ಕೆವೈಸಿ ಅಪ್ ಡೇಟ್ ಮೆಸೇಜ್: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಖದೀಮರು; ತಿರುವನಂತಪುರಂ ನಗರ ಕಮಿಷನರ್ ಕಚೇರಿ ಖಾತೆಗೆ ಕನ್ನ!

ಕಮಿಷನರ್ ಕಚೇರಿ ಅಕೌಂಟ್ ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಕ್ಯಾಷಿಯರ್, ಸ್ಕ್ಯಾಮರ್‌ಗಳು ಕಳುಹಿಸಿದ  ಲಿಂಕ್ ಕ್ಲಿಕ್ ಮಾಡಿ, ಒನ್-ಟೈಮ್ ಪಾಸ್‌ವರ್ಡ್ (OTP) ನೀಡಿದ ನಂತರ  ಹಣ ಕಳೆದು ಹೋಗಿದೆ. ಡಿಸೆಂಬರ್ 18 ರಂದು ಈ ಘಟನೆ ನಡೆದಿದ್ದು, ಹಣವನ್ನು ವರ್ಗಾಯಿಸಿದ ಖಾತೆಯನ್ನು ಬ್ಲಾಕ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರಂ: ಸೈಬರ್ ವಂಚನೆಗಳ ಬಗ್ಗೆ ಜಾಗರೂಕರಾಗಿರಿ ಎಂದು ಸಾರ್ವಜನಿಕರಿಗೆ ಆಗಾಗ್ಗೆ ಸೂಚಿಸುವ ಪೊಲೀಸ್ ಇಲಾಖೆಯೆ ವಂಚನೆಗೊಳಗಾಗಿದೆ, ತಿರುವನಂತಪುರಂ ನಗರ ಪೊಲೀಸ್ ಕಮಿಷನರ್ ಕಚೇರಿಯ ಅಧಿಕೃತ ಖಾತೆಯಿಂದ 25,000 ರೂ. ಹಣವನ್ನು ಸೈಬರ್ ವಂಚಕರು ಲಪಾಟಿಯಿಸಿದ್ದಾರೆ.

ಕಮಿಷನರ್ ಕಚೇರಿ ಅಕೌಂಟ್ ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಕ್ಯಾಷಿಯರ್, ಸ್ಕ್ಯಾಮರ್‌ಗಳು ಕಳುಹಿಸಿದ  ಲಿಂಕ್ ಕ್ಲಿಕ್ ಮಾಡಿ, ಒನ್-ಟೈಮ್ ಪಾಸ್‌ವರ್ಡ್ (OTP) ನೀಡಿದ ನಂತರ  ಹಣ ಕಳೆದು ಹೋಗಿದೆ. ಡಿಸೆಂಬರ್ 18 ರಂದು ಈ ಘಟನೆ ನಡೆದಿದ್ದು, ಹಣವನ್ನು ವರ್ಗಾಯಿಸಿದ ಖಾತೆಯನ್ನು ಬ್ಲಾಕ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಿಟಿ ಸೈಬರ್ ಪೊಲೀಸ್ ಠಾಣೆಯ ಎಫ್‌ಐಆರ್ ಪ್ರಕಾರ, ಕಮಿಷನರ್ ಕಚೇರಿಯ  ಅಕೌಂಟ್ ಆಫೀಸರ್ ಹೆಸರಿನಲ್ಲಿರುವ ಅಧಿಕೃತ ಖಾತೆಯಿಂದ ಡ್ರಾ ಮಾಡಲಾಗಿದೆ. ವಹಿವಾಟುಗಳನ್ನು ನಿರ್ವಹಿಸುವ ಕ್ಯಾಷಿಯರ್ ಅವರ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಬಂದಿದ್ದು, ಬ್ಯಾಂಕ್ ಆ ದಿನವೇ ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ’ (ಕೆವೈಸಿ) ದಾಖಲೆಗಳನ್ನು ನವೀಕರಿಸಬೇಕಾಗಿದೆ ಮತ್ತು ಅವುಗಳನ್ನು ನವೀಕರಿಸದಿದ್ದರೆ ಖಾತೆಯನ್ನು ರದ್ದುಗೊಳಿಸಲಾಗುವುದು ಎಂಬ ಮೆಸೇಜ್ ಬಂದಿದೆ.

ವಂಚಕರ ಬಗ್ಗೆ ಅರಿಯದ ಕ್ಯಾಷಿಯರ್, ಲಿಂಕ್ ಕ್ಲಿಕ್ ಮಾಡಿ, ನಂತರ ತನ್ನ ಮೊಬೈಲ್ ಸಂಖ್ಯೆಗೆ ಬಂದ  ಒಟಿಪಿ ನೀಡಿದ್ದಾರೆ.  ಶೀಘ್ರದಲ್ಲೇ, ವಂಚಕರು  ಹಣವನ್ನು ತೆಗೆದುಕೊಂಡಿದ್ದಾರೆ. ಕ್ಯಾಷಿಯರ್ ಶೀಘ್ರದಲ್ಲೇ ತಪ್ಪನ್ನು ಅರ್ಥಮಾಡಿಕೊಂಡು ಅಧಿಕೃತ ದೂರು ನೀಡಿದರು. ಈ ವಿಷಯವನ್ನು ರಾಷ್ಟ್ರೀಯ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್‌ಗೆ ವರದಿ ಮಾಡಲಾಗಿದ್ದು, ಹಣಕಾಸು  ವಹಿವಾಟು ನಡೆಸಿದ ಖಾತೆಯನ್ನು ಬ್ಲಾಕ್ ಮಾಡಲಾಗಿದೆ.

ನಾಗರಿಕರಲ್ಲಿ ಸುರಕ್ಷಿತ ಸೈಬರ್ ಭದ್ರತೆ ಬಗ್ಗೆ ಸದಾ ಪ್ರತಿಪಾದಿಸುತ್ತಿರುವ ಇಲಾಖೆಗೆ ಈ ಘಟನೆಯು ಮುಜುಗರ ತಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಿಂದ ಇಲಾಖೆ ಕೆಂಗಣ್ಣಿಗೆ ಗುರಿಯಾಗಿದೆ. ಆದಾಗ್ಯೂ, ಸೈಬರ್ ಅಪರಾಧಗಳ ವಿರುದ್ಧ ಎಲ್ಲರೂ ಹೆಚ್ಚು ಜಾಗರೂಕರಾಗಬೇಕಾದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಇಲಾಖೆಯು ಕಾಲಕಾಲಕ್ಕೆ ಸೈಬರ್ ಶಿಷ್ಟಾಚಾರದ ಬಗ್ಗೆ ಸುತ್ತೋಲೆಗಳನ್ನು ಹೊರಡಿಸಿದ್ದು ಸಮವಸ್ತ್ರಧಾರಿಗಳು ಮತ್ತು ಮಂತ್ರಿ ಸಿಬ್ಬಂದಿಗಳು ಅನುಸರಿಸಬೇಕು ಎಂದು ತಿಳಿಸಿದೆ.

ಕಚೇರಿಯಲ್ಲಿ ಅನುಸರಿಸಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತು ಹಲವಾರು ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಪೊಲೀಸ್ ಮುಖ್ಯಸ್ಥರ ಸುತ್ತೋಲೆ ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಹೊರತುಪಡಿಸಿ ಸೈಬರ್ ಐಜಿ ಕೂಡ ಸುತ್ತೋಲೆ ಹೊರಡಿಸಿದ್ದಾರೆ. ಆದರೆ ಆ ಸುತ್ತೋಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಸರಿಸಲಾಗುತ್ತಿದೆಯೇ ಎಂಬ ಅನುಮಾನವಿದೆ ಎಂದು ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com