ದೇಶ
ಶ್ರೀನಗರ-ಬಾರಾಮುಲ್ಲಾ ರಸ್ತೆಯಲ್ಲಿ ಸುಧಾರಿತ ಸ್ಫೋಟಕ ಸಾಧನ ಇರಿಸಿದ ಭಯೋತ್ಪಾದಕರು!
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ಐಇಡಿ ಇರಿಸಿರುವುದು ಪತ್ತೆಯಾಗಿದೆ.
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ಐಇಡಿ ಇರಿಸಿರುವುದು ಪತ್ತೆಯಾಗಿದೆ.
ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿ ಈ ಸುಧಾರಿತ ಸ್ಫೋಟಕ ಸಾಧನವನ್ನು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟಕ ಸಾಧನ ಪತ್ತೆಯಾಗುತ್ತಿದ್ದಂತೆಯೇ ಶ್ರೀನಗರ-ಬಾರಾಮುಲ್ಲಾದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಭದ್ರತಾ ಪಡೆಗಳು ಎಂದಿನ ಗಸ್ತಿನ ವೇಳೆ ಲಾವೇಪೋರಾದ ಹೆದ್ದಾರಿಯಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿತ್ತು. ಬಾಂಬ್ ನಿಷ್ಕ್ರಿಯ ದಳವು ಸ್ಥಳಕ್ಕೆ ಧಾವಿಸಿದ್ದು, ಯಾವುದೇ ಹಾನಿಯಾಗದಂತೆ ನಿಯಂತ್ರಿತ ಸ್ಫೋಟದ ಮೂಲಕ ಶಂಕಿತ ಐಇಡಿಯನ್ನು ನಾಶಪಡಿಸಿದೆ ಎಂದು ಅವರು ಅಧಿಕಾರಿಗಳು ಹೇಳಿದ್ದಾರೆ. ರಸ್ತೆಯಲ್ಲಿ ಸಂಚಾರವನ್ನು ಪುನಃಸ್ಥಾಪಿಸಲಾಗಿದೆ.