ಉಪ ರಾಷ್ಟ್ರಪತಿ ಧಂಖರ್ ಬಗ್ಗೆ ಅಪಹಾಸ್ಯದ ಮಿಮಿಕ್ರಿ: ರಾಷ್ಟ್ರಪತಿ, ಪ್ರಧಾನಿ ಸೇರಿ ಹಲವರಿಂದ ಖಂಡನೆ, ದೂರು ದಾಖಲು

ಸಂಸತ್ತು ಭವನದ ಹೊರಗೆ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಸಿಂಗ್ ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಬಗ್ಗೆ ವ್ಯಂಗ್ಯವಾಗಿ ಅಪಹಾಸ್ಯ ಮಾಡುತ್ತಾ ಮಿಮಿಕ್ರಿ ಮಾಡಿದ್ದು, ಈ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಹ ಅದನ್ನು ವಿಡಿಯೊ ಚಿತ್ರೀಕರಣ ಮಾಡಿದರೆ ಇನ್ನು ಹಲವು ಸಂಸದರು ಅದಕ್ಕೆ ಕೇಕೆ ಹಾಕಿ ನಕ್ಕಿರುವ ವಿಷಯ ತೀವ್ರ ವಿವಾದಕ್ಕೀಡುಮಾಡಿದೆ.
ಅಮಾನತುಗೊಂಡ ಸಂಸದರೊಂದಿಗೆ ಪ್ರತಿಭಟನೆಯ ಸಂದರ್ಭದಲ್ಲಿ ಟಿಎಂಸಿ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯಸಭಾ ಸಭಾಪತಿ ಜಗದೀಪ್ ಧಂಖರ್ ಅವರನ್ನು ಅಪಹಾಸ್ಯ ಮಾಡುತ್ತಿರುವುದು
ಅಮಾನತುಗೊಂಡ ಸಂಸದರೊಂದಿಗೆ ಪ್ರತಿಭಟನೆಯ ಸಂದರ್ಭದಲ್ಲಿ ಟಿಎಂಸಿ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯಸಭಾ ಸಭಾಪತಿ ಜಗದೀಪ್ ಧಂಖರ್ ಅವರನ್ನು ಅಪಹಾಸ್ಯ ಮಾಡುತ್ತಿರುವುದು

ನವ ದೆಹಲಿ: ಸಂಸತ್ತು ಭವನದ ಹೊರಗೆ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಸಿಂಗ್ ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಬಗ್ಗೆ ವ್ಯಂಗ್ಯವಾಗಿ ಅಪಹಾಸ್ಯ ಮಾಡುತ್ತಾ ಮಿಮಿಕ್ರಿ ಮಾಡಿದ್ದು, ಈ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಹ ಅದನ್ನು ವಿಡಿಯೊ ಚಿತ್ರೀಕರಣ ಮಾಡಿದರೆ ಇನ್ನು ಹಲವು ಸಂಸದರು ಅದಕ್ಕೆ ಕೇಕೆ ಹಾಕಿ ನಕ್ಕಿರುವ ವಿಷಯ ತೀವ್ರ ವಿವಾದಕ್ಕೀಡುಮಾಡಿದೆ.

ಈ ಬಗ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಅವರಿಗೆ ಕರೆ ಮಾಡಿ ತೀವ್ರ ನೋವು ವ್ಯಕ್ತಪಡಿಸಿದ್ದಾರೆ ಎಂದು ಉಪ ರಾಷ್ಟ್ರಪತಿ ಕಚೇರಿ ತಿಳಿಸಿದೆ.

ಪ್ರಧಾನ ಮಂತ್ರಿಗಳು ದೂರವಾಣಿ ಕರೆ ಮಾಡಿ ಉಪ ರಾಷ್ಟ್ರಪತಿಗಳ ಜೊತೆ ಮಾತನಾಡುತ್ತಾ ನೋವು ಹಂಚಿಕೊಂಡರು. ಪವಿತ್ರ ಸಂಸತ್ತಿನ ಸಂಕೀರ್ಣದಲ್ಲಿ ಕೆಲವು ಸಂಸದರ ಮಿಮಿಕ್ರಿ ರೀತಿ ತೀವ್ರ ನೋವನ್ನು ವ್ಯಕ್ತಪಡಿಸಿದರು ಎಂದು ಉಪ ರಾಷ್ಟ್ರಪತಿ ಕಾರ್ಯಾಲಯ ತಿಳಿಸಿದೆ. 

ನಾನು ಇಪ್ಪತ್ತು ವರ್ಷಗಳಿಂದ ಇಂತಹ ಅವಮಾನಗಳನ್ನು ಸ್ವೀಕರಿಸುತ್ತಿದ್ದೇನೆ ಮತ್ತು ಎದುರಿಸುತ್ತಿದ್ದೇನೆ. ಆದರೆ ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಹದ್ದೆಯಲ್ಲಿರುವವರಿಗೆ ಈ ರೀತಿ ಪರಿಸ್ಥಿತಿ ಉಂಟಾಗಬಹುದು ಎಂದು ನಾನು ಭಾವಿಸಿಲ್ಲ. ಸಂಸತ್ತಿನಲ್ಲಿ ನಡೆದ ಘಟನೆ ದುರದೃಷ್ಟಕರವಾಗಿದೆ ಎಂದು ಅವರು ನನಗೆ ಹೇಳಿದರು ಎಂದು ಧಂಖರ್ ತಿಳಿಸಿದ್ದಾರೆ. ಇಂತಹ ಘಟನೆಗಳು ತನ್ನ ಕರ್ತವ್ಯವನ್ನು ಮಾಡುವುದನ್ನು ತಡೆಯುವುದಿಲ್ಲ ಎಂದು ಧನ್ ಕರ್ ಪ್ರಧಾನಿಗೆ ತಿಳಿಸಿದರು.

ಕೆಲವರ ಚೇಷ್ಟೆಗಳು ನನ್ನ ಕರ್ತವ್ಯವನ್ನು ನಿರ್ವಹಿಸಲು ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ತತ್ವಗಳನ್ನು ಎತ್ತಿಹಿಡಿಯುವುದನ್ನು ತಡೆಯುವುದಿಲ್ಲ. ನನ್ನ ಮೌಲ್ಯಗಳಿಗೆ ನಾನು ಬದ್ಧನಾಗಿದ್ದೇನೆ. ಯಾವುದೇ ಅವಮಾನಗಳು ನನ್ನ ಆದರ್ಶಗಳನ್ನು ಬದಲಿಸುವುದಿಲ್ಲ ಎಂದರು. 

ರಾಷ್ಟ್ರಪತಿ ಖೇದ: ಸಂಸತ್ತಿನ ಸಂಕೀರ್ಣದಲ್ಲಿ ಉಪ ರಾಷ್ಟ್ರಪತಿಗಳಾದ ಜಗದೀಪ್ ಧಂಖರ್ ಅವರನ್ನು ಅವಮಾನಿಸಲಾಗಿದೆ ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಖೇದ ವ್ಯಕ್ತಪಡಿಸಿದ್ದಾರೆ, ಚುನಾಯಿತ ಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸ್ವತಂತ್ರರು ಆದರೆ ಅದು ಘನತೆ ಮತ್ತು ಸೌಜನ್ಯಗಳನ್ನು ಹೊಂದಿರಬೇಕು ಎಂದಿದ್ದಾರೆ. 

ನಮ್ಮ ಗೌರವಾನ್ವಿತ ಉಪ ರಾಷ್ಟ್ರಪತಿಗಳನ್ನು ಸಂಸತ್ತಿನ ಸಂಕೀರ್ಣದಲ್ಲಿ ಹೇಗೆ ಅವಮಾನಿಸಲಾಗಿದೆ ಎಂಬುದನ್ನು ನೋಡಿ ನಾನು ದಿಗ್ಭ್ರಮೆಗೊಂಡಿದ್ದೇನೆ. ಚುನಾಯಿತ ಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮುಕ್ತವಾಗಿರುತ್ತಾಕೆ. ಆದರೆ ಅವರ ಅಭಿವ್ಯಕ್ತಿ ಘನತೆ ಮತ್ತು ಸೌಜನ್ಯದ ಮಾನದಂಡಗಳಾಗಿರಬೇಕು. ಸಂಸತ್ತು ನಾವು ಹೆಮ್ಮೆಪಡುವ ಕೇಂದ್ರವಾಗಿದೆ. ಸಂಸತ್ತು ಸದಸ್ಯರು ಭಾರತದ ಜನರು ಅದನ್ನು ಎತ್ತಿಹಿಡಿಯುವ ನಿರೀಕ್ಷೆಯಲ್ಲಿರುತ್ತಾರೆ ಎಂದು ಮುರ್ಮು ಟ್ವೀಟ್ ನಲ್ಲಿ ಹೇಳಿದ್ದಾರೆ.

ಈ ಘಟನೆ ಕುರಿತು ಆಡಳಿತಾರೂಢ ಬಿಜೆಪಿಯಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಘಟನೆ ಹಿನ್ನೆಲೆಯಲ್ಲಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಇಂದು ಉಪ ರಾಷ್ಟ್ರಪತಿ ಧನ್ ಕರ್ ಅವರನ್ನು ಭೇಟಿ ಮಾಡಿ ಸಮಾಧಾನ ಹೇಳಿದರು. ತೃಣಮೂಲ ಸಂಸದರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ದೂರು ದಾಖಲು: ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಸಂಸತ್ತಿನ ಆವರಣದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರನ್ನು ಅಪಹಾಸ್ಯ ಮಾಡಿ ಮಿಮಿಕ್ರಿ ಮಾಡಿದ್ದಕ್ಕಾಗಿ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

ನಿನ್ನೆ ಸಂಜೆ ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ವಕೀಲ ಅಭಿಷೇಕ್ ಗೌತಮ್ ಅವರು ದೂರು ನೀಡಿದ್ದು, ಅದನ್ನು ದೆಹಲಿ ಜಿಲ್ಲಾ ಪೊಲೀಸರಿಗೆ ಪ್ರಕರಣ ವರ್ಗಾಯಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗೌತಮ್ ತಮ್ಮ ದೂರಿನಲ್ಲಿ ಭಾರತದ ಉಪರಾಷ್ಟ್ರಪತಿ ಹುದ್ದೆಗೆ, ಅವರ ಜಾತಿ ಮತ್ತು ಅವರ ರೈತ ಮತ್ತು ವಕೀಲ ಹಿನ್ನೆಲೆಯನ್ನು ಅವಮಾನಿಸುವ ರೀತಿಯಲ್ಲಿ ವೀಡಿಯೊ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಟಿಎಂಸಿ ಸಂಸದ ಮತ್ತು ಇತರರ ವಿರುದ್ಧ ಐಪಿಸಿ ಮತ್ತು ಐಟಿ ಕಾಯ್ದೆಯ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

ಟಿವಿ ನ್ಯೂಸ್ ಚಾನೆಲ್‌ಗಳಲ್ಲಿ ಮಿಮಿಕ್ರಿ ವಿಡಿಯೋ ಕ್ಲಿಪ್ ಪ್ರಸಾರವಾದ ನಂತರ ರಾಜ್ಯಸಭಾ ಸಭಾಪತಿ ಜಗದೀಪ್ ಧಂಖರ್ ಅವರು ಸದನದಲ್ಲಿ ನಿನ್ನೆ ಈ ವಿಷಯವನ್ನು ಪ್ರಸ್ತಾಪಿಸಿದರು. ತಮ್ಮ ರೈತ ಮತ್ತು ಜಾಟ್ ಹಿನ್ನೆಲೆಯವರನ್ನು ಗುರಿಯಾಗಿಸಿಕೊಂಡು ವೈಯಕ್ತಿಕವಾಗಿ ನೋವಾಗಿದೆ ಎಂದು ಧಂಖರ್ ರಾಜ್ಯಸಭೆಯಲ್ಲಿ ತಮ್ಮ ವೇದನೆಯನ್ನು ಹೊರಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com