ಕೋವಿಡ್ ರೂಪಾಂತರಿ JN.1: ಆತಂಕಪಡಬೇಕಾದ ಅಗತ್ಯವಿಲ್ಲ- ಕೇರಳ ಆರೋಗ್ಯ ಸಚಿವರು

ಕೇರಳದಲ್ಲಿ ಪತ್ತೆಯಾಗಿರುವ ಕೋವಿಡ್ ರೂಪಾಂತರಿ JN.1 ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರ: ಕೇರಳದಲ್ಲಿ ಪತ್ತೆಯಾಗಿರುವ ಕೋವಿಡ್ ರೂಪಾಂತರಿ JN.1 ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ಹೇಳಿದ್ದಾರೆ.

ಹೊಸ ರೂಪಾಂತರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಾರ್ಜ್, ಇದು ತಿಂಗಳ ಹಿಂದೆ ಸಿಂಗಾಪುರ್ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾದ ಭಾರತೀಯ ಪ್ರಯಾಣಿಕರಲ್ಲಿ ಪತ್ತೆಯಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಇದು ರೂಪಾಂತರಿಯಾಗಿದ್ದು, ಇಲ್ಲಿಯೂ ಕಕಂಡುಬಂದಿದೆ ಎಂದು ತಿಳಿಸಿದರು.

ಜೀನೋಮ್ ಸೀಕ್ವೆನ್ಸಿಂಗ್ ಮೂಲಕ ಕೋವಿಡ್ ರೂಪಾಂತರಿಯನ್ನು ಕೇರಳ ಪತ್ತೆ ಹಚ್ಚಿದೆ. ಆದರೆ, ಆತಂಕ ಪಡುವ ಅಗತ್ಯವಿಲ್ಲ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಆದಾಗ್ಯೂ, ಜನರು ಜಾಗ್ರತೆ ವಹಿಸಬೇಕು, ಅದರಲ್ಲೂ, ಹೆಚ್ಚಿನ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು. 

ಹೊಸ ರೂಪಾಂತರ ದೇಶದ ಇತರ ಭಾಗಗಳಲ್ಲಿಯೂ ಕಂಡುಬಂದಿದೆ. ಆದರೆ ದೃಢವಾದ ಆರೋಗ್ಯ ವ್ಯವಸ್ಥೆಯಿಂದಾಗಿ ಕೇರಳದಲ್ಲಿ ಯಾವುದೇ ಆತಂಕದ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಡಿಸೆಂಬರ್ 8 ರಂದು ತಿರುವನಂತಪುರಂ ಜಿಲ್ಲೆಯ ಕರಕುಲಂನಲ್ಲಿ ಆರ್‌ಟಿ-ಪಿಸಿಆರ್ ಪಾಸಿಟಿವ್ ಮಾದರಿಯಲ್ಲಿ ಪ್ರಕರಣ ಪತ್ತೆಯಾಗಿದೆ ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ ರಾಜೀವ್ ಬಹ್ಲ್ ಹೇಳಿದ್ದಾರೆ.79 ವರ್ಷದ ಮಹಿಳೆ ಸೋಂಕಿನ ಸೌಮ್ಯ ಲಕ್ಷಣಗಳನ್ನು ಹೊಂದಿದ್ದರು ಮತ್ತು ಅಂದಿನಿಂದ ಅವರು ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com