PWD ಎಡವಟ್ಟು; 20 ವರ್ಷಗಳ ಕಾನೂನು ಹೋರಾಟ; ಗುತ್ತಿಗೆದಾರನಿಗೆ 'ಮಹಾ' ಸರ್ಕಾರ ಈಗ ಕೊಡಬೇಕಿರುವುದು 100 ಪಟ್ಟು ಹೆಚ್ಚು ಪರಿಹಾರ!

1998ರ 2.26 ಕೋಟಿ ರೂಪಾಯಿ ಮೊತ್ತದ ಮೂಲಸೌಕರ್ಯ ಒಪ್ಪಂದದ ಗೊಂದಲದಿಂದಾಗಿ ಮಹಾರಾಷ್ಟ್ರ ಸರ್ಕಾರವು ಇದೀಗ ಗುತ್ತಿಗೆದಾರನಿಗೆ 540 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮುಂಬೈ: 1998ರ 2.26 ಕೋಟಿ ರೂಪಾಯಿ ಮೊತ್ತದ ಮೂಲಸೌಕರ್ಯ ಒಪ್ಪಂದದ ಗೊಂದಲದಿಂದಾಗಿ ಮಹಾರಾಷ್ಟ್ರ ಸರ್ಕಾರವು ಇದೀಗ ಗುತ್ತಿಗೆದಾರನಿಗೆ 540 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತಾಗಿದೆ.

1998ರ ನವೆಂಬರ್ ನಲ್ಲಿ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ(PWD) ನಿರ್ಮಾಣ, ಕಾರ್ಯಾಚರಣೆ ಮತ್ತು ವರ್ಗಾವಣೆ (BOT) ಆಧಾರದ ಮೇಲೆ M/s ಖರೆ ಮತ್ತು ತಾರ್ಕುಂಡೆ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‌ಗೆ ಚಂದ್ರಾಪುರ ಜಿಲ್ಲೆಯಲ್ಲಿ ಸರಣಿ ರಸ್ತೆ ಸೇತುವೆಗಳ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ನೀಡಿತ್ತು.

ಅದರಂತೆ ಎರಡು ವರ್ಷಗಳಲ್ಲಿ ಕಂಪನಿ ಕೆಲಸವನ್ನು ಪೂರ್ಣಗೊಳಿಸಿತ್ತು. ಬಳಿಕ ಟೋಲ್ ಬೂತ್‌ಗಳಿಂದ ಆದಾಯವನ್ನು ಸಂಗ್ರಹಿಸಲು ಪ್ರಾರಂಭಿಸಿತು. ಆದರೆ 2003ರಲ್ಲಿ PWD ಏಕಪಕ್ಷೀಯವಾಗಿ ಟೋಲ್ ಬೂತ್‌ಗಳನ್ನು ಮುಚ್ಚಿ, ತನ್ನ ವಶಕ್ಕೆ ತೆಗೆದುಕೊಂಡಿತು. ಇನ್ನು ಕಾಮಗಾರಿ ಗುತ್ತಿಗೆ ನೀಡು ವೇಳೆ ಗುತ್ತಿಗೆದಾರರು ಎಷ್ಟು ಸಮಯದವರೆಗೆ ಟೋಲ್ ಬೂತ್‌ಗಳನ್ನು ನಡೆಸುವ ಹಕ್ಕನ್ನು ಹೊಂದಿದ್ದಾರೆ ಎಂಬುದು ವರದಿಯನ್ನು ಸ್ಪಷ್ಟವಾಗಿ ನಮೂದಿಸಿರಲಿಲ್ಲ. ಹೀಗಾಗಿ ಕಂಪನಿ ಪಿಡಬ್ಲ್ಯೂಡಿ ವಿರುದ್ಧ ಕಾನೂನು ಸಮರಕ್ಕೆ ಇಳಿಯಿತು.

ಈ ಸಂಬಂಧ ಸರ್ಕಾರ ನಿವೃತ್ತ ಮುಖ್ಯ ಪಿಡಬ್ಲ್ಯುಡಿ ಇಂಜಿನಿಯರ್ ಆರ್ ಎಚ್ ತಾದ್ವಿ ಅವರನ್ನು ಮಧ್ಯಸ್ಥಗಾರರನ್ನಾಗಿ ನೇಮಿಸಿತ್ತು. 2004ರ ಮಾರ್ಚ್ ನಲ್ಲಿ ತದ್ವಿ ಅವರು ಗುತ್ತಿಗೆದಾರರಿಗೆ ತಿಂಗಳಿಗೆ 25% ಚಕ್ರಬಡ್ಡಿ ಜೊತೆಗೆ 5.71 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ಪಾವತಿಸಲು ಸರ್ಕಾರಕ್ಕೆ ಆದೇಶಿಸಿದರು.

ಈ ಮೊತ್ತವನ್ನು ಪಾವತಿಸುವ ಬದಲು, ಸರ್ಕಾರವು ಜಿಲ್ಲಾ ನ್ಯಾಯಾಲಯಕ್ಕೆ ಹೋಯಿತು. ಕೋರ್ಟ್ ಮಧ್ಯಸ್ಥಗಾರರ ನಿರ್ಧಾರವನ್ನು ಎತ್ತಿಹಿಡಿದಿತ್ತು. ಆದರೆ ಚಕ್ರಬಡ್ಡಿಯನ್ನು ವರ್ಷಕ್ಕೆ 18% ಕ್ಕೆ ಇಳಿಸಿತು. ನಂತರ 2021ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು. ಈ ಸಂಬಂಧ ಹೈಕೋರ್ಟ್ ಮೂರು ತಿಂಗಳಲ್ಲಿ ಸಂಸ್ಥೆಗೆ 240.52 ಕೋಟಿ ರೂಪಾಯಿ ಪಾವತಿಸುವಂತೆ ಸೂಚಿಸಿತು.

M/s Khare ಅವರಿಗೆ ಪೂರ್ಣ ಪ್ರಮಾಣದ ಹಣ ಬರದ ಕಾರಣ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಅದು ಮೊತ್ತವನ್ನು ಮರುಮೌಲ್ಯಮಾಪನ ಮಾಡಿದ ಸುಪ್ರೀಂ ಕೋರ್ಟ್ 540 ಕೋಟಿ ರೂ. ಪಾವತಿಸುವಂತೆ ನಿರ್ದೇಶಿಸಿತು.

ಒಪ್ಪಂದದ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನು ಸ್ಥಾಪಿಸಲು ಕ್ಯಾಬಿನೆಟ್ ನಿರ್ಧರಿಸಿದ್ದರಿಂದ ವಿಚಾರ ಪ್ರಸ್ತುತವಾಗಿದೆ. ಅಲ್ಲಿ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ  ಕ್ಯುರೇಟಿವ್ ಅರ್ಜಿ ಸಲ್ಲಿಸಲು ಸಹ ನಿರ್ಧರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com