ಕ್ರಿಸ್ ಮಸ್ ಗೆ ಕೇಂದ್ರ ಸರ್ಕಾರದ ಗಿಫ್ಟ್: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 39.50 ರು. ಇಳಿಕೆ

ಕ್ರಿಸ್ ಮಸ್  ಹೊಸ ವರ್ಷದ ಮುನ್ನವೇ ಭಾರತೀಯರಿಗೆ ಉಡುಗೊರೆ ಸಿಕ್ಕಿದೆ. ವಾಣಿಜ್ಯ ಬಳಕೆಯ 19 ಕೆ.ಜಿಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 39.50 ರು. ಇಳಿಕೆ ಮಾಡಲಾಗಿದೆ. ಇದೇ ವೇಳೆ, ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೆ ಬದಲಾವಣೆ ಆಗಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕ್ರಿಸ್ ಮಸ್  ಹೊಸ ವರ್ಷದ ಮುನ್ನವೇ ಭಾರತೀಯರಿಗೆ ಉಡುಗೊರೆ ಸಿಕ್ಕಿದೆ. ವಾಣಿಜ್ಯ ಬಳಕೆಯ 19 ಕೆ.ಜಿಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 39.50 ರು. ಇಳಿಕೆ ಮಾಡಲಾಗಿದೆ. ಇದೇ ವೇಳೆ, ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೆ ಬದಲಾವಣೆ ಆಗಿಲ್ಲ.

ಆಯಿಲ್ ಮಾರ್ಕೆಟಿಂಗ್ ಕಂಪನಿಯು ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಕಡಿಮೆ ಮಾಡಿದೆ. ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ  39 ರೂಪಾಯಿ ಇಳಿಕೆಯಾಗಿದೆ. ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆಗೂ ಮುನ್ನವೇ ತೈಲ ಮಾರಾಟ ಸಂಸ್ಥೆ ದರ ಇಳಿಕೆಯ ಘೋಷಣೆ ಮಾಡಿದೆ.

ಈ ಹಿಂದೆ ಡಿಸೆಂಬರ್ 1 ರಂದು 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಬದಲಾಯಿಸಲಾಗಿತ್ತು. ಆಗ ಸಿಲಿಂಡರ್ ಬೆಲೆಯನ್ನು  21 ರೂ. ಹೆಚ್ಚಿಸಲಾಗಿತ್ತು.  ಆದರೆ, ಅದಕ್ಕೂ ಮುನ್ನ ನವೆಂಬರ್ 16 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 57 ರೂಪಾಯಿ ಕಡಿತಗೊಳಿಸಲಾಗಿತ್ತು. ಕೆಲವು ಸಮಯದಿಂದ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಬಹುತೇಕ ಪ್ರತಿ ತಿಂಗಳು ಬದಲಾವಣೆ ಕಂಡುಬರುತ್ತಿದೆ. ಸಿಲಿಂಡರ್ ದರವನ್ನು ಪದೇ ಪದೇ ಪರಿಷ್ಕರಿಸಲಾಗುತ್ತಿದೆ.

ವಿವಿಧ ನಗರಗಳಲ್ಲಿ 19 ಕೆ.ಜಿ ಎಲ್.ಪಿ.ಜಿ ಸಿಲಿಂಡರ್ ಬೆಲೆ :
ದೆಹಲಿ - 1757.50 ರೂ.
ಕೋಲ್ಕತ್ತಾ - 1869 ರೂ.
ಮುಂಬೈ - 1710 ರೂ.
ಚೆನ್ನೈ - 1929.50 ರೂ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com