ಹೊಸ ಶಿಕ್ಷಣ ನೀತಿಯಡಿ 'ಬ್ಯಾಗ್ ರಹಿತ ದಿನ': ಪ್ರತಿ ವಿದ್ಯಾರ್ಥಿಗೆ 4.44 ರೂ. ಅನುದಾನ ನೀಡಿ ನಗೆಪಾಟಲಿಗೀಡಾದ ಗುಜರಾತ್ ಸರ್ಕಾರ!

ಹೊಸ ಶಿಕ್ಷಣ ನೀತಿಯ (NEP) ಭಾಗವಾಗಿ 10 ದಿನ ‘ಬ್ಯಾಗ್‌ ರಹಿತ ದಿನ’ ಹೊಂದಿರುವ ಶಾಲೆಗಳ ಪರಿಕಲ್ಪನೆಯನ್ನು ಜಾರಿಗೆ ತರಲು ಗುಜರಾತ್ ಸರ್ಕಾರವು ಅತ್ಯಲ್ಪ ಹಣ ನಿಗದಿಪಡಿಸಿ ಟೀಕೆಗೆ ಗುರಿಯಾಗುತ್ತಿದೆ. 6ರಿಂದ 8 ನೇ ತರಗತಿಯ ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶೈಕ್ಷಣಿಕ ಕ್ಯಾಲೆಂಡರ್‌ನಲ್ಲಿ ಒಂದಷ್ಟು ದಿನಗಳನ್ನು 'ಬ್ಯಾಗ್‌ಫ್ರೀ ಡೇಸ್' ಎಂದು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಅಹಮದಾಬಾದ್: ಹೊಸ ಶಿಕ್ಷಣ ನೀತಿಯ (NEP) ಭಾಗವಾಗಿ 10 ದಿನ ‘ಬ್ಯಾಗ್‌ ರಹಿತ ದಿನ’ ಹೊಂದಿರುವ ಶಾಲೆಗಳ ಪರಿಕಲ್ಪನೆಯನ್ನು ಜಾರಿಗೆ ತರಲು ಗುಜರಾತ್ ಸರ್ಕಾರವು ಅತ್ಯಲ್ಪ ಹಣ ನಿಗದಿಪಡಿಸಿ ಟೀಕೆಗೆ ಗುರಿಯಾಗುತ್ತಿದೆ. 6ರಿಂದ 8 ನೇ ತರಗತಿಯ ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶೈಕ್ಷಣಿಕ ಕ್ಯಾಲೆಂಡರ್‌ನಲ್ಲಿ ಒಂದಷ್ಟು ದಿನಗಳನ್ನು 'ಬ್ಯಾಗ್‌ಫ್ರೀ ಡೇಸ್' ಎಂದು ಜಾರಿಗೆ ತರಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿತ್ತು. 

ಸಚಿವ ಸಂಪುಟ ಸಭೆಯಲ್ಲಿ ಈ ಪರಿಕಲ್ಪನೆಯನ್ನು ಅನುಮೋದಿಸಿದ ಗುಜರಾತ್ ನ ಭೂಪೇಂದ್ರ ಪಟೇಲ್ ನೇತೃತ್ವದ ಸರ್ಕಾರವು ಇದೀಗ ಪ್ರತಿ ಬ್ಯಾಗ್ ರಹಿತ ದಿನಕ್ಕೆ ಪ್ರತಿ ವಿದ್ಯಾರ್ಥಿಗೆ ಕೇವಲ 4.44 ರೂಪಾಯಿ ನಿಗದಿಪಡಿಸಿದೆ. 

ಈ ಬಗ್ಗೆ ಗುಜರಾತ್‌ನ ಪ್ರಾಥಮಿಕ, ಪ್ರೌಢ ಮತ್ತು ವಯಸ್ಕ ಶಿಕ್ಷಣ ಸಚಿವ ಡಾ. ಕುಬೇರ್ ದಿಂಡೋರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. 'ಬ್ಯಾಗ್‌ಫ್ರೀ ದಿನಗಳಲ್ಲಿ' ವಿದ್ಯಾರ್ಥಿಗಳು ತೋಟಗಾರಿಕೆ, ಮರಗೆಲಸ, ಕುಂಬಾರಿಕೆ, ಲೋಹದ ತಯಾರಿಕೆ ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಅಂತಹ ದಿನಗಳಲ್ಲಿ ವಿದ್ಯಾರ್ಥಿಗಳನ್ನು ವಸ್ತುಸಂಗ್ರಹಾಲಯಗಳು ಮತ್ತು ಪಾರಂಪರಿಕ ತಾಣಗಳ ಪ್ರವಾಸಗಳಿಗೆ ಕರೆದೊಯ್ಯುವಂತೆ ನೀತಿಯು ಸೂಚಿಸುತ್ತದೆ ಎಂದಿದ್ದಾರೆ. 

ತಾಂತ್ರಿಕ ಶಿಕ್ಷಣ ಸಚಿವ ಋಷಿಕೇಶ್ ಪಟೇಲ್ ಪ್ರಕಾರ, ಶಾಲೆಗಳು ಕ್ರೀಡಾಕೂಟಗಳು, ರಾಷ್ಟ್ರೀಯ ಹಬ್ಬಗಳ ಆಚರಣೆಗಳು ಅಥವಾ ಸ್ಥಳೀಯ ಕುಶಲಕರ್ಮಿಗಳೊಂದಿಗೆ ಸಭೆಗಳನ್ನು ಆಯೋಜಿಸಬಹುದು.

ಮೊದಲ ಹಂತದಲ್ಲಿ ರಾಜ್ಯದ 491 ಪ್ರಾಥಮಿಕ ಶಾಲೆಗಳಲ್ಲಿ ಜನವರಿ ಮೊದಲ ವಾರದಲ್ಲಿ ಮತ್ತು ಜನವರಿ ಅಂತ್ಯದಲ್ಲಿ ಎರಡನೇ ಹಂತದಲ್ಲಿ 1,009 ಪ್ರಾಥಮಿಕ ಶಾಲೆಗಳಲ್ಲಿ ಬ್ಯಾಗ್ ರಹಿತ ದಿನಗಳ ಅನುಷ್ಠಾನವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದರು. ಈ ಉದ್ದೇಶಕ್ಕಾಗಿ 2 ಕೋಟಿ ರೂಪಾಯಿಗಳ ಹಣಕಾಸು ಒದಗಿಸಲಾಗಿದ್ದು, ಪ್ರತಿ ಶಾಲೆಗೆ 15,000 ರೂಪಾಯಿ ನೀಡಲಾಗುತ್ತದೆ. 

ಈ ಮೊತ್ತ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಅಹಮದಾಬಾದ್‌ನ ಬರಜಿಯಾ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಗುಜರಾತ್ ಪ್ರಾತಿಮಿಕ್ ಶಿಕ್ಷಕ್ ಸಂಘದ ಪ್ರಚಾರ ಮಂತ್ರಿ ನರೇಂದ್ರ ಗೋಹಿಲ್, “ನಾವು ಪ್ರತಿ ತರಗತಿಗೆ ಎರಡು ವಿಭಾಗಗಳನ್ನು ಪರಿಗಣಿಸಿದರೆ, ಪ್ರತಿಯೊಂದಕ್ಕೂ ಸರಾಸರಿ 50 ವಿದ್ಯಾರ್ಥಿಗಳು, ಒಟ್ಟು 300 ಫಲಾನುಭವಿ ವಿದ್ಯಾರ್ಥಿಗಳಿದ್ದಾರೆ. ಎರಡೂ ಹಂತಗಳಲ್ಲಿ ವ್ಯಾಪ್ತಿಗೆ ಒಳಪಡುವ ಶಾಲೆಗಳ ಸಂಖ್ಯೆ 1,500. ಒಟ್ಟಾರೆಯಾಗಿ, 4,50,000 ವಿದ್ಯಾರ್ಥಿಗಳನ್ನು ಯೋಜನೆಯಲ್ಲಿ ಸೇರಿಸಲಾಗಿದೆ. ಸರ್ಕಾರದ 2 ಕೋಟಿ ನಿಧಿ ಹಂಚಿಕೆಯಿಂದ ಪ್ರತಿ ವಿದ್ಯಾರ್ಥಿಗೆ ಬ್ಯಾಗ್ ರಹಿತ ದಿನಕ್ಕೆ 4 ರೂಪಾಯಿ 44 ಪೈಸೆ ಮಾತ್ರ ಸಿಗುತ್ತದೆ ಎನ್ನುತ್ತಾರೆ.

ಮಾಜಿ ಜಿಲ್ಲಾ ಶಿಕ್ಷಣಾಧಿಕಾರಿ ಕುಸುಮಾನ್ಸು ಪೋಟಾ, “ಗ್ರಾಮಗಳಲ್ಲಿ ಕಡಿಮೆ ಮಕ್ಕಳು ಓದುತ್ತಾರೆ ಎಂದು ನಾವು ಭಾವಿಸಿದರೆ ಪ್ರತಿ ಶಾಲೆಗೆ ಸರಾಸರಿ 60 ಮಕ್ಕಳನ್ನು ತೆಗೆದುಕೊಂಡರೆ, ಆಗಲೂ ಬಜೆಟ್ ತುಂಬಾ ಕಡಿಮೆಯಾಗಿದೆ. ಇಷ್ಟು ಕಡಿಮೆ ಮೊತ್ತದಲ್ಲಿ ಮಕ್ಕಳಿಗೆ ತರಬೇತಿ ನೀಡಲು ಹೇಗೆ ಸಾಧ್ಯ ಎಂದು ಕೇಳುತ್ತಾರೆ. 

ಸೂರತ್ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆಯ ಮಾಜಿ ಪ್ರಾಂಶುಪಾಲ ಗೋವಿಂದ್ ಮೊಧೇರಾ ಸರ್ಕಾರದ ಘೋಷಣೆಯೇ ತಮಾಷೆಯಾಗಿದೆ ಎನ್ನುತ್ತಾರೆ. ಶಾಲೆಗಳು ತಜ್ಞರನ್ನು ಶಾಲೆಗೆ ಕರೆದರೆ, ಅದು ಸಾಮಾನ್ಯವಾಗಿ 3,000-4,000 ರೂ. ವಸ್ತುಸಂಗ್ರಹಾಲಯಗಳು ಮತ್ತು ಇತರ ಸೈಟ್‌ಗಳಿಗೆ ಪ್ರವಾಸಗಳು ಪ್ರಯಾಣ, ಟಿಕೆಟ್‌ಗಳು ಮತ್ತು ಕೆಲವು ಉಪಹಾರಗಳ ವೆಚ್ಚಗಳನ್ನು ಒಳಗೊಂಡಿರುತ್ತವೆ. ಗುಜರಾತಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸರ್ಕಾರ ತಮಾಷೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸರಕಾರಿ ಶಾಲಾ ಮಕ್ಕಳ ಸಮವಸ್ತ್ರಕ್ಕೆ 150 ರೂಪಾಯಿ, ಶಾಲಾ ಪ್ರವೇಶ ಉತ್ಸವಕ್ಕೆ 500 ರೂಪಾಯಿ ನೀಡಿತ್ತು ಎಂದು ಆರೋಪಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com