ಶಿರಡಿಗೆ ತೆರಳುತ್ತಿದ್ದಾಗ ಟ್ರಕ್‌ಗೆ SUV ಕಾರು ಡಿಕ್ಕಿ: ಗುಲ್ಬರ್ಗದ ನಾಲ್ವರು ಯಾತ್ರಾರ್ಥಿಗಳ ಸಾವು, 6 ಮಂದಿಗೆ ಗಾಯ

ಶಿರಡಿಗೆ ತೆರಳುತ್ತಿದ್ದ ಗುಲ್ಬರ್ಗ ಮೂಲದ ಯಾತ್ರಾರ್ಥಿಗಳಿದ್ದ ಎಸ್‌ಯುವಿ ಕಾರು ಮಹಾರಾಷ್ಟ್ರದ ಸೊಲ್ಲಾಪುರದ ಕರ್ಮಲಾ-ಅಹಮದ್‌ನಗರ ರಸ್ತೆಯಲ್ಲಿ ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಸೊಲ್ಲಾಪುರ (ಮಹಾರಾಷ್ಟ್ರ): ಶಿರಡಿಗೆ ತೆರಳುತ್ತಿದ್ದ ಗುಲ್ಬರ್ಗ ಮೂಲದ ಯಾತ್ರಾರ್ಥಿಗಳಿದ್ದ ಎಸ್‌ಯುವಿ ಕಾರು ಮಹಾರಾಷ್ಟ್ರದ ಸೊಲ್ಲಾಪುರದ ಕರ್ಮಲಾ-ಅಹಮದ್‌ನಗರ ರಸ್ತೆಯಲ್ಲಿ ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. 

ಚಾಲಕ ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದು ನಿಯಂತ್ರಣ ತಪ್ಪಿ ಬೆಳಗ್ಗೆ 6 ಗಂಟೆ ಸುಮಾರಿಗೆ ಎದುರಿಗೆ ಬಂದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಪಕ್ಕದ ಕಂದಕ್ಕೆ ಉರುಳಿಬಿದ್ದಿದ್ದು ಅಪಘಾತ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮಹಾರಾಷ್ಟ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಎಸ್‌ಯುವಿ ಕಾರು ವೇಗವಾಗಿ ಬಂದು ಎದುರಿಗೆ ಬರುತ್ತಿದ್ದ ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯ ಪಕ್ಕದ ಕಂದಕಕ್ಕೆ ಉರುಳಿಬಿದ್ದಿತ್ತು. ಕಾರಿನಲ್ಲಿ ಗಾಯಗೊಂಡಿದ್ದರ ಕಿರುಚಾಟವನ್ನು ಕೇಳಿದ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಗಾಯಾಗಳುಗಳನ್ನು ರಕ್ಷಿಸಿದರು. ಘಟನಾ ಸ್ಥಳಕ್ಕೆ ಜ್ಯೋತಿರಾಮ್ ಗಂಜ್ವಾಟೆ ನೇತೃತ್ವದ ಕರ್ಮಲಾ ಪೊಲೀಸರ ತಂಡವು ದುರಂತದ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು.

ಕನಿಷ್ಠ ನಾಲ್ವರು ಯಾತ್ರಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೂ ಆರು ಮಂದಿ ಗಾಯಾಳುಗಳನ್ನು ಕರ್ಮಲಾ ಉಪಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಹುಬ್ಬಳ್ಳಿಯ ಶಾರದಾ ಹಿರೇಮಠ (67), ಗುಲ್ಬರ್ಗದ ಜೆಮಿ ದೀಪಕ ಹಿರೇಮಠ (38), ಶ್ರೀಶಾಲ್ ಚಂದಗಾ ಕುಂಬಾರ (55) ಮತ್ತು ಅವರ ಪತ್ನಿ ಶಶಿಕಲಾ (50) ಎಂದು ಗುರುತಿಸಲಾಗಿದೆ.

ಗಾಯಗೊಂಡವರಲ್ಲಿ ಎಂಟು ತಿಂಗಳ ವಯಸ್ಸಿನ ನಕ್ಷತ್ರ ವಿ.ಕುಂಬಾರ್, ಕಾವೇರಿ ವಿ.ಕುಂಬಾರ್, ಸೌಮ್ಯ ಎಸ್.ಕುಂಬಾರ್ 26, ಶ್ರೀಧರ್ ಶ್ರೀಶಾಲ್ ಕುಂಬಾರ್, 24, ಶಶಿಕುಮಾರ್ ಟಿ.ಕುಂಬಾರ್ 36 ಮತ್ತು ಶ್ರೀಕಾಂತ್ ಆರ್.ಚವ್ಹಾಣ್ 27 ಸೇರಿದ್ದಾರೆ.

ಅಪಘಾತಕ್ಕೆ ನಿರ್ದಿಷ್ಠ ಕಾರಣ ತಿಳಿದುಬಂದಿಲ್ಲ. ಕರ್ಮಲಾ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಮೃತರ ಕುಟುಂಬಗಳಿಗೆ ದುರಂತದ ಬಗ್ಗೆ ಮಾಹಿತಿ ನೀಡಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com