ಪ್ರಧಾನಿ ಮೋದಿ ಜಾಕೆಟ್, ಮಲ್ಲಿಕಾರ್ಜುನ ಖರ್ಗೆ ಧರಿಸಿದ ಸ್ಕಾರ್ಫ್ ಕುರಿತು ಆಡಳಿತ-ವಿರೋಧ ಪಕ್ಷದ ಸದಸ್ಯರ ನಡುವೆ ಗದ್ದಲ, ಚರ್ಚೆ

ಸಂಸತ್ತಿನಲ್ಲಿ ನಿನ್ನೆ ಬಜೆಟ್ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷಗಳ ತೀವ್ರ ಮಾತಿನ ಸಮರ, ವಾಗ್ಬಾಣ, ಬಿಸಿಬಿಸಿ ಚರ್ಚೆಗಳ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜಕಿಯೇತರ ವಿಷಯಕ್ಕೆ ವಿಶೇಷವಾಗಿ ಸಂಸದರ ಗಮನ ಸೆಳೆದರು.
ನಿನ್ನೆ ಸದನಕ್ಕೆ ಜಾಕೆಟ್ ಮತ್ತು ಸ್ಕಾರ್ಫ್ ಧರಿಸಿ ಬಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ
ನಿನ್ನೆ ಸದನಕ್ಕೆ ಜಾಕೆಟ್ ಮತ್ತು ಸ್ಕಾರ್ಫ್ ಧರಿಸಿ ಬಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಸಂಸತ್ತಿನಲ್ಲಿ ನಿನ್ನೆ ಬಜೆಟ್ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷಗಳ ತೀವ್ರ ಮಾತಿನ ಸಮರ, ವಾಗ್ಬಾಣ, ಬಿಸಿಬಿಸಿ ಚರ್ಚೆಗಳ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜಕಿಯೇತರ ವಿಷಯಕ್ಕೆ ವಿಶೇಷವಾಗಿ ಸಂಸದರ ಗಮನ ಸೆಳೆದರು.

ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಪ್ರಧಾನಿ ಸಂಸತ್ತಿಗೆ ಆಗಮಿಸಿ ಮೇಲ್ಮನೆಯಲ್ಲಿ ಕುಳಿತರು. ಅಲ್ಲಿ ಸದಸ್ಯರ ಗಮನ ಸೆಳೆದದ್ದು ಪ್ರಧಾನ ಮಂತ್ರಿಯವರು ಧರಿಸಿದ್ದ ಮರುಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ ಅವರ ಆಕಾಶ ನೀಲಿ ಬಣ್ಣದ ಜಾಕೆಟ್.

“ಪ್ರಧಾನಿ ಬಂದ ಕ್ಷಣವೇ ಅವರ ನೀಲಿ ಬಣ್ಣದ ಜಾಕೆಟ್ ನಮ್ಮ ಗಮನ ಸೆಳೆಯಿತು. ಪ್ರಧಾನಿಯವರು ನಿಜವಾಗಿಯೂ ಪರಿಸರದ ಮೇಲಿನ ತಮ್ಮ ಕಾಳಜಿಯನ್ನು ತೋರಿಸಿದರು” ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ರಾಜ್ಯಸಭಾ ಸಂಸದರೊಬ್ಬರು ಹೇಳಿದರು. ಮತ್ತೊಂದೆಡೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ತಮ್ಮ ಹಾಸ್ಯದ ಮಾತುಗಳಿಂದ ಕೇಸರಿ ಪಕ್ಷದ ಸಂಸದರ ಗಮನ ಸೆಳೆದರು. ಖರ್ಗೆ ಅವರು ಹೈ-ಫ್ಯಾಶನ್ ಬ್ರ್ಯಾಂಡ್ ಲೂಯಿ ವಿಟಾನ್‌ನ ಸ್ಕಾರ್ಫ್ ಧರಿಸಿಕೊಂಡು ಬಂದಿದ್ದು ಇಡೀ ಸದನದ ಸದಸ್ಯರ ಗಮನ ಸೆಳೆಯಿತು- ಇದರ ಬೆಲೆ ಸುಮಾರು 56,332 ರೂಪಾಯಿಗಳು.

ಪ್ರಧಾನಿಯವರ ನೀಲಿ ಜಾಕೆಟ್ ಮತ್ತು ಖರ್ಗೆ ಅವರ ಸ್ಕಾರ್ಫ್ ಎರಡೂ ಸಂಸತ್ತಿನಲ್ಲಿ ಸ್ವಲ್ಪ ಸಮಯದವರೆಗೆ ಹೊಸ ಚರ್ಚೆಯಾಗಿ ಹೊರಹೊಮ್ಮಿದವು. ಮೈಕ್ರೋ ಬ್ಲಾಗಿಂಗ್ ಸೈಟ್‌ಗಳಲ್ಲಿ ಮೋದಿಯವರ ನೀಲಿ ಜಾಕೆಟ್ ಮಿನುಗಿದಾಗ, ಬಿಜೆಪಿ ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಖರ್ಗೆ ಅವರ ದುಬಾರಿ ಸ್ಕಾರ್ಫ್ ಬಗ್ಗೆ ಚರ್ಚೆಗಳು ಆರಂಭವಾದವು. 

ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ ಟ್ವಿಟ್ಟರ್‌ನಲ್ಲಿ: “ಅಪ್ನಾ ಅಪ್ನಾ, ಸಂದೇಶ ಅಪ್ನಾ ಅಪ್ನಾ. ಪ್ರಧಾನಿಯವರು  ತಮ್ಮ ಫ್ಯಾಷನ್-ನೀಲಿ ಜಾಕೆಟ್‌ನೊಂದಿಗೆ 'ಹಸಿರು ಸಂದೇಶ' ಕಳುಹಿಸುತ್ತಾರೆ; ಸುಸ್ಥಿರ ಬೆಳವಣಿಗೆ ಮತ್ತು ಪರಿಸರದ ಕಾರಣಕ್ಕಾಗಿ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ಅವರ ಧ್ಯೇಯವಾಗಿದೆ ಆದರೆ ಮಲ್ಲಿಕಾರ್ಜುನ ಖರ್ಗೆಯವರು ದುಬಾರಿ ಎಲ್ವಿ ಸ್ಕಾರ್ಫ್ ಧರಿಸುತ್ತಾರೆ ಎಂದು ಟಾಂಗ್ ಕೊಟ್ಟರು. 

ಇತ್ತೀಚೆಗಷ್ಟೇ ಭಾರತ್ ಜೋಡೋ ಯಾತ್ರೆಯಲ್ಲಿ ಚಳಿಗಾಲದಲ್ಲಿ ಬಿಳಿ ಟೀ ಶರ್ಟ್ ತೊಟ್ಟಿದ್ದ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಅಪಹಾಸ್ಯ ಮಾಡಿತ್ತು. ಕಾಂಗ್ರೆಸ್ ನಾಯಕ ಧರಿಸಿದ್ದ ಟೀ ಶರ್ಟ್ ಬೆಲೆ 41 ಸಾವಿರ ರೂಪಾಯಿ ಎಂದು ಹೇಳಲಾಗಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಪ್ರಧಾನಿ ನರೇಂದ್ರ ಮೋದಿಯವರ ಸೂಟ್ ಬೆಲೆ 10 ಲಕ್ಷ ಎಂದು ವಾಗ್ದಾಳಿ ನಡೆಸಿತ್ತು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಭಾರತೀಯ ಇಂಧನ ಸಪ್ತಾಹದಲ್ಲಿ ಪ್ರಧಾನಿ ಧರಿಸಿದ್ದ ಜಾಕೆಟ್ ನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಉಡುಗೊರೆಯಾಗಿ ನೀಡಿತ್ತು. ಜಾಕೆಟ್ ನ್ನು ಮರುಬಳಕೆ ಮಾಡಲಾದ ಪಿಇಟಿ ಬಾಟಲಿಗಳಿಂದ ತಯಾರಿಸಲಾಗುತ್ತದೆ. ಅದೇ ರೀತಿಯ ಜಾಕೆಟ್‌ಗಳನ್ನು ಇಂಡಿಯನ್ ಆಯಿಲ್ ಉದ್ಯೋಗಿಗಳು ಮತ್ತು ಸಶಸ್ತ್ರ ಪಡೆಗಳಿಗೆ ಲಭ್ಯವಾಗುವಂತೆ ಮಾಡುವ ಯೋಜನೆಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com