ಪಂಜಾಬ್, ಹರಿಯಾಣ ಮುಖ್ಯಮಂತ್ರಿಗಳ ಮನೆ ಬಳಿ ಬಾಂಬ್ ಶೆಲ್ ಪತ್ತೆ

ಚಂಡೀಗಢದಲ್ಲಿರುವ ಪಂಜಾಬ್ ಮತ್ತು ಹರಿಯಾಣ ಮುಖ್ಯಮಂತ್ರಿಗಳ ಅಧಿಕೃತ ನಿವಾಸಗಳಿಂದ ಕೆಲವೇ ಕೆಲವು ನೂರು ಮೀಟರ್ ದೂರದಲ್ಲಿ ಬಾಂಬ್ ಶೆಲ್ ಪತ್ತೆಯಾಗಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಧಾವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಶೆಲ್ ಪತ್ತೆ
ಬಾಂಬ್ ಶೆಲ್ ಪತ್ತೆ

ಚಂಡೀಗಢ: ಚಂಡೀಗಢದಲ್ಲಿರುವ ಪಂಜಾಬ್ ಮತ್ತು ಹರಿಯಾಣ ಮುಖ್ಯಮಂತ್ರಿಗಳ ಅಧಿಕೃತ ನಿವಾಸಗಳಿಂದ ಕೆಲವೇ ಕೆಲವು ನೂರು ಮೀಟರ್ ದೂರದಲ್ಲಿ ಬಾಂಬ್ ಶೆಲ್ ಪತ್ತೆಯಾಗಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಧಾವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ನಿವಾಸದಿಂದ ಸುಮಾರು 500-700 ಮೀಟರ್ ದೂರದಲ್ಲಿರುವ ನಯಾಗಾಂವ್-ಕನ್ಸಾಲ್ ರಸ್ತೆಯಲ್ಲಿ ಬಾಂಬ್ ಪತ್ತೆಯಾಗಿದೆ ಎಂದು ವರದಿಯಾಗಿದೆ.

"ಇಲ್ಲಿ ಜೀವಂತ ಬಾಂಬ್ ಶೆಲ್ ಪತ್ತೆಯಾಗಿದೆ. ಅದನ್ನು ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ನಿಷ್ಕ್ರಿಯಗೊಳಿಸಲಾಗಿದೆ. ಸೇನಾ ತಂಡವನ್ನು ಕರೆಸಲಾಗಿದೆ. ಪ್ರದೇಶವನ್ನು ಸುತ್ತುವರಿಯಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಚಂಡೀಗಢ ವಿಪತ್ತು ನಿರ್ವಹಣೆ ನೋಡಲ್ ಅಧಿಕಾರಿ ಸಂಜೀವ್ ಕೊಹ್ಲಿ ಹೇಳಿದ್ದಾರೆ. , 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿ....

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com