಮಾಡುತ್ತಿರಲಿಲ್ಲ. ಜನರಿಗೆ ಸಹಾಯ ಮಾಡುವುದನ್ನು ಇಷ್ಟಪಡುವವನು. ಮೂರು ಬಾರಿ ರಕ್ತದಾನ ಮಾಡಿದ್ದಾನೆ" ಎಂದು ಗೋಳಾಡಿದರು.
ದಂಪತಿಗಳು ತಮ್ಮ 32 ವರ್ಷದ ಮಗನನ್ನು ಕೊನೆಯ ಬಾರಿಗೆ ನೋಡಿ ಒಂದು ವಾರ ಕಳೆದಿದೆ. ಎರಡು ದಿನಗಳ ಹಿಂದೆ ನಾಲ್ವರ ಪೈಕಿ ಇಬ್ಬರು ಲೋಕಸಭೆಯ ಸಂದರ್ಶಕರ ಗ್ಯಾಲರಿಗೆ ಪ್ರವೇಶಿಸಿದರು. ಸಂಸತ್ತಿನ ಕಟ್ಟಡದೊಳಗೆ ಹಳದಿ ಹೊಗೆ ಸೂಸುವ ಟ್ಯೂಬ್ ಗಳನ್ನು ಕೊಂಡೊಯ್ದಿದ್ದರು. ಹಳೆಯ ಸಂಸತ್ ಭವನದಲ್ಲಿ 2001 ರ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದೇ ನಡೆದ ಈ ಭದ್ರತಾ ಲೋಪ ಇಡೀ ರಾಷ್ಟ್ರವನ್ನು ಬೆಚ್ಚಿ ಬೀಳಿಸಿತು.
ಡಿಸೆಂಬರ್ 10 ರಂದು ಅವರ ಪೋಷಕರು ದರ್ಭಾಂಗ್ ರೈಲು ಹತ್ತಿದಾಗ ಕೋಲ್ಕತ್ತಾದಲ್ಲಿಯೇ ಉಳಿದುಕೊಂಡಿದ್ದ ಲಲಿತ್ ಝಾ, ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಲಾಗಿದೆ. ಇದು ಇಂಡಿಯಾ ಬಣದ ಅಂಗಪಕ್ಷವಾಗಿದೆ. ಈ ಆರೋಪವನ್ನು ಟಿಎಂಸಿ ತೀವ್ರವಾಗಿ ನಿರಾಕರಿಸಿದೆ. ಆದಾಗ್ಯೂ, ಅವರ ತಂದೆತಾಯಿಗಳು ತನ್ನ ಮಗನ ಕುರಿತು ಎದ್ದಿರುವ ಆರೋಪಗಳನ್ನು ನಿರಾಕರಿಸಿದರು.
"ನನ್ನ ಮಗ ಟ್ಯೂಷನ್ ಮಾಡುವ ಮೂಲಕ ನನಗೆ ಆರ್ಥಿಕವಾಗಿ ಸಹಾಯ ಮಾಡಲು ಪ್ರಾರಂಭಿಸಿದ ಒಬ್ಬ ಉಜ್ವಲ ವಿದ್ಯಾರ್ಥಿಯಾಗಿದ್ದ. ಛಾತ್ ಸಮಯದಲ್ಲಿ ಒಟ್ಟಿಗೆ ದರ್ಭಾಂಗಕ್ಕೆ ಬರಬೇಕಾಗಿತ್ತು. ನಾವು ಪ್ರತಿ ವರ್ಷ ಹಾಗೆ ಮಾಡುತ್ತಿದ್ದೆವು. ಈ ಬಾರಿ ವಿಪರೀತ ರಶ್ ಇದ್ದರಿಂದ ನಮಗೆ ಟಿಕೆಟ್ ಗಳು ಸಿಗಲಿಲ್ಲ. ಆದ್ದರಿಂದ ನಾವು ಭೇಟಿಯನ್ನು ಮುಂದೂಡಬೇಕಾಯಿತು ಎಂದು ಲಲಿತ್ ಝಾ ಅವರ ತಂದೆ ನೆನಪಿಸಿಕೊಂಡರು.
Advertisement