ದೆಹಲಿ ಉಗ್ರ ದಾಳಿ ಶಂಕಿತರು ಹಿಂದೂವನ್ನು ಕೊಂದ ವಿಡಿಯೋ ಪಾಕ್ ಏಜೆಂಟ್ ಗೆ ಕಳುಹಿಸಿ, ಹಣ ಪಡೆದಿದ್ದಾರೆ: ಮೂಲಗಳು

ಕೈಯಲ್ಲಿ ತ್ರಿಶೂಲದ ಹಚ್ಚೆಯಿದ್ದ ವ್ಯಕ್ತಿಯೋರ್ವನನ್ನು ಕೊಂದ ಭಯೋತ್ಪಾದಕರು ಅದನ್ನು ವಿಡಿಯೋ ಮಾಡಿ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಜೊತೆ ಸಂಬಂಧ ಹೊಂದಿರುವ ಸೊಹೈಲ್‌ಗೆ ಕಳುಹಿಸಿ ಆತನಿಂದ ಹಣ ಪಡೆದಿರುವ ಮಾಹಿತಿ ಬಹಿರಂಗಗೊಂಡಿದೆ.
ಶಂಕಿತ ಉಗ್ರನನ್ನು ಬಂಧಿಸಿದ ಪೊಲೀಸರು
ಶಂಕಿತ ಉಗ್ರನನ್ನು ಬಂಧಿಸಿದ ಪೊಲೀಸರು

ನವದೆಹಲಿ: ಕೈಯಲ್ಲಿ ತ್ರಿಶೂಲದ ಹಚ್ಚೆಯಿದ್ದ ವ್ಯಕ್ತಿಯೋರ್ವನನ್ನು ಕೊಂದ ಭಯೋತ್ಪಾದಕರು ಅದನ್ನು ವಿಡಿಯೋ ಮಾಡಿ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಜೊತೆ ಸಂಬಂಧ ಹೊಂದಿರುವ ಸೊಹೈಲ್‌ಗೆ ಕಳುಹಿಸಿ ಆತನಿಂದ ಹಣ ಪಡೆದಿರುವ ಮಾಹಿತಿ ಬಹಿರಂಗಗೊಂಡಿದೆ.

ಭಾಲ್ಸ್ವಾ ಡೈರಿ ಗುರಿ ಹತ್ಯೆ ಪ್ರಕರಣದ ಸಂಬಂಧ ಪೊಲೀಸರು ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಬಂಧಿತ ಜಗಜಿತ್ ಸಿಂಗ್ ಅಲಿಯಾಸ್ ಜಗ್ಗಾ ಮತ್ತು ನೌಶಾದ್ ಇಬ್ಬರು ಆರೋಪಿಗಳು ಸಂತ್ರಸ್ತನ ಜೊತೆ ಸ್ನೇಹ ಬೆಳೆಸಿದ್ದರು. ಇನ್ನು ಭಯೋತ್ಪಾದಕರಿಂದ ಹತ್ಯೆಗೀಡಾದ ವ್ಯಕ್ತಿ ಮಾದಕ ವ್ಯಸನಿಯಾಗಿದ್ದ 21 ವರ್ಷದ ಯುವಕ ಎಂದು ತಿಳಿದುಬಂದಿದೆ. ಆತನ ಕೈಯಲ್ಲಿ ತ್ರಿಶೂಲವಿತ್ತು. ಈ ಕಾರಣಕ್ಕಾಗಿಯೇ ಆತ ಹಿಂದು ಎಂದು ತಿಳಿದು ಮೊದಲು ಅವನೊಂದಿಗೆ ಸ್ನೇಹ ಬೆಳೆಸಿದ್ದರು.

ನಂತರ ಡಿಸೆಂಬರ್ 14-15 ರಂದು ಆದರ್ಶ ನಗರ ಪ್ರದೇಶದಿಂದ ಭಾಲ್ಸ್ವಾ ಡೈರಿಯಲ್ಲಿರುವ ನೌಶಾದ್ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಆತನನ್ನು ಕೊಂದಿದ್ದಾರೆ. ನಂತರ ಆತನ ಮೃತದೇಹವನ್ನು 8 ತುಂಡುಗಳಾಗಿ ಕತ್ತರಿಸಿ ಇದನ್ನೆಲ್ಲಾ ವಿಡಿಯೋ ಮಾಡಿಕೊಂಡು ಸೊಹೈಲ್‌ಗೆ ಕಳುಹಿಸಿದ್ದಾರೆ. ಸೊಹೈಲ್  ಕತಾರ್‌ನಲ್ಲಿರುವ ತನ್ನ ಸೋದರ ಮಾವನ ಮೂಲಕ ನೌಶಾದ್‌ನ ಬ್ಯಾಂಕ್ ಖಾತೆಗೆ ₹ 2 ಲಕ್ಷ ಕಳುಹಿಸಿದ್ದಾರೆ.  ಇನ್ನು ಆರೋಪಿಯ ಮೊಬೈಲ್‌ನಿಂದ ದೆಹಲಿ ಪೊಲೀಸರು ಈ ವಿಡಿಯೋವನ್ನು ವಶಪಡಿಸಿಕೊಂಡಿದ್ದಾರೆ.

ಈ ಕೃತ್ಯದ ಹಿಂದೆ ಐಎಸ್‌ಐನ ಷಡ್ಯಂತ್ರದ ತನಿಖಾ ಸಂಸ್ಥೆಗಳೂ ತನಿಖೆ ನಡೆಸುತ್ತಿವೆ. ಬಂಧಿತ ನೌಶಾದ್ ಒಬ್ಬ ಭಯೋತ್ಪಾದಕನಾಗಿದ್ದು, ಕೊಲೆ, ಸುಲಿಗೆ, ಹರ್ಕತ್-ಉಲ್-ಅನ್ಸಾರ್ ಜತೆ ಸಂಬಂಧ ಹೊಂದಿದ್ದ ಪ್ರಕರಣಗಳಲ್ಲಿ ಸುದೀರ್ಘ ಕಾಲ ಜೈಲಿನಲ್ಲಿದ್ದನು. ಅಲ್ಲಿ ಕೆಂಪುಕೋಟೆ ದಾಳಿಯ ಆರೋಪಿ ಆರಿಫ್ ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸೊಹೈಲ್ ಅವರನ್ನು ಭೇಟಿಯಾಗಿದ್ದನು. ಸೊಹೈಲ್ 2018ರಲ್ಲಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದನು. ಏಪ್ರಿಲ್ 2022ರಲ್ಲಿ ಜೈಲಿನಿಂದ ಹೊರಬಂದ ನಂತರ ನೌಶಾದ್ ಮತ್ತು ಸೊಹೈಲ್ ಸಂಪರ್ಕದಲ್ಲಿದ್ದರು. 

ನೌಶಾದ್‌ಗೆ ಪ್ರಭಾವಿ ಹಿಂದೂಗಳನ್ನು ಕೊಲ್ಲಲು ಸೊಹೈಲ್‌ ಸೂಚಿಸಿದ್ದನು. ಆದರೆ ಎರಡನೇ ಆರೋಪಿ ಜಗಜಿತ್ ಸಿಂಗ್‌ಗೆ ಭಾರತದಲ್ಲಿ ಸಿಖ್ ಪ್ರತ್ಯೇಕತಾವಾದಿ ಗುಂಪು ಖಾಲಿಸ್ತಾನ್‌ನ ಚಟುವಟಿಕೆಗಳನ್ನು ಪ್ರಚಾರ ಮಾಡಲು ಕೇಳಲಾಯಿತು ಎಂದು ಮೂಲಗಳು ತಿಳಿಸಿವೆ. ಖಲಿಸ್ತಾನಿ ಭಯೋತ್ಪಾದಕ ಅರ್ಷದೀಪ್ ದಲ್ಲಾ ಅವರೊಂದಿಗೆ ಜಗಜಿತ್ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಬಂಧಿತ ಆರೋಪಿಗಳಿಂದ 3 ಪಿಸ್ತೂಲ್‌ಗಳು, 22 ಕಾಟ್ರಿಡ್ಜ್‌ಗಳು ಮತ್ತು 2 ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಜಹಾಂಗೀರ್ಪುರಿಯಲ್ಲಿ ವಾಸಿಸುತ್ತಿದ್ದು ಅಲ್ಲಿ 2020 ರಲ್ಲಿ ಕೋಮು ಘರ್ಷಣೆಗಳು ನಡೆದಿತ್ತು. ಆದರೂ ಗುಪ್ತಚರ ಸಂಸ್ಥೆಗಳಿಗೆ ಇದರ ಸುಳಿವು ಕೂಡ ಸಿಕ್ಕಿರಲಿಲ್ಲ.

ಇನ್ನು ಇಸ್ರೇಲ್ ರಾಯಭಾರ ಕಚೇರಿಯ ಭಯೋತ್ಪಾದಕ ಘಟನೆಗೆ ಇದು ಸಂಬಂಧಿಸಿದೆ. ಆದರೆ ಇದುವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ದೆಹಲಿಯ ಗಾಜಿಪುರ ಮತ್ತು ಸೀಮಾಪುರಿಯಲ್ಲಿ ಸ್ಫೋಟಕ ಆರ್‌ಡಿಎಕ್ಸ್ ಪತ್ತೆಯಾಗಿದೆ, ಇವುಗಳು ಇನ್ನೂ ಬಗೆಹರಿದಿಲ್ಲ. ಸದ್ಯ ಇಬ್ಬರು ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ದೆಹಲಿ ಪೊಲೀಸರು ಉತ್ತರ ದೆಹಲಿಯಲ್ಲಿ ಛಿದ್ರಗೊಂಡ ಶವವನ್ನು ಪತ್ತೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com