ಸಂಸತ್ತು ಪ್ರಜಾಪ್ರಭುತ್ವದ ಉತ್ತರ ನಕ್ಷತ್ರ: ರಾಜ್ಯಸಭೆಯಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್

ನ್ಯಾಯಾಂಗ ಮತ್ತು ಕಾರ್ಯಾಂಗದ ಪರಮಾಧಿಕಾರದ ನಡುವಿನ ವಿವಾದವು ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.
ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳು(ಸಂಗ್ರಹ ಚಿತ್ರ)
ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳು(ಸಂಗ್ರಹ ಚಿತ್ರ)
Updated on

ನವದೆಹಲಿ: ನ್ಯಾಯಾಂಗ ಮತ್ತು ಕಾರ್ಯಾಂಗದ ಪರಮಾಧಿಕಾರದ ನಡುವಿನ ವಿವಾದವು ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.

ಭಾರತದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳು ಕಳೆದ ವಾರ ಒಂದು ಹೇಳಿಕೆ ನೀಡಿದ್ದರು 'ಮೂಲ ರಚನೆಯ ಸಿದ್ಧಾಂತ'ವನ್ನು 'ಉತ್ತರ ನಕ್ಷತ್ರ'ಕ್ಕೆ ಹೋಲಿಕೆ ಮಾಡಿದ್ದರು. ಸ್ಥಿರ ಮತ್ತು ಸ್ಥಿರವಾದ ಯಾವುದೋ ಒಂದು ರೂಪಕಕ್ಕೆ ಮಾಡುವ ಹೋಲಿಕೆಯನ್ನು ನಿನ್ನೆ ಶುಕ್ರವಾರ ಉಪರಾಷ್ಟ್ರಪತಿ ಜಗದೀಪ್ ಧನ್ ಕರ್ ಅವರು ಸಂಸತ್ತಿನಲ್ಲಿ ಕಲಾಪ ವೇಳೆ ಬಳಸಿದ್ದಾರೆ. 

ರಾಜ್ಯಸಭೆಯ ಉಪ ಸಭಾಪತಿಗಳೂ ಆಗಿರುವ ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ಅವರು ಸದನದ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮುಂದಿನ ಹಾದಿಯು ಸಂಕೋಚನಗೊಂಡಾಗ ಭಾರತೀಯ ಸಂವಿಧಾನದ ಅನುಷ್ಠಾನಕಾರರು ಮತ್ತು ವ್ಯಾಖ್ಯಾನಕಾರರಿಗೆ 'ಮೂಲ ರಚನೆಯ ಸಿದ್ಧಾಂತ' ಮಾರ್ಗದರ್ಶನ ಮತ್ತು ನಿರ್ದೇಶನಗಳನ್ನು ನೀಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದರು. 

ನಿನ್ನೆ ಸದನದಲ್ಲಿ ಮಾತನಾಡಿದ ಉಪ ರಾಷ್ಟ್ರಪತಿಗಳು, ಸಂಸತ್ತು ಮೂಲಭೂತವಾಗಿ ಪ್ರಜಾಪ್ರಭುತ್ವದ ಉತ್ತರ ನಕ್ಷತ್ರವಾಗಿದೆ. ಇದು ಜನರ ಆಕಾಂಕ್ಷೆಗಳು ಮತ್ತು ಕನಸುಗಳನ್ನು ನನಸಾಗಿಸಲು ಚರ್ಚೆ ಮತ್ತು ಸಮಾಲೋಚನೆಯ ಸ್ಥಳವಾಗಿದೆ ಹೊರತು ಇದು ಗೊಂದಲದ ಸ್ಥಳವಲ್ಲ. ನಾವು ನಿಯಮಗಳಿಗೆ ಅನುಸಾರವಾಗಿ ಕೆಲಸ ಮಾಡಬೇಕಾಗಿದೆ ಎಂದರು.

1973ರ ಕೇಶವಾನಂದ ಭಾರತಿ ಪ್ರಕರಣದ ಮಹತ್ವದ ತೀರ್ಪನ್ನು ಧನ್ ಕರ್ ಪ್ರಶ್ನಿಸಿರುವ ಹಿನ್ನೆಲೆಯಲ್ಲಿ ಸಿಜೆಐ ಈ ಹೇಳಿಕೆ ನೀಡಿದ್ದಾರೆ. ಜನವರಿ 11 ರಂದು ಜೈಪುರದಲ್ಲಿ 82 ನೇ ಅಖಿಲ ಭಾರತ ಅಧ್ಯಕ್ಷರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಧನ್ ಕರ್ ಅವರ ಅಭಿಪ್ರಾಯಗಳು ಬಂದವು. ನ್ಯಾಯಾಂಗವು ಕಾನೂನು ರಚನೆಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಧನ್ ಕರ್ ಹೇಳಿದ್ದರು. 

ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರವನ್ನು ಯಾವುದೇ ಪ್ರಾಧಿಕಾರವು ಪ್ರಶ್ನಿಸಿದರೆ, "ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ" ಎಂದು ಹೇಳುವುದು ಕಷ್ಟ ಎಂದು ಅವರು ಹೇಳಿದ್ದರು. ಅದರ ನಂತರ, ಶನಿವಾರದಂದು ನಾನಿ ಎ ಪಾಲ್ಖಿವಾಲಾ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಸಿಜೆಐ, ನ್ಯಾಯಾಧೀಶರ ಕುಶಲತೆಯು ಸಂವಿಧಾನದ ಪಠ್ಯವನ್ನು ಬದಲಾಗುತ್ತಿರುವ ಕಾಲದೊಂದಿಗೆ ಅದರ ಮೂಲ ಆತ್ಮವನ್ನು ಅಖಂಡವಾಗಿಟ್ಟುಕೊಂಡು ಅರ್ಥೈಸುವಲ್ಲಿ ಅಡಗಿದೆ ಎಂದು ಟೀಕಿಸಿದ್ದರು.

ಸಂಸದೀಯ ಸಾರ್ವಭೌಮತ್ವ ಮತ್ತು ಸ್ವಾಯತ್ತತೆ ಪ್ರಜಾಪ್ರಭುತ್ವದ ಉಳಿವಿಗೆ ಅತ್ಯಗತ್ಯ ಮತ್ತು ಕಾರ್ಯಾಂಗ ಅಥವಾ ನ್ಯಾಯಾಂಗದಿಂದ ರಾಜಿ ಮಾಡಿಕೊಳ್ಳಲು ಅನುಮತಿಸಲಾಗುವುದಿಲ್ಲ ಎಂದು ಧನ್ ಕರ್ ಪ್ರತಿಪಾದಿಸಿದ್ದರು. ಜನವರಿ 14 ರಂದು ಜೈಪುರದಲ್ಲಿ ಅವರು ನ್ಯಾಯಾಂಗವು ಕಾನೂನು ರಚನೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಸಾಮಾಜಿಕ ಬೇಡಿಕೆಗಳನ್ನು ಪೂರೈಸಲು ರಾಜ್ಯವು ತನ್ನ ಕಾನೂನು ಮತ್ತು ಆರ್ಥಿಕ ನೀತಿಗಳನ್ನು ಬದಲಾಯಿಸಲು ಮತ್ತು ವಿಕಸನಗೊಳಿಸಲು ಸಂವಿಧಾನವು ಅವಕಾಶ ನೀಡುತ್ತದೆ ಎಂದು ಸಿಜೆಐ ಕಳೆದ ವಾರ ಹೇಳಿದ್ದರು. “ನೀವು ಸಂವಿಧಾನವನ್ನು ನೋಡಿದರೆ, ಅದು ಮಿತಿಯಿಲ್ಲದ ಆರ್ಥಿಕ ಉದಾರವಾದವನ್ನು ಬೆಂಬಲಿಸುವುದಿಲ್ಲ. ಬದಲಿಗೆ, ಸಂವಿಧಾನವು ಸರಿಯಾದ ಸಮತೋಲನವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com