
ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಶನಿವಾರ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಮಾಜಿ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಬಿಜೆಪಿಯ ಹಿರಿಯ ನಾಯಕ ಕಿರೋಡಿ ಲಾಲ್ ಮೀನಾ ಸೇರಿದಂತೆ 12 ಶಾಸಕರು ನೂತನ ಸಚಿವಾರಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕರಾ ಸಮಾರಂಭದಲ್ಲಿ 10 ಶಾಸಕರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಕಿರೋಡಿ ಲಾಲ್ ಮೀನಾ, ಮದನ್ ದಿಲಾವರ್, ರಾಜ್ಯವರ್ಧನ್ ಸಿಂಗ್ ರಾಥೋಡ್, ಗಜೇಂದ್ರ ಸಿಂಗ್ ಖಿಮ್ಸರ್, ಬಾಬುಲಾಲ್ ಖರಾಡಿ, ಜೋಗರಾಮ್ ಪಟೇಲ್, ಸುರೇಶ್ ಸಿಂಗ್ ರಾವತ್, ಅವಿನಾಶ್ ಗೆಹ್ಲೋಟ್, ಜೋರಾರಾಮ್ ಕುಮಾವತ್, ಹೇಮಂತ್ ಮೀನಾ, ಕನ್ಹಯ್ಯಾ ಲಾಲ್ ಚೌಧರಿ ಮತ್ತು ಸುಮಿತ್ ಗೋಡಾರ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
Advertisement