2023ನೇ ವರ್ಷದ ಕೊನೆಯ ಮನ್ ಕಿ ಬಾತ್: ‘2024ರಲ್ಲೂ ನಾವು ಅದೇ ಉತ್ಸಾಹ, ಆವೇಗ ಕಾಯ್ದುಕೊಳ್ಳಬೇಕು’ ಎಂದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು 2023ನೇ ವರ್ಷದ ತಮ್ಮ ಕೊನೆಯ ಮನ್ ಕಿ ಬಾತ್ ಸಂಚಿಕೆಯಲ್ಲಿ ಭಾರತದ ಸಾಧನೆಗಳನ್ನು ಮೆಲುಕು ಹಾಕಿದರು.
ಪ್ರಧಾನಿ ಮೋದಿ ಮನ್ ಕಿ ಬಾತ್
ಪ್ರಧಾನಿ ಮೋದಿ ಮನ್ ಕಿ ಬಾತ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2023ನೇ ವರ್ಷದ ತಮ್ಮ ಕೊನೆಯ ಮನ್ ಕಿ ಬಾತ್ ಸಂಚಿಕೆಯಲ್ಲಿ ಭಾರತದ ಸಾಧನೆಗಳನ್ನು ಮೆಲುಕು ಹಾಕಿದರು. ಮನ್ ಕಿ ಬಾತ್‌ನ 108ನೇ ಸಂಚಿಕೆಯನ್ನು 'ವಿಶೇಷ' ಎಂದು ಕರೆದ ಪ್ರಧಾನಿ ಮೋದಿ, "ನಮಗೆ, 108 ಸಂಖ್ಯೆಯ ಮಹತ್ವ ಮತ್ತು ಅದರ ಪಾವಿತ್ರ್ಯವು ಆಳವಾದ ಅಧ್ಯಯನದ ವಿಷಯವಾಗಿದೆ. ಜಪಮಾಲೆಯಲ್ಲಿ 108 ಮಣಿಗಳು, 08 ಬಾರಿ ಪಠಣ, 108 ದೈವಿಕ ಸ್ಥಳಗಳು , ದೇವಾಲಯಗಳಲ್ಲಿ 108 ಮೆಟ್ಟಿಲುಗಳು, 108 ಗಂಟೆಗಳು, ಈ ಸಂಖ್ಯೆ 108 ಅಪಾರ ನಂಬಿಕೆಗೆ ಸಂಬಂಧಿಸಿದೆ ಎಂದರು. 

ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ, ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳ ಸಾಧನೆಗಳನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು. ಚಂದ್ರಯಾನ-3 ಯಶಸ್ಸಿನ ಹಿಂದೆ ಮಹಿಳಾ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.

ಭಾರತವು ಹೇಗೆ ಕ್ರಮೇಣ 'ಸಂಶೋಧನಾ ಕೇಂದ್ರ' ಆಗುತ್ತಿದೆ ಎಂಬುದರ ಕುರಿತು ಪ್ರಧಾನಿ ಮೋದಿ ಮಾತನಾಡಿದರು. "2015 ರಲ್ಲಿ, ನಾವು ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 81 ನೇ ಸ್ಥಾನದಲ್ಲಿದ್ದೆವು-ಇಂದು ನಮ್ಮ ಶ್ರೇಯಾಂಕವು 40 ನೇ ಸ್ಥಾನಕ್ಕೇರಿದೆ. ಈ ವರ್ಷ, ಇಂಡಾದಲ್ಲಿ ಸಲ್ಲಿಸಲಾದ ಪೇಟೆಂಟ್‌ಗಳ ಸಂಖ್ಯೆಯು ಅಧಿಕವಾಗಿದ್ದು, ಅದರಲ್ಲಿ ಸುಮಾರು ಶೇಕಡಾ 60ರಷ್ಟು ದೇಶೀಯ ನಿಧಿಗಳಿಂದ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಮನ್ ಕಿ ಬಾತ್ ರೇಡಿಯೋ ಪ್ರಸಾರದ 108 ನೇ ಸಂಚಿಕೆಯಲ್ಲಿ, ಪ್ರಧಾನಿ ಮೋದಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆಯೂ ಒತ್ತು ನೀಡಿದರು ಮತ್ತು 'ಫಿಟ್ ಇಂಡಿಯಾ' ಗಾಗಿ ಹಲವಾರು ಅನನ್ಯ ಪ್ರಯತ್ನಗಳನ್ನು ಎತ್ತಿ ತೋರಿಸಿದರು.

ಫಿಟ್​ನೆಸ್​ ರಹಸ್ಯ: ಪ್ರಸಾರದ ಸಮಯದಲ್ಲಿ, ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಮತ್ತು ನಟ ಅಕ್ಷಯ್ ಕುಮಾರ್ ತಮ್ಮ ಫಿಟ್‌ನೆಸ್ ಸಲಹೆಗಳನ್ನು ಹಂಚಿಕೊಂಡರು. ಭಾರತವು ಆತ್ಮಸ್ಥೈರ್ಯದಿಂದ ತುಂಬಿದೆ ಮತ್ತು 'ವಿಕಸಿತ್ ಭಾರತ್ (ಅಭಿವೃದ್ಧಿ ಹೊಂದಿದ ಭಾರತ)' ಮತ್ತು ಸ್ವಾವಲಂಬನೆಯ ಮನೋಭಾವದಿಂದ ತುಂಬಿದೆ ಎಂದರು. 

2024ರಲ್ಲಿಯೂ ಇದೇ ಉತ್ಸಾಹವಿರಲಿ: ನಾವು 2024ನೇ ವರ್ಷಕ್ಕೆ ಕಾಲಿಡುತ್ತಿದ್ದು, ಮುಂದಿನ ವರ್ಷವೂ ನಮ್ಮಲ್ಲಿ ಅದೇ ಉತ್ಸಾಹ ಮತ್ತು ಆವೇಗವನ್ನು ಕಾಪಾಡಿಕೊಳ್ಳಬೇಕು. ಭಾರತವು 'ನಾವೀನ್ಯತೆ ಕೇಂದ್ರ' ಆಗುತ್ತಿರುವುದು ನಾವು ಎಲ್ಲಿಯೂ ನಿಲ್ಲಬಾರದು, ಮುಂದುವರಿಯಬೇಕು ಎಂಬ ಅಂಶವನ್ನು ಸಂಕೇತಿಸುತ್ತದೆ ಎಂದು ಹೇಳಿದರು.

ದೇಶವು 'ವಿಕಸಿತ್ ಭಾರತ್' ಮತ್ತು ಸ್ವಾವಲಂಬನೆಯ ಮನೋಭಾವದಿಂದ ತುಂಬಿದೆ. 2024 ರಲ್ಲೂ ಈ ಚೈತನ್ಯ ಮತ್ತು ಆವೇಗವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ಭಾರತವು ಆತ್ಮವಿಶ್ವಾಸದಿಂದ ತುಂಬಿದೆ ಮತ್ತು 'ವಿಕಸಿತ್ ಭಾರತ್ (ಅಭಿವೃದ್ಧಿ ಹೊಂದಿದ ಭಾರತ)' ಮತ್ತು ಸ್ವಾವಲಂಬನೆಯ ಮನೋಭಾವದಿಂದ ತುಂಬಿದೆ ಎಂದರು. 2024ರಲ್ಲೂ ನಾವು ಅದೇ ಉತ್ಸಾಹ ಮತ್ತು ಆವೇಗವನ್ನು ಕಾಯ್ದುಕೊಳ್ಳಬೇಕು ಎಂದು ಮೋದಿ ಹೇಳಿದರು.

ಭಾರತವು ‘ಇನ್ನೋವೇಶನ್ ಹಬ್’ ಆಗುತ್ತಿರುವುದು ‘ನಾವು ನಿಲ್ಲುವುದಿಲ್ಲ’ ಎಂಬುದನ್ನು ಸಂಕೇತಿಸುತ್ತದೆ. ಭಾರತವು ಈ ವರ್ಷ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಸೇರಿದಂತೆ ಹಲವು ವಿಶೇಷ ಸಾಧನೆಗಳನ್ನು ಮಾಡಿದೆ ಎಂದರು.

ಅಯೋಧ್ಯೆಯ ರಾಮಮಂದಿರದ ಬಗ್ಗೆ ಇಡೀ ದೇಶವೇ ಉತ್ಸುಕವಾಗಿದೆ. ಜನರು ವಿಭಿನ್ನ ರೀತಿಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

#ShriRamBhajan ಹ್ಯಾಶ್​ಟ್ಯಾಗ್​ನಲ್ಲಿ ಶ್ರೀರಾಮ ಭಜನೆಯನ್ನು ಹಂಚಿಕೊಳ್ಳಿ: ಕಳೆದ ಕೆಲವು ದಿನಗಳಲ್ಲಿ ಶ್ರೀರಾಮ ಮತ್ತು ಅಯೋಧ್ಯೆಯ ಮೇಲೆ ಹೊಸ ಹಾಡುಗಳು ಮತ್ತು ಭಜನೆಗಳನ್ನು ರಚಿಸಿರುವುದನ್ನು ನೀವು ನೋಡಿರಬೇಕು. ಅನೇಕ ಜನರು ಹೊಸ ಕವಿತೆಗಳನ್ನು ಬರೆಯುತ್ತಿದ್ದಾರೆ. ನಾನು ಕೆಲವು ಭಜನೆ ಮತ್ತು ಹಾಡುಗಳನ್ನು ನನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದೇನೆ. ಕಲಾ ಪ್ರಪಂಚವು ತನ್ನ ವಿಶಿಷ್ಟ ಶೈಲಿಯಲ್ಲಿ ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಗಳಾಗುತ್ತಿದೆ ಎಂದು ಹೇಳಿದರು. 

ನನ್ನ ಮನಸ್ಸಿಗೆ ಒಂದು ಆಲೋಚನೆ ಬರುತ್ತದೆ, ಅಂತಹ ಎಲ್ಲಾ ರಚನೆಗಳನ್ನು ನಾವು ಸಾಮಾನ್ಯ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಳ್ಳಬೇಕೇ? ನಿಮ್ಮ ರಚನೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ #SHRIRAMBHAJAN ನೊಂದಿಗೆ ಹಂಚಿಕೊಳ್ಳಲು ನಾನು ಕೇಳಿಕೊಳ್ಳುತ್ತೇನೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com