ನವದೆಹಲಿ: ಮುಂದಿನ ಎರಡು ದಿನಗಳಲ್ಲಿ ಉತ್ತರ ಭಾರತವನ್ನು ದಟ್ಟ ಮಂಜು ಆವರಿಸಲಿದ್ದು, ಪೂರ್ವ ಭಾರತಕ್ಕೂ ಈ ವಾತಾವರಣ ವಿಸ್ತರಿಸಲಿದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ.
ಶನಿವಾರ ಮತ್ತು ಭಾನುವಾರದಂದು ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರ ರಾಜಸ್ಥಾನದ ಕೆಲವು ಭಾಗಗಳಲ್ಲಿ ಶೀತ ದಿನಗಳು ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚನೆ ಸಂಸ್ಥೆ ತಿಳಿಸಿದೆ.
ಪಂಜಾಬ್, ಪಶ್ಚಿಮ ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ದಟ್ಟವಾದ ಮಂಜು ವಾತಾವರಣದಿಂದಾಗಿ ≤50 ಮೀ ವರೆಗೆ ಗೋಚರತೆ ಇರಲಿದೆ. ಈ ವಾತಾವರಣ ಜ.1 ವರೆಗೂ ಹರ್ಯಾಣ, ಚಂಡೀಗಢ, ದೆಹಲಿ, ಪೂರ್ವ ಉತ್ತರ ಪ್ರದೇಶಗಳಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರಾಖಂಡ್, ಮಧ್ಯಪ್ರದೇಶ, ಉತ್ತರ ರಾಜಸ್ಥಾನ, ಜಾರ್ಖಂಡ್ ಗಳಲ್ಲಿ ಜ.04 ವರೆಗೆ ಬೆಳಗಿನ ಗೋಚರತೆ 50-200 ಮೀ ವರೆಗೆ ಇರಲಿದೆ ಎಂದು ತಿಳಿದುಬಂದಿದೆ. ಭಾನುವಾರ ಮತ್ತು ಜನವರಿ 2 ರಂದು ಗಂಗಾನದಿ ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಇದೇ ರೀತಿಯ ಪರಿಸ್ಥಿತಿ ಇರಲಿದೆ.
Advertisement