ಅಲ್ಲಾ ಶಬ್ದದ ಮೂಲ ಸಂಸ್ಕೃತದ್ದು: ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ 

ಅಲ್ಲಾ ಶಬ್ದದ ಮೂಲ ಸಂಸ್ಕೃತದ್ದು ಎಂದು ಪೂರ್ವಾಮ್ನಾಯ ಗೋವರ್ಧನ ಪುರಿ ಪೀಠದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮಿಗಳು ಹೇಳಿದ್ದಾರೆ.
ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ
ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ

ವಾರಣಾಸಿ: ಅಲ್ಲಾ ಶಬ್ದದ ಮೂಲ ಸಂಸ್ಕೃತದ್ದು ಎಂದು ಪೂರ್ವಾಮ್ನಾಯ ಗೋವರ್ಧನ ಪುರಿ ಪೀಠದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮಿಗಳು ಹೇಳಿದ್ದಾರೆ.

ಅಲ್ಲಾ ಶಬ್ದ ಜಗನ್ಮಾತೆಯ "ಶಕ್ತಿ"ಯ ಸೂಚಕವಾಗಿದೆ. ದುರ್ಗಾ ಮಾತೆಯನ್ನು ಪ್ರಾರ್ಥಿಸಲು ಈ ಶಬ್ದ ಬಳಸಲಾಗುತ್ತದೆ ಎಂದು ಹೇಳಿರುವ ನಿಶ್ಚಲಾನಂದ ಸರಸ್ವತಿ ಶ್ರೀಗಳು, ಹಿಂದೆ, ಪ್ರತಿಯೊಬ್ಬ ಭಾರತೀಯನೂ ವೈದಿಕ ಆರ್ಯನೇ ಆಗಿದ್ದ ಎಂದೂ ತಿಳಿಸಿದ್ದಾರೆ.
 
ಜಗತ್ತಿನಲ್ಲಿರುವುದು ಒಂದೇ ಧರ್ಮ ಅದು ಸನಾತನ ಧರ್ಮವಾಗಿದೆ ಎಂದಿರುವ ನಿಶ್ಚಲಾನಂದ ಸರಸ್ವತಿ ಸ್ವಾಮಿಗಳು, ಈಗ ಧರ್ಮವೆನಿಸಿಕೊಳ್ಳುತ್ತಿರುವುದೆಲ್ಲವೂ ಕೇವಲ ಮತಗಳಷ್ಟೇ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಧರ್ಮದ ಬಗ್ಗೆ ಪ್ರಶ್ನೆ ಕೇಳುವವರೆಲ್ಲರೂ ಸಂಸ್ಕೃತ ವ್ಯಾಕರಣವನ್ನು ಕಲಿಯಬೇಕೆಂದು ಹೇಳಿದ್ದಾರೆ. 

ಇದೇ ವೇಳೆ ಓಂ ಹಾಗೂ ಅಲ್ಲಾಹ್ ಎಂಬ ಶಬ್ದಗಳು ಒಂದೇ ಎಂದು ಹೇಳಿದ್ದ ಮೌಲಾನಾ ಸಯೀದ್ ಅರ್ಶದ್ ಮದನಿ ಅವರ ಹೇಳಿಕೆಯನ್ನು ನಿಶ್ಚಲಾನಂದ ಸರಸ್ವತಿ ಸ್ವಾಮಿಗಳು ಖಂಡಿಸಿದ್ದಾರೆ.

ರಾಮಚರಿತಮಾನಸವನ್ನು ಪ್ರಶ್ನಿಸುವವರು ಚಾಣಕ್ಯ ನೀತಿಯನ್ನು ಅಧ್ಯಯನ ಮಾಡಬೇಕು ಎಂದೂ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮಿಗಳು ಹೇಳಿದ್ದು, ಪಂಡಿತ್ ಧಿರೇಂದ್ರ ಶಾಸ್ತ್ರಿ ಅವರನ್ನು ಬೆಂಬಲಿಸಿ, ಅವರು ಹಿಂದೂಗಳನ್ನು ರಕ್ಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com