ಏಪ್ರಿಲ್ 25 ರಂದು ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಿದೆ

ಚಳಿಗಾಲದ ಅವಧಿಯಲ್ಲಿ ಬಂದ್ ಆಗಿದ್ದ, ಚಾರ್ ಧಾಮ್ ಗಳಲ್ಲಿ ಒಂದಾದ ಕೇದಾರನಾಥ ದೇವಾಲಯದ ಬಾಗಿಲು ಸುಮಾರು ಆರು ತಿಂಗಳ ನಂತರ ಏಪ್ರಿಲ್ 25 ರಂದು ತೆರೆಯಲಿದೆ.
ಕೇದಾರನಾಥ ದೇವಾಲಯ
ಕೇದಾರನಾಥ ದೇವಾಲಯ

ಡೆಹ್ರಾಡೂನ್: ಚಳಿಗಾಲದ ಅವಧಿಯಲ್ಲಿ ಬಂದ್ ಆಗಿದ್ದ, ಚಾರ್ ಧಾಮ್ ಗಳಲ್ಲಿ ಒಂದಾದ ಕೇದಾರನಾಥ ದೇವಾಲಯದ ಬಾಗಿಲು ಸುಮಾರು ಆರು ತಿಂಗಳ ನಂತರ ಏಪ್ರಿಲ್ 25 ರಂದು ತೆರೆಯಲಿದೆ.

ಏಪ್ರಿಲ್ 25 ರಂದು ಬೆಳಗ್ಗೆ 6.20 ಕ್ಕೆ ಹಿಮಾಲಯ ದೇವಾಲಯದ ದ್ವಾರಗಳನ್ನು ಭಕ್ತರ ದರ್ಶನಕ್ಕಾಗಿ ತೆರೆಯಲಾಗುವುದು ಎಂದು ಬದರಿನಾಥ್-ಕೇದಾರನಾಥ ಮಂದಿರ ಸಮಿತಿ(ಬಿಕೆಟಿಸಿ) ಮೂಲಗಳು ತಿಳಿಸಿವೆ.

ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಶನಿವಾರ ಉಖಿಮಠದ ಓಂಕಾರೇಶ್ವರ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ದೇವಾಲಯದ ಬಾಗಿಲು ತೆರೆಯುವ ಸಮಯ ಮತ್ತು ದಿನಾಂಕವನ್ನು ಪ್ರಕಟಿಸಲಾಯಿತು.

ಸಮಾರಂಭದಲ್ಲಿ ಬಿಕೆಟಿಸಿ ಅಧಿಕಾರಿಗಳು, ತೀರ್ಥಪುರೋಹಿತರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇದಾರನಾಥವನ್ನು ಬಂದ್ ಮಾಡಿದ ನಂತರ ಚಳಿಗಾಲದಲ್ಲಿ ಪೂಜಿಸುವ ಉಖಿಮಠದ ಓಂಕಾರೇಶ್ವರ ದೇವಸ್ಥಾನಕ್ಕೆ ಪ್ರತಿ ವರ್ಷ ಶಿವನ ವಿಗ್ರಹವನ್ನು ಕೆಳಗೆ ತರಲಾಗುತ್ತದೆ.

ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಈಗಾಗಲೇ ಏಪ್ರಿಲ್ 27 ಮತ್ತು ಏಪ್ರಿಲ್ 22 ರಂದು ತೆರೆಯಲು ನಿರ್ಧರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com