ಖಾಕಿ ಚಡ್ಡಿ ಧರಿಸಿ ಲಾಠಿ ಹಿಡಿದಿರುತ್ತಾರೆ 21ನೇ ಶತಮಾನದ ಕೌರವರು : ಆರ್‌ಎಸ್‌ಎಸ್‌ ವಿರುದ್ಧ ರಾಹುಲ್ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ, ‘ಆರ್‌ಎಸ್‌ಎಸ್‌ನವರು 21ನೇ ಶತಮಾನದ ಕೌರವರು’ ಎಂದು ಜರಿದಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಚಂಡೀಗಢ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ, ‘ಆರ್‌ಎಸ್‌ಎಸ್‌ನವರು 21ನೇ ಶತಮಾನದ ಕೌರವರು’ ಎಂದು ಜರಿದಿದ್ದಾರೆ.

‘ಹರಿಯಾಣ ಮಹಾಭಾರತದ ನೆಲ. ಕೌರವರು ಯಾರು? ಮೊದಲು ನಿಮಗೆ 21ನೇ ಶತಮಾನದ ಕೌರವರ ಬಗ್ಗೆ ಹೇಳುತ್ತೇನೆ. ಅವರು ಖಾಕಿ ಚೆಡ್ಡಿ ಧರಿಸುತ್ತಾರೆ. ಲಾಠಿ ಹಿಡಿಯುತ್ತಾರೆ, ಶಾಖೆ ನಡೆಸುತ್ತಾರೆ’ ಎಂದು ಹೇಳಿದರು, ಅವರು ಹರ ಹರ ಮಹಾದೇವ, ಸೀತಾರಾಮ ಎಂದು ಜಪಿಸುವುದೇ ಇಲ್ಲ. ಇವು ಭಾರತದ ಮೌಲ್ಯಗಳು ಮತ್ತು ತಪಸ್​ ಶಕ್ತಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.

ತಮ್ಮ ನೇತೃತ್ವದ ಭಾರತ್ ಜೋಡೋ ಯಾತ್ರೆ ನಿನ್ನೆ ಹರಿಯಾಣದ ಅಂಬಾಲಾ ಜಿಲ್ಲೆಗೆ ತಲುಪಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, 'ಹರಿಯಾಣ ಮಹಾಭಾರತದ ನಾಡು. ಮೊದಲು ನಾನಿಲ್ಲಿ 21ನೇ ಶತಮಾನದ ಕೌರವರ ಬಗ್ಗೆ ಹೇಳುವೆ. ಅವರು ಖಾಕಿ ಪ್ಯಾಂಟ್ ಧರಿಸುತ್ತಾರೆ, ಕೈಯಲ್ಲಿ ಲಾಠಿಗಳನ್ನು ಹಿಡಿದುಕೊಳ್ಳುತ್ತಾರೆ. ಶಾಖೆಗಳನ್ನು ನಡೆಸುತ್ತಿದ್ದಾರೆ. ದೇಶದ 2- 3 ಕೋಟ್ಯಾಧಿಪತಿಗಳು ಸಹಿತ ಈ ಕೌರವರ ಜೊತೆಗೆ ನಿಂತಿದ್ದಾರೆ' ಎಂದು ಆರ್​ಎಸ್​ಎಸ್​ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

'ಪಾಂಡವರು ನೋಟು ಅಮಾನ್ಯೀಕರಣ ಮಾಡಿದ್ದರೇ?, ತಪ್ಪು ಜಿಎಸ್‌ಟಿ ಜಾರಿಗೊಳಿಸಿದ್ದರೇ?, ಇಂತಹ ತಪ್ಪು ನಿರ್ಧಾರಗಳನ್ನು ಅವರು ಎಂದಾದರೂ ಮಾಡಿದ್ದರೇ? ಎಂದಿಗೂ ಮಾಡಿಲ್ಲ. ಕಾರಣ ಅವರು ತಪಸ್ವಿಗಳಾಗಿದ್ದರು. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಕೃಷಿ ಕಾನೂನುಗಳು ಜಾರಿ ಮಾಡಿ ಈ ನೆಲದ ರೈತರಿಂದ ಭೂಮಿ ಕದಿಯುವ ಬಗ್ಗೆ ಅವರಿಗೆ(ಪ್ರಧಾನಿ) ಗೊತ್ತಿತ್ತು. ಆದರೂ, ಅವರು ಈ ನಿರ್ಧಾರಗಳಿಗೆ ಸಹಿ ಹಾಕಿದರು. ಇದರ ಹಿಂದೆ ಮೂವರು ಕೋಟಿಕುಳಗಳ ಒತ್ತಡವಿದೆ' ಎಂದು ಆರೋಪಿಸಿದರು.

ಜೈಶ್ರೀರಾಮ್​ ಎಂಬ ಘೋಷಣೆ ಕೂಗುವುದರ ಬಗ್ಗೆಯೂ ಆಕ್ಷೇಪಿಸಿದ ರಾಹುಲ್​ ಗಾಂಧಿ, 'ಆರ್​ಎಸ್​ಎಸ್​ ಕಾರ್ಯಕರ್ತರು ಜೈಶ್ರೀರಾಮ್​ ಎಂಬುದನ್ನು ಬಿಟ್ಟು ಬೇರೆ ಏನೂ ಹೇಳುವುದಿಲ್ಲ. ಜೈ ಸೀತಾರಾಮ, ಹರಹರ ಮಹಾದೇವ ಎಂದು ಕೂಗಲ್ಲ. ನಾನು ಈ ಬಗ್ಗೆ ಹಲವು ಬಾರಿ ಯೋಚಿಸಿದ್ದೇನೆ. ಕಾರಣ ಏನೆಂದರೆ ಭಗವಂತನಾದ ಶಿವನು 'ತಪಸ್ವಿ'. ಆ ತಪಸ್ಸಿನ ಮೇಲೆ ಅವರು ದಾಳಿ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರು ಹರನನ್ನು ಭಜಿಸುವುದಿಲ್ಲ' ಎಂದು ಟೀಕಿಸಿದರು.

'ರಾಮನಷ್ಟೇ ಸೀತಾದೇವಿಯೂ ಮುಖ್ಯ. ಆದರೆ, ಅವರು ಇದನ್ನು ಎಂದಿಗೂ ಹೇಳುವುದಿಲ್ಲ. ಅವರು ಸೀತೆಯನ್ನು ದೂರವಿಟ್ಟಿದ್ದಾರೆ. ನಮ್ಮ ಇತಿಹಾಸ, ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ಸಂಘದವರನ್ನು ಭೇಟಿಯಾದಾಗ ಜೈ ಸೀತಾರಾಮ ಎಂದು ಸ್ವಾಗತಿಸಬೇಕು. ಸೀತೆ ಮತ್ತು ರಾಮ ಇಬ್ಬರೂ ಮುಖ್ಯ' ಎಂದು ರಾಹುಲ್​ ಗಾಂಧಿ ಪ್ರತಿಪಾದಿಸಿದರು.

ಅಂದು ಸತ್ಯ, ಧರ್ಮಕ್ಕಾಗಿ ಮಹಾಭಾರತ ಯುದ್ಧವೇ ನಡೆದಿತ್ತು. ಇಂದು ಕೂಡ ಅದೇ ನಡೆಯುತ್ತಿದೆ. ಆದರೆ, ಜನರಿಗೆ ಅದು ಅರ್ಥವಾಗುತ್ತಿಲ್ಲ. ಇದು ಯಾರ ನಡುವಿನ ಹೋರಾಟ ಗೊತ್ತಾ? ಇಲ್ಲಿ ಪಾಂಡವರು ಯಾರು? ಅರ್ಜುನ, ಭೀಮ ಯಾರು ಗೊತ್ತೇ. ಪಾಂಡವರು ಎಂದೂ ದ್ವೇಷ ಹರಡುವ ಮತ್ತು ಅಮಾಯಕರ ಮೇಲೆ ಯಾವುದೇ ಅಪರಾಧ ಮಾಡಿದ ಬಗ್ಗೆ ನೀವು ಕೇಳಿದ್ದೀರಾ ಎಂದು ಜನರನ್ನು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com