2023ರಲ್ಲಿ ಜಮ್ಮು- ಕಾಶ್ಮೀರದಲ್ಲಿ 76 ವಿದೇಶಿ ಉಗ್ರರ ಪೈಕಿ 55 ಮಂದಿ ಹತ್ಯೆ- ಡಿಜಿಪಿ

ಈ ವರ್ಷ ಜಮ್ಮು - ಕಾಶ್ಮೀರದಲ್ಲಿ 76 ವಿದೇಶಿ ಉಗ್ರರ ಬಗ್ಗೆ 55 ಮಂದಿಯನ್ನು ಹತ್ಯೆಗೊಳಿಸಲಾಗಿದೆ. 291 ಭಯೋತ್ಪಾದಕರ ಸಹಚರರನ್ನು ಬಂಧಿಸಲಾಗಿದೆ ಮತ್ತು 201 ಸ್ಥಳೀಯ ಕಾರ್ಯಕರ್ತರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಆರ್ ಆರ್ ಸ್ವೈನ್ ಶನಿವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು: ಈ ವರ್ಷ ಜಮ್ಮು - ಕಾಶ್ಮೀರದಲ್ಲಿ 76 ವಿದೇಶಿ ಉಗ್ರರ ಬಗ್ಗೆ 55 ಮಂದಿಯನ್ನು ಹತ್ಯೆಗೊಳಿಸಲಾಗಿದೆ. 291 ಭಯೋತ್ಪಾದಕರ ಸಹಚರರನ್ನು ಬಂಧಿಸಲಾಗಿದೆ ಮತ್ತು 201 ಸ್ಥಳೀಯ ಕಾರ್ಯಕರ್ತರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಆರ್ ಆರ್ ಸ್ವೈನ್ ಶನಿವಾರ ತಿಳಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಸಾರ್ವಕಾಲಿಕ ಕನಿಷ್ಠ 31 ಸ್ಥಳೀಯ ಭಯೋತ್ಪಾದಕರು ಮಾತ್ರ ಉಳಿದಿದ್ದಾರೆ, ಆದರೆ ಈ ವರ್ಷ ಉಗ್ರಗಾಮಿ ಗುಂಪಿಗೆ  ಸ್ಥಳೀಯರ ನೇಮಕಾತಿಯಲ್ಲಿ ಶೇ. 80 ರಷ್ಟು ಕಡಿಮೆಯಾಗಿದೆ. 48 ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳಲ್ಲಿ,  76 ಭಯೋತ್ಪಾದಕರನ್ನು ಹತ್ಯೆ ಮಾಡಿರುವುದಾಗಿ ಅವರು ಮಾಹಿತಿ ನೀಡಿದರು. 

2022 ರಿಂದ ಹೆಚ್ಚು ವಿದೇಶಿ ಉಗ್ರರು ಸಾವನ್ನಪ್ಪಿದ್ದಾರೆ. ಇದು ಈ ವರ್ಷವೂ ಮುಂದುವರೆದಿದೆ. ನಮ್ಮ ನಿಜವಾದ ಹೋರಾಟ ನುಸುಳುಕೋರರ ವಿರುದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಮುಂದಿನ ವರ್ಷವೂ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು ಇನ್ನಷ್ಟು ಹುರುಪಿನಿಂದ ಮುಂದುವರಿಯಲಿವೆ ಎಂದು ಅವರು ತಿಳಿಸಿದರು. 

ಜಮ್ಮು ಪ್ರದೇಶದ ಕಿಶ್ತ್ವಾರ್‌ನಲ್ಲಿ 4 ಮತ್ತು ಕಣಿವೆಯಲ್ಲಿ 27 ಸೇರಿದಂತೆ ಒಟ್ಟು 31 ಉಗ್ರರು ಸಕ್ರಿಯರಾಗಿದ್ದಾರೆ. ಅವರ ಸಂಖ್ಯೆ ಸಂಖ್ಯೆ ಸಾರ್ವಕಾಲಿಕ ಕಡಿಮೆಯಾಗಿದೆ. ಉಗ್ರಗಾಮಿ ಗುಂಪಿಗೆ ಸೇರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.  2022 ರಲ್ಲಿ 130 ಸ್ಥಳೀಯರು ಭಯೋತ್ಪಾದನೆಗೆ ಸೇರಿದ್ದಾರೆ ಮತ್ತು ಈ ವರ್ಷ ಇಲ್ಲಿಯವರೆಗೆ ಕೇವಲ 22 ಮಂದಿ ಸೇರಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 

ಕಳೆದ ವರ್ಷ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 31 ಮಂದಿ ನಾಗರಿಕರು ಮೃತಪಟ್ಟಿದ್ದರು. ಈ ವರ್ಷ ಅದು 14ಕ್ಕೆ ಇಳಿದಿದೆ. 2022ರಲ್ಲಿ 125 ಭಯೋತ್ಪಾದನಾ ಸಂಬಂಧಿತ ಘಟನೆಗಳು ನಡೆದಿದ್ದವು. ಆದರೆ, ಈ ವರ್ಷ 46ಕ್ಕೆ ಇಳಿದಿದ್ದು, 
ಶೇಕಡಾ 63 ರಷ್ಟು ಕುಸಿತವನ್ನು ದಾಖಲಿಸಿದೆ ಎಂದು ಡಿಜಿಪಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com