ಅಮೇರಿಕಾ ಪ್ರಯೋಗಾಲಯದ ವರದಿ ಉಲ್ಲೇಖಿಸಿ ಪ್ರಕರಣದಿಂದ ಮುಕ್ತಿ ಕೋರಿದ ಎಲ್ಗಾರ್ ಆರೋಪಿ ವೆರ್ನಾನ್ ಗೊನ್ಸಾಲ್ವಿಸ್ 

ಎಲ್ಗಾರ್ ಆರೋಪಿ ವೆರ್ನಾನ್ ಗೊನ್ಸಾಲ್ವಿಸ್ ತಮ್ಮನ್ನು ಎಲ್ಗಾರ್ ಪರಿಷತ್-ಮಾವೊವಾದಿ ಸಂಬಂಧದ ಪ್ರಕರಣದಿಂದ ಕೈಬಿಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ. 
ಎಲ್ಗಾರ್ ಆರೋಪಿ ವೆರ್ನಾನ್ ಗೊನ್ಸಾಲ್ವಿಸ್
ಎಲ್ಗಾರ್ ಆರೋಪಿ ವೆರ್ನಾನ್ ಗೊನ್ಸಾಲ್ವಿಸ್

ಮುಂಬೈ: ಎಲ್ಗಾರ್ ಆರೋಪಿ ವೆರ್ನಾನ್ ಗೊನ್ಸಾಲ್ವಿಸ್ ತಮ್ಮನ್ನು ಎಲ್ಗಾರ್ ಪರಿಷತ್-ಮಾವೊವಾದಿ ಸಂಬಂಧದ ಪ್ರಕರಣದಿಂದ ಕೈಬಿಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ. 

ಅಮೇರಿಕಾದ ಪ್ರಯೋಗಾಲಯದ ವರದಿಯನ್ನು ಉಲ್ಲೇಖಿಸಿ ತಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸುವುದಕ್ಕಾಗಿ ವೆರ್ನಾನ್ ಗೊನ್ಸಾಲ್ವಿಸ್ ಮನವಿ ಮಾಡಿದ್ದಾರೆ. 

ವೆರ್ನಾನ್ ಗೊನ್ಸಾಲ್ವಿಸ್ ಅವರನ್ನು 2018 ರ ಆಗಸ್ಟ್ ನಲ್ಲಿ ಬಂಧಿಸಲಾಗಿತ್ತು. 

ಎಲ್ಗಾರ್ ಪರಿಷತ್-ಮಾವೊವಾದಿಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪ ಎದುರಿಸುತ್ತಿರುವ ವೆರ್ನಾನ್ ಗೊನ್ಸಾಲ್ವಿಸ್  ಅವರು ಈಗ ನವಿ ಮುಂಬೈ ನ ತಲೋಜಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.  ಅಮೇರಿಕಾದ ಡಿಜಿಟಲ್ ವಿಧಿವಿಜ್ಞಾನ ಸಲಹಾ ಕಂಪನಿಯಾಗಿರುವ ಆರ್ಸೆನಲ್ ಕನ್ಸಲ್ಟಿಂಗ್ ನ ವಿಧಿವಿಜ್ಞಾನ ವಿಶ್ಲೇಷಣೆ ಪ್ರಕಾರ, ಮಾಲ್ವೇರ್ ನ್ನು ಬಳಕೆ ಮಾಡಿಕೊಂಡು ತಮ್ಮ ಹಾಗೂ ಇತರ ಆರೋಪಿಗಳ ಕಂಪ್ಯೂಟರ್ ನಲ್ಲಿ ದೋಷಾರೋಪಣೆಗೆ ಪೂರಕವಾದ ದಾಖಲೆಗಳನ್ನು ಸೇರಿಸಲಾಗಿದೆ ಎಂದು ವೆರ್ನಾನ್ ಗೊನ್ಸಾಲ್ವಿಸ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. 

ಇದು ಈ ಪ್ರಕರಣದಲ್ಲಿ ಪ್ರಮುಖವಾದ ಸಾಕ್ಷ್ಯವಾಗಿರುವುದರಿಂದ ಇಡೀ ಪ್ರಕರಣದ ಆಧಾರವೇ ಪ್ರಶ್ನೆಗೆ ಅರ್ಹವಾಗಿದೆ ಎಂದು ವೆರ್ನಾನ್ ಗೊನ್ಸಾಲ್ವಿಸ್ ವಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com