
ನವದೆಹಲಿ: ನ್ಯೂಸ್‌ಕ್ಲಿಕ್‌ನ ವಿದೇಶಿ ಧನಸಹಾಯ ಮತ್ತು ಭಾರತ ವಿರೋಧಿ ಚಟುವಟಿಕೆಗಳ ತನಿಖೆ ಸಂಬಂಧ ದೆಹಲಿ ಪೊಲೀಸರ ತಂಡವು ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖಾ ಅವರ ವಿಚಾರಣೆ ನಡೆಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ನವಿ ಮುಂಬೈನ ಅಗ್ರೋಲಿಯಲ್ಲಿರುವ ನವ್ಲಾಖಾ ಅವರ ಮನೆಯಲ್ಲಿ ಎಸಿಪಿ ಮಟ್ಟದ ಅಧಿಕಾರಿ ನೇತೃತ್ವದ ತಂಡವು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿತು. ನ್ಯೂಸ್ ಪೋರ್ಟಲ್‌ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರೊಂದಿಗಿನ ಸಂಪರ್ಕ ಮತ್ತು ಕಂಪನಿಯಲ್ಲಿ ಅವರ ಪಾಲಿನ ಬಗ್ಗೆ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೃಹಬಂಧನದಲ್ಲಿದ್ದ ನವ್ಲಾಖಾ ಅವರಿಗೆ ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಡಿಸೆಂಬರ್ 19 ರಂದು ಜಾಮೀನು ನೀಡಲಾಗಿತ್ತು. ಆಗಸ್ಟ್‌ನಲ್ಲಿ, ವಿಶೇಷ ಘಟಕ ನ್ಯೂಸ್‌ಕ್ಲಿಕ್ ನ್ಯೂಸ್ ಪೋರ್ಟಲ್ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದೆ. ದೇಶದ ವಿರುದ್ಧ ಅಸಮಾಧಾನವನ್ನು ಉಂಟುಮಾಡಲು ಚೀನಾದಿಂದ ದೊಡ್ಡ ಪ್ರಮಾಣದ ಹಣ ಬಂದಿದೆ ಎಂದು ಆರೋಪಿಸಿದೆ.
ತನಿಖಾ ಸಂಸ್ಥೆಯು ನ್ಯೂಸ್ ಪೋರ್ಟಲ್‌ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಅಕ್ಟೋಬರ್ 3 ರಂದು ಬಂಧಿಸಿತ್ತು. ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಚೀನಾದ ವಿದೇಶಿ ಫಂಡ್ ನ್ನು ಸಾಮಾಜಿಕ ಹೋರಾಟಗಾರರಾದ ಗೌತಮ್ ನವ್ಲಾಖಾ ಮತ್ತು ತೀಸ್ತಾ ಸೀತಲ್ವಾಡ್, ಅವರ ಪತಿ ಮತ್ತು ಜಾವೇದ್ ಆನಂದ್ ಮತ್ತು ಪತ್ರಕರ್ತರಾದ ಊರ್ಮಿಲೇಶ್, ಆರಾತ್ರಿಕಾ ಹಲ್ಡರ್, ಪರಂಜಯ್ ಗುಹಾ ಠಾಕುರ್ತಾ ಮತ್ತು ಅಭಿಸಾರ್ ಶರ್ಮಾ ಮತ್ತು ಇತರರಿಗೆ ವಿತರಿಸಲಾಗಿದೆ. ನವ್ಲಾಖಾ 1991 ರಿಂದ ಪುರ್ಖಾಯಸ್ಥರೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು 2018 ರಿಂದ PPK ನ್ಯೂಸ್‌ಕ್ಲಿಕ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್‌ನ ಷೇರುದಾರರಾಗಿದ್ದಾರೆ ಎಂದು ಎಂದು ಎಫ್‌ಐಆರ್ ನಲ್ಲಿ ಹೇಳಲಾಗಿದೆ.
Advertisement