ಬಂಗಾಳದಲ್ಲಿ ಓಮಿಕ್ರಾನ್ ನ ಉಪತಳಿ ಬಿಎಫ್.7 ನ ನಾಲ್ಕು ಪ್ರಕರಣಗಳು ಪತ್ತೆ

ಓಮಿಕ್ರಾನ್ ನ ಉಪತಳಿ ಬಿಎಫ್.7 ನ ಉಪತಳಿಗಳ ನಾಲ್ಕು ಪ್ರಕರಣಗಳು ಬಂಗಾಳದಲ್ಲಿ ಪತ್ತೆಯಾಗಿದೆ.
ಓಮಿಕ್ರಾನ್ (ಸಾಂಕೇತಿಕ ಚಿತ್ರ)
ಓಮಿಕ್ರಾನ್ (ಸಾಂಕೇತಿಕ ಚಿತ್ರ)
Updated on

ಕೋಲ್ಕತ್ತ: ಓಮಿಕ್ರಾನ್ ನ ಉಪತಳಿ ಬಿಎಫ್.7 ನ ಉಪತಳಿಗಳ ನಾಲ್ಕು ಪ್ರಕರಣಗಳು ಬಂಗಾಳದಲ್ಲಿ ಪತ್ತೆಯಾಗಿದೆ.
 
ಇತ್ತೀಚೆಗೆ ಅಮೇರಿಕಾದಿಂದ ವಾಪಸ್ಸಾಗಿದ್ದ ನಾಲ್ಕು ಮಂದಿಯ ಸೋಂಕಿನ ಮಾದರಿಗಳ ಜಿನೋಮ್ ಸೀಕ್ವೆನ್ಸಿಂಗ್ ನಲ್ಲಿ ಈ ನಾಲ್ಕೂ ಮಂದಿ ಕೊರೋನಾದ ಹೊಸ ಉಪತಳಿಗಳಿಂದ ಸೋಂಕಿತರಾಗಿರುವುದು ದೃಢಪಟ್ಟಿದೆ.

ಹೊಸ ರೂಪಾಂತರಿ ಸೋಂಕಿಗೆ ತುತ್ತಾಗಿರುವವರ ಸ್ಥಿತಿ ಸ್ಥಿರವಾಗಿದ್ದು, ಮೂವರು ನಾದಿಯಾ ಜಿಲ್ಲೆಯವರಾಗಿದ್ದರೆ, ಓರ್ವ ಬಿಹಾರ್ ನ ಮೂಲದ ವ್ಯಕ್ತಿಯಾಗಿದ್ದು ಕೋಲ್ಕತ್ತಾದಲ್ಲಿ ಜೀವಿಸುತ್ತಿದ್ದಾರೆ.
 
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಕಳೆದ ವಾರ ಓರ್ವ ವಿದೇಶಿ ಪ್ರಜೆ ಸೇರಿದಂತೆ ಇಬ್ಬರು ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು, ಅವರ ಜಿನೋಮಿಕ್ ಸೀಕ್ವೆನ್ಸಿಂಗ್ ನಲ್ಲಿ ಅವರಿಗೆ ಓಮಿಕ್ರಾನ್ ನ ಬಿಎಫ್.7 ಉಪತಳಿ ಸೋಂಕು ದೃಢಪಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com