ಗೋಲ್ಡನ್​ ಗ್ಲೋಬ್ ಪ್ರಶಸ್ತಿಯಿಂದಾಗಿ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಭಾವ ಮೂಡಿದೆ: ‘ಆ​ರ್​ಆರ್​ಆರ್​’ ತಂಡಕ್ಕೆ ಪಿಎಂ ಮೋದಿ ಅಭಿನಂದನೆ

ಹಾಲಿವುಡ್ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದಿರುವ ಆರ್.ಆರ್.ಆರ್ ಸಿನಿಮಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ಹಾಲಿವುಡ್ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದಿರುವ ಆರ್.ಆರ್.ಆರ್ ಸಿನಿಮಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಸಿನಿಮಾದ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಪ್ರಶಸ್ತಿ ಪಡೆಯುತ್ತಿರುವ ವಿಡಿಯೋವನ್ನು ಶೇರ್ ಮಾಡಿರುವ ಮೋದಿ, ‘ಈ ಪ್ರತಿಷ್ಠಿತ ಗೌರವವು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತೆ ಮಾಡಿದೆ. ರಾಜಮೌಳಿ, ಕೀರವಾಣಿ, ರಾಮ್ ಚರಣ್, ಜ್ಯೂನಿಯರ್ ಎನ್.ಟಿ.ಆರ್ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು’ ಎಂದು ಟ್ವಿಟ್ ಮಾಡಿದ್ದಾರೆ.

ಭಾರತೀಯ ಚಿತ್ರರಂಗದ ತಂತ್ರಜ್ಞರು ಮತ್ತು ಕಲಾವಿದರು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ತೆಲುಗಿನ ‘ಆರ್​ಆರ್​ಆರ್’ ಸಿನಿಮಾಗೆ ‘ಗೋಲ್ಡನ್​ ಗ್ಲೋಬ್​ 2023’ ಪ್ರಶಸ್ತಿ ಬಂದಿರುವುದೇ ಈ ಮಾತಿಗೆ ಸಾಕ್ಷಿ. ಈ ಚಿತ್ರದ ‘ನಾಟು ನಾಟು..’ ಹಾಡಿಗೆ ಅತ್ಯುತ್ತಮ ಒರಿಜಿನಲ್​ ಸಾಂಗ್​ ವಿಭಾಗದಲ್ಲಿ ‘ಗೋಲ್ಡನ್​ ಗ್ಲೋಬ್’ ಪ್ರಶಸ್ತಿ ಬಂದಿದೆ.

ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ  ಅಭಿನಂದನೆ ತಿಳಿಸಿದ್ದಾರೆ. ಟ್ವೀಟರ್​ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಅವರ ಈ ಟ್ವೀಟ್​ ವೈರಲ್​ ಆಗಿದೆ. ದಕ್ಷಿಣ ಭಾರತದ ಚಿತ್ರರಂಗಕ್ಕೆ ಸಿಕ್ಕ ಈ ಗೌರವವನ್ನು ಸಿನಿಪ್ರಿಯರು ಸಂಭ್ರಮಿಸುತ್ತಿದ್ದಾರೆ.

ಸದ್ಯ ಆಸ್ಕರ್ ಅಂಗಳದಲ್ಲಿ ಪ್ರಶಸ್ತಿಯ ಕನಸು ಕಾಣುತ್ತಿರುವ ಆರ್.ಆರ್.ಆರ್ ಸಿನಿಮಾ ತಂಡಕ್ಕೆ ಅನಿರೀಕ್ಷಿತ ಪ್ರಶಸ್ತಿಯೊಂದು ಸಂದಿದ್ದು, ಈ ಸಿನಿಮಾದ ‘ನಾಟು ನಾಟು’ ಹಾಡಿಗೆ ಬಂದಿದೆ. ಮೊನ್ನೆಯಷ್ಟೇ ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದ ಸಿನಿಮಾ, ಈ ಸಲ ಬಂಗಾರದ ಪದಕವನ್ನೇ ಬೇಟೆಯಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com