ರಾಜ್ಯಸಭೆಯಲ್ಲಿ ವಾಜಪೇಯಿ ‘ರಾಜಧರ್ಮ’ ಉಲ್ಲೇಖಿಸಿದ ಖರ್ಗೆ, ಬಿಜೆಪಿ ಸದಸ್ಯರಿಂದ ಪ್ರತಿಭಟನೆ

2002ರ ಗುಜರಾತ್ ದಂಗೆಯ ನಂತರ ಅಟಲ್ ಬಿಹಾರಿ ವಾಜಪೇಯಿ ಅವರ ‘ರಾಜಧರ್ಮ’ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ರಾಜ್ಯಸಭೆಯಲ್ಲಿ ಉಲ್ಲೇಖಿಸಿದ್ದು, ಆಡಳಿತ ಪಕ್ಷ ಬಿಜೆಪಿ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: 2002ರ ಗುಜರಾತ್ ದಂಗೆಯ ನಂತರ ಅಟಲ್ ಬಿಹಾರಿ ವಾಜಪೇಯಿ ಅವರ ‘ರಾಜಧರ್ಮ’ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ರಾಜ್ಯಸಭೆಯಲ್ಲಿ ಉಲ್ಲೇಖಿಸಿದ್ದು, ಆಡಳಿತ ಪಕ್ಷ ಬಿಜೆಪಿ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು  ಖರ್ಗೆಯವರ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರ ಮಾತನ್ನು ನಾನು ಉಲ್ಲೇಖಿಸುತ್ತೇನೆ ಎಂದ ಖರ್ಗೆ, ಅಹಮದಾಬಾದ್‌ನಲ್ಲಿ ನಡೆದ ಕೋಮುಗಲಭೆಯಿಂದ ಭಾರತದ ಘನತೆಗೆ ಧಕ್ಕೆಯಾಗಿದೆ. ಕೋಮು ಗಲಭೆಗಳು ದೇಶದ ಜಾಗತಿಕ ವರ್ಚಸ್ಸನ್ನು ಹಾಳು ಮಾಡಿವೆ. ಹೀಗಿರುವಾಗಿ ವಿದೇಶಕ್ಕೆ ನಾನು ಹೇಗೆ ಹೋಗಲಿ? ರಾಜಧರ್ಮ ಪಾಲಿಸುತ್ತಿಲ್ಲ ಎಂದು ವಾಜಪೇಯಿ ಹೇಳಿದ್ದರು. ಇದು ನಾನು ಹೇಳಿದ್ದು ಅಲ್ಲ ಎಂದರು.

ಖರ್ಗೆ ಅವರ ಈ ಮಾತಿಗೆ ತೀವ್ರ ವಿರೋಧ್ಯ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ಖರ್ಗೆ ಅವರು ತಪ್ಪಾಗಿ ಹೇಳುತ್ತಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಸದನದ ನಾಯಕ ಸಚಿವ ಪಿಯೂಷ್ ಗೋಯಲ್ ಅವರು ಮಾತನಾಡಿ, ವಾಜಪೇಯಿ ಅವರು ಮಹಾರಾಷ್ಟ್ರ, ಭಾಗಲ್ಪುರ ಅಥವಾ ಗುಜರಾತ್‌ನಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲಿ ನಡೆದ ಕೋಮು ಗಲಭೆಗಳ ಬಗ್ಗೆ ಹೇಳಿದ್ದರು ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ವಿರೋಧ ಪಕ್ಷದ ಸದಸ್ಯರು ಮಾಜಿ ಪ್ರಧಾನಿಯನ್ನು "ಭಾಗಶಃ ಅವರ ಅನುಕೂಲಕ್ಕೆ ತಕ್ಕಂತೆ" ಉಲ್ಲೇಖಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ರಾಜಧರ್ಮ ಪಾಲಿಸುತ್ತಿದ್ದಾರೆ ಎಂದು ಹೇಳಿದರು.

ಅದಾನಿ ಸಮೂಹದಲ್ಲಿ 30 ಸಾವಿರ ಕೆಲಸಗಾರರು ಮಾತ್ರ ಇದ್ದಾರೆ. ಅದೇ ಸಾರ್ವಜನಿಕ ಉದ್ಯಮಿಗಳಲ್ಲಿ 10 ಲಕ್ಷ ಜನ ಕೆಲಸಗಾರರಿದ್ದಾರೆ. ಈ ವಲಯದಲ್ಲಿ ಹೂಡಿಕೆ ಹೆಚ್ಚಾಗಬೇಕಿದೆ ಎಂದು ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com