ಭಾರತ್ ಜೋಡೋ ಯಾತ್ರೆ ವೇಳೆ ಸಾವನ್ನಪ್ಪಿದ್ದ ಕಾಂಗ್ರೆಸ್ ಸಂಸದ ಸಂತೋಖ್ ಚೌಧರಿ ಅಂತ್ಯಕ್ರಿಯೆ

ಭಾರತ್ ಜೋಡೋ ಯಾತ್ರೆ ವೇಳೆ ಹೃದಯಾಘಾತದಿಂದ ನಿಧನರಾದ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಜಲಂಧರ್ ಜಿಲ್ಲೆಯ ಧಲಿವಾಲ್ ಗ್ರಾಮದಲ್ಲಿ ಭಾನುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಸಂತೋಖ್ ಸಿಂಗ್ ಚೌಧರಿ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದ ರಾಹುಲ್ ಗಾಂಧಿ
ಸಂತೋಖ್ ಸಿಂಗ್ ಚೌಧರಿ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದ ರಾಹುಲ್ ಗಾಂಧಿ

ಜಲಂಧರ್: ಭಾರತ್ ಜೋಡೋ ಯಾತ್ರೆ ವೇಳೆ ಹೃದಯಾಘಾತದಿಂದ ನಿಧನರಾದ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಜಲಂಧರ್ ಜಿಲ್ಲೆಯ ಧಲಿವಾಲ್ ಗ್ರಾಮದಲ್ಲಿ ಭಾನುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.

ಎರಡು ಬಾರಿ ಸಂಸದರಾಗಿದ್ದ 76 ವರ್ಷದ ಚೌಧರಿ ಅವರು ಶನಿವಾರ ಪಂಜಾಬ್‌ನ ಫಿಲ್ಲೌರ್‌ನಲ್ಲಿ ನಿಧನರಾದರು. ಅವರ ಸಾವಿನ ನಂತರ ಯಾತ್ರೆಯನ್ನು ಒಂದು ದಿನ ಸ್ಥಗಿತಗೊಳಿಸಲಾಗಿತ್ತು. ಅಂತ್ಯಕ್ರಿಯೆ ವೇಳೆ ರಾಹುಲ್ ಗಾಂಧಿ, ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ವಿರೋಧ ಪಕ್ಷದ ನಾಯಕ ಪರ್ತಪ್ ಸಿಂಗ್ ಬಾಜ್ವಾ, ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತಿತರರು ಪಾಲ್ಗೊಂಡರು.

ಇದಕ್ಕೂ ಮುನ್ನಾ ಚೌಧರಿ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿರುವ ಜಲಂಧರ್‌ನಲ್ಲಿರುವ ಅವರ ನಿವಾಸದಲ್ಲಿ  ನೂರಾರು ಜನರು ಅಂತಿಮ ನಮನ ಸಲ್ಲಿಸಿದರು. ದೋಬಾ ಪ್ರದೇಶದ ಪ್ರಮುಖ ದಲಿತ ನಾಯಕ ಚೌಧರಿ ಶ್ರೀಮಂತ ರಾಜಕೀಯ ಪರಂಪರೆಯನ್ನು ಹೊಂದಿರುವ ಕುಟುಂಬಕ್ಕೆ ಸೇರಿದವರು. ಅವರ ತಂದೆ ಮಾಸ್ಟರ್ ಗುರ್ಬಂತ ಸಿಂಗ್, ದಲಿತ ಹೋರಾಟಗಾರ, ಏಳು ಬಾರಿ ಶಾಸಕರಾಗಿದ್ದರು ಮತ್ತು ಪಂಜಾಬ್ ಮಾಜಿ ಕೃಷಿ ಸಚಿವರೂ ಆಗಿದ್ದರು.

ಚೌಧರಿ ಅವರ ಹಿರಿಯ ಸಹೋದರ ಚೌಧರಿ ಜಗಜಿತ್ ಸಿಂಗ್ ಅವರು ಐದು ಬಾರಿ ಶಾಸಕರಾಗಿದ್ದರು ಮತ್ತು ಸ್ಥಳೀಯ ಸಂಸ್ಥೆಗಳ ಸಚಿವರಾಗಿದ್ದರು. ಸಂತೋಖ್ ಸಿಂಗ್ ಚೌಧರಿ ಅವರು 2014 ಮತ್ತು 2019 ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರು ಮೂರು ಬಾರಿ ಶಾಸಕರಾಗಿದ್ದರು ಮತ್ತು 1992 ಮತ್ತು 2002 ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಮಾಜಿ ಸಿಎಂ ಅಮರಿಂದರ್ ಸಿಂಗ್, ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಸೇರಿದಂತೆ ಹಲವು ನಾಯಕರು ಚೌಧರಿ ಅವರ ನಿಧನಕ್ಕೆ ಪಕ್ಷಾತೀತವಾಗಿ ಶೋಕ ವ್ಯಕ್ತಪಡಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com