ಏರ್ ಇಂಡಿಯಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಗೆ ಜಾಮೀನು ಇಲ್ಲ

ಏರ್ ಇಂಡಿಯಾದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದ ವ್ಯಕ್ತಿಗೆ ಜಾಮೀನು ನೀಡುವ ಆದೇಶವನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಕಾಯ್ದಿರಿಸಿದೆ. 
ಏರ್ ಇಂಡಿಯಾ
ಏರ್ ಇಂಡಿಯಾ

ದೆಹಲಿ: ಏರ್ ಇಂಡಿಯಾದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದ ವ್ಯಕ್ತಿಗೆ ಜಾಮೀನು ನೀಡುವ ಆದೇಶವನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಕಾಯ್ದಿರಿಸಿದೆ. 

ಕೋರ್ಟ್ ಆದೇಶವನ್ನು ಕಾಯ್ದಿರಿಸಿರುವ ಪರಿಣಾಮ ಸದ್ಯಕ್ಕೆ ವ್ಯಕ್ತಿಗೆ ಜಾಮೀನು ಸಿಕ್ಕಿಲ್ಲ. ಆರೋಪಿ ಶಂಕರ್ ಮಿಶ್ರಾ ಅವರ ಪರ ವಾದ ಮಂಡಿಸಿರುವ ಅಡ್ವೊಕೇಟ್ ಮನು ಶರ್ಮಾ, ಎಫ್ಐಆರ್ ನಲ್ಲಿ ದಾಖಲಾಗಿರುವ ಆರೋಪಗಳ ಪೈಕಿ ಒಂದು ಆರೋಪ ಮಾತ್ರ ಜಾಮೀನು ರಹಿತವಾಗಿದ್ದು, ಉಳಿದೆಲ್ಲವೂ ಜಾಮೀನು ನೀಡಬಹುದಾದ ಆರೋಪಗಳಾಗಿವೆ, ಆದ್ದರಿಂದ ಜಾಮೀನು ನೀಡಬಹುದೆಂದು ವಾದ ಮಂಡಿಸಿದ್ದರು. 

ನಡೆದ ಘಟನೆಗೆ ಸಂಬಂಧಿಸಿದಂತೆ ನನ್ನ ಕಕ್ಷಿದಾರರು ಎಲ್ಲಾ ರೀತಿಯ ತನಿಖೆಗಳಲ್ಲಿ ಭಾಗಿಯಾಗಿದ್ದಾರೆ ಹಾಗೂ ತಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸುವ ಉದ್ದೇಶ ಹೊಂದಿದ್ದಾರೆ. ಪೊಲೀಸರ ತನಿಖೆಗೆ ಸಹಕರಿಸಲಿದ್ದಾರೆ ಎಂದು ಅಡ್ವೊಕೇಟ್ ಮನು ಶರ್ಮಾ ಹೇಳಿದ್ದಾರೆ. 

ಆದರೆ ದೆಹಲಿ ಪೊಲೀಸರು ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಒಂದು ವೇಳೆ ಆರೋಪಿಗೆ ಜಾಮೀನು ನೀಡಿದರೆ, ಆತ ಸಂತ್ರಸ್ತ ವ್ಯಕ್ತಿಯ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com