ಹಿಂದುತ್ವಕ್ಕೆ ಮೋದಿ ಕೊಡುಗೆ ಶೂನ್ಯ; ವಿಶ್ವಗುರುವಾಗಲು ಬುದ್ಧಿವಂತಿಕೆ ಅಗತ್ಯ: ಸುಬ್ರಮಣಿಯನ್ ಸ್ವಾಮಿ

ಹಿಂದುತ್ವಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಶೂನ್ಯ ಎಂದು ಅರ್ಥಶಾಸ್ತ್ರಜ್ಞ ಮತ್ತು ರಾಜಕೀಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ ಹಾಗು ಮೋದಿ ಅವರು ರಾಮಮಂದಿರವನ್ನು ಕೊನೆಯವರೆಗೂ ವಿರೋಧಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ.
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ

ಚೆನ್ನೈ: ಹಿಂದುತ್ವಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಶೂನ್ಯ ಎಂದು ಅರ್ಥಶಾಸ್ತ್ರಜ್ಞ ಮತ್ತು ರಾಜಕೀಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ ಹಾಗು ಮೋದಿ ಅವರು ರಾಮಮಂದಿರವನ್ನು ಕೊನೆಯವರೆಗೂ ವಿರೋಧಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ.

ಶುಕ್ರವಾರ ಚೆನ್ನೈನ ಥಿಂಕ್‌ಎಡು ಕಾನ್‌ಕ್ಲೇವ್‌ನಲ್ಲಿ ‘ದಿ ಗ್ಲೋಬಲ್ ಹೈ ಟೇಬಲ್: ಕ್ಯಾನ್ ಇಂಡಿಯಾ ಬಿ ಎ ವಿಶ್ವಗುರು’ ಎಂಬ ವಿಷಯ ಕುರಿತು ಮಾತನಾಡಿದ ಸ್ವಾಮಿ ಮೋದಿ, ರಾಮಮಂದಿರವನ್ನು ಕೊನೆಯವರೆಗೂ ವಿರೋಧಿಸಿದರು.

ಸುಪ್ರೀಂ ಕೋರ್ಟ್ ನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿರುವಾಗ ಅವರು ತಮ್ಮ ಸ್ನೇಹಿತ ಎಸ್ ಗುರುಮೂರ್ತಿ ಅವರನ್ನು ಅರ್ಜಿ ಸಲ್ಲಿಸಲು ಕರೆದೊಯ್ದಿದ್ದರು. ಮಂದಿರ ನಿರ್ಮಾಣಕ್ಕೆ ಮಂಜೂರಾದ ಭೂಮಿಯನ್ನು ವಾಪಸ್ ಕೊಡಬೇಕೆಂದು ಪ್ರಧಾನಿ ಮೋದಿ ಬಯಸಿದ್ದರು. ಆದರೆ  ಸುಪ್ರೀಂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು. ಮಾಜಿ ಪ್ರಧಾನಿ ನರಸಿಂಹರಾವ್ ಅವರ ಅಧಿಕಾರಾವಧಿಯಲ್ಲಿ ಭೂಮಿಯನ್ನು ರಾಷ್ಟ್ರೀಕರಣಗೊಳಿಸಲಾಯಿತು ಎಂದರು.

ಮೋದಿಯವರೊಂದಿಗೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿಲ್ಲ ಎಂದು ಹೇಳಿದ ಸ್ವಾಮಿ, ಚೀನಾ ಮತ್ತು ಆರ್ಥಿಕ ನೀತಿಗಳ ಕುರಿತಾದ ಪ್ರಧಾನಿಯವರ ನೀತಿಗಳನ್ನು ವಿರೋಧಿಸುವುದಾಗಿ ಹೇಳಿದರು. ವಿಶ್ವಗುರುವಿನ ಪರಿಕಲ್ಪನೆಯಲ್ಲಿ, ಗಡಿ ಸಮಸ್ಯೆಗಳ ಬಗ್ಗೆ ಚೀನಾಕ್ಕೆ ಮಿಲಿಟರಿ ಪ್ರತಿಕ್ರಿಯೆ ನೀಡಿದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ ಎಂದು ಹೇಳಿದರು. ವಿಶ್ವಗುರುವಾಗಲು ಬುದ್ಧಿವಂತಿಕೆ ಅಗತ್ಯ ಎಂದರು.

"ಗುರುಗಳು, ಸಾಧುಗಳು ಮತ್ತು ಸನ್ಯಾಸಿಗಳು ಆರು ವಿಭಿನ್ನ ರೀತಿಯ ಬುದ್ಧಿಮತ್ತೆಯನ್ನು ಹೊಂದಿರುತ್ತಾರೆ. ಅವುಗಳೆಂದರೆ ಅರಿವು, ಭಾವನಾತ್ಮಕ, ಸಾಮಾಜಿಕ, ನೈತಿಕ, ಪರಿಸರ ಮತ್ತು ಆದ್ಯಾತ್ಮಿಕತೆಯಾಗಿರುತ್ತದೆ. ಆಧುನಿಕ ತಂತ್ರಜ್ಞಾನಗಳನ್ನು ರೂಪಿಸುವ ಶತಮಾನಗಳ ಮೊದಲು ಭಾರತ ಇತರ ದೇಶಗಳಿಗಿಂತ ಮುಂದಿತ್ತು ಎಂದು ಸ್ವಾಮಿ ಹೇಳಿದರು.

ನಾನು ನೋಡಿದ್ದರಲ್ಲಿ ವಿಮಾನ ಶಾಸ್ತ್ರ ಎಂಬ ಹಸ್ತಪ್ರತಿ ಇತ್ತು. ಅದನ್ನು ನೋಡಿ ನನಗೆ ಆಶ್ಚರ್ಯವಾಯಿತು.  ಹೇಗೆ ಹಾರುವುದು, ವಿಮಾನವನ್ನು ಹೇಗೆ ನಿರ್ಮಿಸುವುದು ಮತ್ತು ಅವರು ಯಾವ ಇಂಧನವನ್ನು ಸೂಚಿಸುತ್ತಿದ್ದಾರೆ ಎಂಬುದರ ಬಗ್ಗೆ ವಿವರಣೆ ಇತ್ತು.

ಮರ್ಕ್ಯೂರಿ ಭವಿಷ್ಯದಲ್ಲಿ ವಿಮಾನಕ್ಕೆ ಇಂಧನವಾಗಬಹುದೇ ಎಂದು ನಾನು ವಿಜ್ಞಾನಿಯನ್ನು ಕೇಳಿದೆ.  ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು. ನೀವು ಈ ಎಲ್ಲಾ ಇತರ ಕ್ಷೇತ್ರಗಳಲ್ಲಿಯೂ ಕಾಣಬಹುದು, ನಾವು ಇಡೀ ಜಗತ್ತನ್ನು ಆಕರ್ಷಿಸಲು ಸಾಧ್ಯವಿದೆ ಮತ್ತು ನಮ್ಮಂತಹ ದೊಡ್ಡ ದೇಶವು ವಿಶ್ವಗುರುವಾಗುವುದು ನಮ್ಮ ವ್ಯಾಪ್ತಿಯಲ್ಲಿರುವ ವಿಷಯ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com