ನಿತೀಶ್ ವಿರೋಧಿಗಳ ವಿರುದ್ಧ ಕ್ರಮಕ್ಕೆ ಮಂದಾಗದ ತೇಜಸ್ವಿ: ಆರ್‌ಜೆಡಿ - ಜೆಡಿಯು ನಡುವೆ ಬಿರುಕು? ಸಂಕ್ರಾಂತಿಗೆ ಮಿತ್ರಪಕ್ಷಗಳ ಪ್ರತ್ಯೇಕ ಕಾರ್ಯಕ್ರಮ!

ಬಿಹಾರದ ಮಹಾಮೈತ್ರಿಕೂಟದ ಎರಡು ಪ್ರಮುಖ ಮಿತ್ರಪಕ್ಷಗಳಾದ ಆರ್ ಜೆಡಿ ಮತ್ತು ಜೆಡಿಯು ಪಕ್ಷಗಳು ಮಕರ ಸಂಕ್ರಾಂತಿಯಂದು ಪ್ರತ್ಯೇಕವಾಗಿ ‘ದಹಿ-ಚೂಡಾ ಭೋಜ್’ (ಔತಣ) ಆಯೋಜಿಸುತ್ತಿದ್ದು, ಮೈತ್ರಿಯಲ್ಲಿ ಎಲ್ಲವೂ ಸರಿಯಾಗಿಲ್ಲವೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್
ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್
Updated on

ಪಾಟ್ನಾ: ಬಿಹಾರದ ಮಹಾಮೈತ್ರಿಕೂಟದ ಎರಡು ಪ್ರಮುಖ ಮಿತ್ರಪಕ್ಷಗಳಾದ ಆರ್ ಜೆಡಿ ಮತ್ತು ಜೆಡಿಯು ಪಕ್ಷಗಳು ಮಕರ ಸಂಕ್ರಾಂತಿಯಂದು ಪ್ರತ್ಯೇಕವಾಗಿ ‘ದಹಿ-ಚೂಡಾ ಭೋಜ್’ (ಔತಣ) ಆಯೋಜಿಸುತ್ತಿದ್ದು, ಮೈತ್ರಿಯಲ್ಲಿ ಎಲ್ಲವೂ ಸರಿಯಾಗಿಲ್ಲವೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

ಜನವರಿ 14 ರಂದು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಅಧಿಕೃತ ನಿವಾಸದಲ್ಲಿ  ಆರ್ ಜೆಡಿ ಔತಣ ಕೂಟ ಆಯೋಜಿಸಿದೆ, ಅದೇ ದಿನ ಜೆಡಿಯು ಸಂಸದೀಯ ಮಂಡಳಿಯ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಕೂಡ ತಮ್ಮ ಅವರ ನಿವಾಸದಲ್ಲಿ  ಭೋಜನ ಕೂಟ ಏರ್ಪಡಿಸಿದ್ದಾರೆ.

ಸಿಎಂ ನಿತೀಶ್ ಕುಮಾರ್ ವಿರುದ್ಧ ತಿರುಗಿ ಬಿದ್ದಿದ್ದ ಮಾಜಿ ಕೃಷಿ ಸಚಿವ ಸುಧಾಕರ್ ಸಿಂಗ್ ಹಾಗೂ ಆರ್ ಜೆ ಡಿ ಶಾಸಕ ವಿಜಯ್ ಮಂಡಲ್ ವಿರುದ್ಧ ತೇಜಸ್ವಿ ಯಾದವ್ ಯಾವುದೇ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜೆಡಿಯು ಅಸಮಾಧಾನಗೊಂಡಿದೆ. ಹೀಗಾಗಿ ಮಿತ್ರಪಕ್ಷಗಳಾದ ಆರ್ ಜೆಡಿ-ಮತ್ತು ಜೆಡಿಯು ನಡುವೆ ಮನಸ್ತಾಪ ಮೂಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಇದು ಆಡಳಿತಾರೂಢ ಮೈತ್ರಿಕೂಟದ ಮೇಲೆ ದಾಳಿ ನಡೆಸಲು ಬಿಜೆಪಿಗೆ ಅವಕಾಶ ನೀಡಿದೆ. ಸುಧಾಕರ್ ಸಿಂಗ್ ಮತ್ತು ಮಂಡಲ್ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲು ತೇಜಸ್ವಿಯನ್ನು ತಡೆಯುತ್ತಿರುವುದು ಏನು ಎಂದು ಪ್ರಶ್ನಿಸಿದ್ದಾರೆ.

ಆರ್ ಜೆಡಿ ಉನ್ನತ ನಾಯಕತ್ವವು ತನ್ನ ಮುಖಂಡರ ಮೂಲಕ ನಿತೀಶ್ ಅವರನ್ನು ಅವಮಾನಿಸುತ್ತಿದೆ. ಇದೇ ವೇಲೆ ಅವರ ವಿರುದ್ಧ ಕ್ರಮದ ಬಗ್ಗೆಯೂ ಮಾತನಾಡುತ್ತಿದೆ. ಆದರೆ ಆರ್‌ಜೆಡಿ ಸುಧಾಕರ್‌ಗೆ ನೋಟಿಸ್ ಸಹ ನೀಡಲಿಲ್ಲ, ಬದಲಿಗೆ ಸಿಎಂ ವಿರುದ್ಧ ಮಾತನಾಡಲು ಮತ್ತೊಬ್ಬ ನಾಯಕ ಮಂಡಲ ಧೈರ್ಯ ತುಂಬಿದರು. ಎಲ್ಲವೂ ಆರ್‌ಜೆಡಿಯ ಯೋಜಿತ ಕಾರ್ಯತಂತ್ರದ ಅಡಿಯಲ್ಲಿ ನಡೆಯುತ್ತಿದೆ, ದು ಸುಶೀಲ್ ಮೋದಿ ಆರೋಪಿಸಿದ್ದಾರೆ.

ಸುಧಾಕರ್ ಮತ್ತು ಮಂಡಲ್ ವಿರುದ್ಧ ಅವರು ತೆಗೆದುಕೊಂಡಿರುವ ಕ್ರಮದ ಬಗ್ಗೆ ತೇಜಸ್ವಿ ಕೂಡ ಮೌನವಾಗಿದ್ದಾರೆ. ಮಹಾಮೈತ್ರಿಯ ವಿರುದ್ಧ ಮಾತನಾಡುವವರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪುನರುಚ್ಚರಿಸಿದ್ದಾರೆ.

ಮುಂಗರ್ ಸಂಸದರಾಗಿರುವ ಜೆಡಿಯು ಮುಖ್ಯಸ್ಥ ರಾಜೀವ್ ರಂಜನ್ ಸಿಂಗ್, ಇದು ಆರ್‌ಜೆಡಿಯ ಆಂತರಿಕ ವಿಷಯ ಮತ್ತು ಮೈತ್ರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ವಿಷಯವನ್ನು ತಳ್ಳಿಹಾಕಿದ್ದಾರೆ.

ಏತನ್ಮಧ್ಯೆ, ಬಿಹಾರದ ಎಐಸಿಸಿ ಉಸ್ತುವಾರಿ ಭಕ್ತ ಚರಣ್ ದಾಸ್ ಅವರು ಉಪ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ, ರಾಜ್ಯ ಸಚಿವ ಸಂಪುಟಕ್ಕೆ ಇನ್ನೂ ಇಬ್ಬರು ಕಾಂಗ್ರೆಸ್ ಶಾಸಕರ ಸೇರ್ಪಡೆ ಮತ್ತು 2024 ರ ಲೋಕಸಭೆ ಚುನಾವಣೆಯಂತಹ ವಿಷಯಗಳ ಬಗ್ಗೆ ಬ್ಬರು ನಾಯಕರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ನಿತೀಶ್ ಸಂಪುಟದಲ್ಲಿ ಕಾಂಗ್ರೆಸ್ ಕೋಟಾದಿಂದ ಇಬ್ಬರು ಸಚಿವರಿದ್ದಾರೆ. ಮಹಾಮೈತ್ರಿಕೂಟದ ಮಿತ್ರಪಕ್ಷಗಳ ನಡುವೆ ಸೀಟು ಹಂಚಿಕೆಯಂತಹ ಸಮಸ್ಯೆಗಳು ಬಗೆಹರಿಸಲು ಚುನಾವಣೆಗೂ ಮುನ್ನ ಸಮನ್ವಯ ಸಮಿತಿಯ ರಚನೆಗೆ ದಾಸ್ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com