ಶಬರಿಮಲೆ: ಮಂಡಲ ಪೂಜೆಗೆ ಸಾವಿರಾರು ಭಕ್ತರು ಸಾಕ್ಷಿ

ಶಬರಿಮಲೆಯಲ್ಲಿ ಡಿ.27 ರಂದು ಮಂಡಲ ಪೂಜೆ ನೆರವೇರಿದ್ದು, ಸಾವಿರಾರು ಭಕ್ತಾದಿಗಳು, ಯಾತ್ರಾರ್ಥಿಗಳು ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶಬರಿಮಲೆಯಲ್ಲಿ ಭಕ್ತಾದಿಗಳು
ಶಬರಿಮಲೆಯಲ್ಲಿ ಭಕ್ತಾದಿಗಳು
Updated on

ಶಬರಿಮಲೆ: ಶಬರಿಮಲೆಯಲ್ಲಿ ಡಿ.27 ರಂದು ಮಂಡಲ ಪೂಜೆ ನೆರವೇರಿದ್ದು, ಸಾವಿರಾರು ಭಕ್ತಾದಿಗಳು, ಯಾತ್ರಾರ್ಥಿಗಳು ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಾರ್ಷಿಕ ತೀರ್ಥಯಾತ್ರೆಯ ಋತುವಿನ 41-ದಿನದ ಮೊದಲ ಹಂತದ ಕಾರ್ಯಕ್ರಮ ಇದಾಗಿದೆ. ಮಂಗಳವಾರ ಸಂಜೆ ವಿಧ್ಯುಕ್ತ ಮೆರವಣಿಗೆಯಲ್ಲಿ ಸನ್ನಿಧಾನಂ (ದೇವಾಲಯ ಸಂಕೀರ್ಣ)ಕ್ಕೆ ತರಲಾದ ಪವಿತ್ರ ಚಿನ್ನದ ವಸ್ತ್ರ "ತಂಕ ಅಂಕಿ"ಯನ್ನು ಅಯ್ಯಪ್ಪ ವಿಗ್ರಹಕ್ಕೆ ಅರ್ಪಣೆ ಮಾಡಿ ಅಲಂಕರಿಸಿ, ನಂತರ ಮಂಡಲ ಪೂಜೆಯನ್ನು ನೆರವೇರಿಸಲಾಯಿತು.

ದೇವಾಲಯದ ತಂತ್ರಿ (ಮುಖ್ಯ ಅರ್ಚಕ) ಕಂದರರು ಮಹೇಶ್ ಮೋಹನರು ಕಲಭನಾಹಿಷೇಕ" ಮತ್ತು "ಕಲಶಾಭಿಷೇಕವನ್ನು ಮಂಡಲ ಪೂಜೆ ಅಂಗವಾಗಿ ನೆರವೇರಿಸಿದರು. 

ಕೇರಳದ ಮತ್ತು ಹೊರಗಿನ ಸಾವಿರಾರು ಯಾತ್ರಾರ್ಥಿಗಳು, ಸನ್ನಿಧಾನಂ ಮತ್ತು ಸುತ್ತಮುತ್ತ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಲ್ಲದೆ, ಸಮಾರಂಭಗಳು ನಡೆದಾಗ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಪ್ರಮುಖ ಅಧಿಕಾರಿಗಳು ಸಹ ಹಾಜರಿದ್ದರು.

ಮೂರು ದಿನಗಳ ಕಾಲ ದೇಗುಲವನ್ನು ಮುಚ್ಚಲಾಗಿದ್ದು, ಡಿಸೆಂಬರ್ 30 ರಂದು 'ಮಕರವಿಳಕ್ಕು' ಆಚರಣೆಗಾಗಿ ದೇಗುಲವನ್ನು ತೆರೆಯಲಾಗುತ್ತದೆ.

ಎರಡು ತಿಂಗಳ ಸುದೀರ್ಘ ವಾರ್ಷಿಕ ತೀರ್ಥಯಾತ್ರೆಯ ಅಂತಿಮ ಭಾಗವಾಗಿ ಮಕರವಿಳಕ್ಕು ಆಚರಣೆ ಜನವರಿ 15 ರಂದು ನಡೆಯಲಿದೆ ಎಂದು ಟಿಡಿಬಿ ಮೂಲಗಳು ತಿಳಿಸಿವೆ. ಡಿಸೆಂಬರ್ 25 ರವರೆಗೆ ಕಳೆದ 39 ದಿನಗಳಲ್ಲಿ ಬೆಟ್ಟದ ದೇಗುಲವು 204.30 ಕೋಟಿ ರೂಪಾಯಿ ಆದಾಯವನ್ನು ಪಡೆದಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com