ಬ್ರಿಟನ್ ನಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಧುನಿಕ ಗುಲಾಮಗಿರಿಗೆ ಗುರಿ; ಭಾರತದಿಂದ ರಕ್ಷಣೆಗೆ ಕ್ರಮ

ಕೇರ್ ಹೋಮ್ ಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಬ್ರಿಟನ್ ನಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಧುನಿಕ ಗುಲಾಮಗಿರಿಗೆ ಗುರಿಯಾಗಿದ್ದು, ಭಾರತದಿಂದ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. 
ಬ್ರಿಟನ್
ಬ್ರಿಟನ್

ನವದೆಹಲಿ: ಕೇರ್ ಹೋಮ್ ಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಬ್ರಿಟನ್ ನಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಧುನಿಕ ಗುಲಾಮಗಿರಿಗೆ ಗುರಿಯಾಗಿದ್ದು, ಭಾರತದಿಂದ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. 
  
ನಾರ್ತ್ ವ್ಹೇಲ್ಸ್ ನಲ್ಲಿ ಈ ರೀತಿಯ ಘಟನೆ ವರದಿಯಾಗಿದ್ದು, ಲಂಡನ್ ನಲ್ಲಿರುವ ಭಾರತೀಯ ಹೈ ಕಮಿಷನ್ ವಿದ್ಯಾರ್ಥಿಗಳ ಸಹಾಯಕ್ಕೆ ನೆರವಿನ ಹಸ್ತ ಚಾಚಿದ್ದು, ಈ ರೀತಿಯ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವು ಕೇಳುವಂತೆ ಕರೆ ನೀಡಿದೆ. 

ಕಾರ್ಮಿಕರ ಶೋಷಣೆಯ ತಡೆಗಾಗಿ ಇರುವ ಬ್ರಿಟನ್ ಸರ್ಕಾರದ ಗುಪ್ತಚರ ಹಾಗೂ ತನಿಖಾ ಸಂಸ್ಥೆ ಗ್ಯಾಂಗ್‌ಮಾಸ್ಟರ್‌ಗಳು ಮತ್ತು ಕಾರ್ಮಿಕ ನಿಂದನೆ ಪ್ರಾಧಿಕಾರ ಈ ವಾರದಲ್ಲಿ ವರದಿ ಪ್ರಕಟಿಸಿ, ಕಾರ್ಮಿಕರ ನಿಂದನೆ ವಿರುದ್ಧ ಕೋರ್ಟ್ ಆದೇಶ ತರುವುದರಲ್ಲಿ ಯಶಸ್ವಿಯಾಗಿದೆ ಎಂದು ಹೇಳಿತ್ತು. 

ಜಿಎಲ್ಎಎ ಪ್ರಕಾರ 50ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಆಧುನಿಕ ಗುಲಾಮಗಿರಿಗೆ ಗುರಿಯಾಗಿದ್ದು, 14 ತಿಂಗಳಿನಿಂದ್ಮ ಕಾರ್ಮಿಕ ನಿಂದನೆಗೆ ಒಳಗಾಗಿದ್ದಾರೆ ಎಂದು ಹೇಳಿದೆ.

ಈ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಹೈ ಕಮಿಷನ್, ಈ ಸುದ್ದಿಯನ್ನು ಗಮನಿಸಿ ಆತಂಕವಾಗಿದ್ದು, ಈ ರೀತಿಯ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳು pol3.london@mea.gov.in ಮೂಲಕ ನಮ್ಮನ್ನು ಸಂಪರ್ಕಿಸಬಹುದು, ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ಟ್ವೀಟ್ ಮಾಡಿದೆ. 

ಮ್ಯಾಥ್ಯೂ ಐಸಾಕ್, 32, ಜಿನು ಚೆರಿಯನ್, 30, ಎಲ್ದೋಸ್ ಚೆರಿಯನ್, 25, ಎಲ್ದೋಸ್ ಕುರಿಯಾಚನ್, 25, ಮತ್ತು ಜಾಕೋಬ್ ಲಿಜು, 47 ಎಂಬ 5 ಮಂದಿ, ನಾರ್ತ್ ವ್ಹೇಲ್ಸ್ ನಲ್ಲಿ ಕೇರ್ ಹೋಮ್ಸ್ ಗಳಲ್ಲಿ ಕೆಲಸಕ್ಕೆ ದುರ್ಬಲ ಭಾರತೀಯ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಂಡು ಶೋಷಣೆಗೆ ಒಳಪಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಐವರ ವಿರುದ್ಧವೂ ಗುಲಾಮಗಿರಿ ಮತ್ತು ಕಳ್ಳಸಾಗಣೆ ಅಪಾಯದ ಆದೇಶ ಹೊರಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com