ಅಮೇರಿಕಾದಲ್ಲಿ ದೇವಾಲಯ ವಿರೂಪ ಪ್ರಕರಣ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಕ್ರಿಯೆ ಹೀಗಿದೆ...

ಅಮೇರಿಕಾದಲ್ಲಿ ದೇವಾಲಯವನ್ನು ವಿರೂಪಗೊಳಿಸಿದ ಪ್ರಕರಣದ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಕ್ರಿಯೆ ನೀಡಿದ್ದು, ಭಾರತದ ಹೊರಗಿರುವ ಪ್ರತ್ಯೇಕತಾವಾದಿ ಹಾಗೂ ತೀವ್ರವಾದಿ ಶಕ್ತಿಗಳನ್ನು ಪ್ರೋತ್ಸಾಹಿಸಬಾರದು ಎಂದು ಹೇಳಿದ್ದಾರೆ. 
ಎಸ್ ಜೈಶಂಕರ್
ಎಸ್ ಜೈಶಂಕರ್

ಕ್ಯಾಲಿಫೋರ್ನಿಯಾ: ಅಮೇರಿಕಾದಲ್ಲಿ ದೇವಾಲಯವನ್ನು ವಿರೂಪಗೊಳಿಸಿದ ಪ್ರಕರಣದ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಕ್ರಿಯೆ ನೀಡಿದ್ದು, ಭಾರತದ ಹೊರಗಿರುವ ಪ್ರತ್ಯೇಕತಾವಾದಿ ಹಾಗೂ ತೀವ್ರವಾದಿ ಶಕ್ತಿಗಳನ್ನು ಪ್ರೋತ್ಸಾಹಿಸಬಾರದು ಎಂದು ಹೇಳಿದ್ದಾರೆ. 

ಗಾಂಧಿನಗರದಲ್ಲಿ ರಾಷ್ಟ್ರೀಯ ರಕ್ಷ ವಿಶ್ವವಿದ್ಯಾಲಯದಲ್ಲಿ ನಡೆದ 3 ನೇ ಘಟಿಕೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು. 

ನಾನು ಸುದ್ದಿಯನ್ನು ನೋಡಿದ್ದೇನೆ. ಈ ಬಗ್ಗೆ ನಾವು ಕಳವಳ ಹೊಂದಿದ್ದೇವೆ. ಭಾರತದ ಹೊರಗಿನ ಉಗ್ರಗಾಮಿಗಳು ಮತ್ತು ಪ್ರತ್ಯೇಕತಾವಾದಿ ಶಕ್ತಿಗಳಿಗೆ ಎಲ್ಲಿಯೂ ಜಾಗ ಸಿಗಬಾರದು. ಏನಾಯಿತು ಎಂಬುದರ ಕುರಿತು ನಮ್ಮ ದೂತಾವಾಸವು (ಯುಎಸ್) ಸರ್ಕಾರ ಮತ್ತು ಅಲ್ಲಿನ ಪೊಲೀಸರಿಗೆ ದೂರು ನೀಡಿದೆ ಮತ್ತು ಈ ವಿಷಯವನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ನಾನು ನಂಬುತ್ತೇನೆ, ”ಎಂದು ಜೈಶಂಕರ್ ಘಟನೆಯ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಶುಕ್ರವಾರ ಬೆಳಗ್ಗೆ 8.35ರ ಸುಮಾರಿಗೆ ಶ್ರೀ ಸ್ವಾಮಿನಾರಾಯಣ ಮಂದಿರ ಹಿಂದೂ ದೇವಸ್ಥಾನದ ಗೋಡೆಗಳ ಮೇಲೆ ಖಲೀಸ್ಥಾನ್ ಎಂದು ಬರೆದು ವಿರೂಪಗೊಳಿಸಲಾಗಿತ್ತು ಈ ಕುರಿತು ದೂರು ಸ್ವೀಕರಿಸಿದ್ದೇವೆ ಎಂದು ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಪೊಲೀಸ್ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com