ಕೋರ್ಟ್ (ಸಾಂಕೇತಿಕ ಚಿತ್ರ)
ಕೋರ್ಟ್ (ಸಾಂಕೇತಿಕ ಚಿತ್ರ)

ಭಯೋತ್ಪಾದಕ ದಾಳಿಗೆ ಸಂಚು: 4 ಮಂದಿ ಅಲ್ ಖೈದಾ ಉಗ್ರರನ್ನು ದೋಷಿಗಳೆಂದು ತೀರ್ಪು ನೀಡಿದ ದೆಹಲಿ ಕೋರ್ಟ್

ದೇಶಾದ್ಯಂತ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿ, ಭಯೋತ್ಪಾದಕ ಸಂಘಟನೆಗಳಿಗೆ ನೇಮಕಾತಿ ನಡೆಸುತ್ತಿದ್ದ ಪ್ರಕರಣದಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ 4 ಉಗ್ರರು ದೋಷಿಗಳೆಂದು ದೆಹಲಿ ಕೋರ್ಟ್ ತೀರ್ಪು ನೀಡಿದೆ.

ನವದೆಹಲಿ: ದೇಶಾದ್ಯಂತ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿ, ಭಯೋತ್ಪಾದಕ ಸಂಘಟನೆಗಳಿಗೆ ನೇಮಕಾತಿ ನಡೆಸುತ್ತಿದ್ದ ಪ್ರಕರಣದಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ 4 ಉಗ್ರರು ದೋಷಿಗಳೆಂದು ದೆಹಲಿ ಕೋರ್ಟ್ ತೀರ್ಪು ನೀಡಿದೆ.
 
ವಿಶೇಷ ನ್ಯಾಯಾಧೀಶರಾದ ಸಂಜಯ್ ಖನಗ್ವಾಲ್ ನೇತೃತ್ವದ ಪೀಠ, ಮೌಲಾನಾ ಮೊಹಮ್ಮದ್ ಅಬ್ದುಲ್ ರೆಹಮಾನ್ ಕಸ್ಮಿ, ಮೊಹಮ್ಮದ್ ಅಸೀಫ್, ಜಫರ್ ಮಸೂದ್ ಹಾಗೂ ಅಬ್ದುಲ್ ಸಮಿ ವಿರುದ್ಧ ಯುಎಪಿಎ ಅಡಿಯಲ್ಲಿ  ದೋಷಿಗಳೆಂದು ಕೋರ್ಟ್ ತೀರ್ಪು ಪ್ರಕಟಿಸಿದೆ. 

ಶಿಕ್ಷೆಯ ಪ್ರಮಾಣಣಕ್ಕೆ ಸಂಬಂಧಿಸಿದ ವಾದವನ್ನು ಕೋರ್ಟ್ ಫೆ.14 ರಂದು ಆಲಿಸುವ ಸಾಧ್ಯತೆ ಇದೆ. ಇನ್ನು ಕೋರ್ಟ್ ಶಂಕಿತ ಉಗ್ರರಾಗಿದ್ದ ಸಯೀದ್ ಮೊಹಮ್ಮದ್ ಜೀಷನ್ ಅಲಿ ಹಾಗೂ ಸಬೀಲ್ ಅಹ್ಮದ್ ಎಂಬ ಇಬ್ಬರನ್ನು ಕೋರ್ಟ್ ಖುಲಾಸೆಗೊಳಿಸಿದೆ. 

Related Stories

No stories found.

Advertisement

X
Kannada Prabha
www.kannadaprabha.com