ಕಾಶ್ಮೀರದ ಕೆಲ ಭಾಗಗಳಲ್ಲಿ ಪಾದಯಾತ್ರೆ ಮಾಡದಂತೆ ರಾಹುಲ್‌ ಗಾಂಧಿಗೆ ಭದ್ರತಾ ಪಡೆಗಳಿಂದ ಸಲಹೆ

ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ಕೆಲವು ಭಾಗಗಳಲ್ಲಿ ಪಾದಯಾತ್ರೆ ಮಾಡದಂತೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ಭದ್ರತಾ ಪಡೆಗಳು ಸಲಹೆ ನೀಡಿವೆ.
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ

ನವದೆಹಲಿ: ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ಕೆಲವು ಭಾಗಗಳಲ್ಲಿ ಪಾದಯಾತ್ರೆ ಮಾಡದಂತೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ಭದ್ರತಾ ಪಡೆಗಳು ಸಲಹೆ ನೀಡಿವೆ.

ಕಣಿವೆಯಲ್ಲಿ ರಾಹುಲ್‌ ಗಾಂಧಿಯವರ ಸುರಕ್ಷತೆಗಾಗಿ ಭದ್ರತಾ ಪಡೆಗಳು ವಿಸ್ಕೃತವಾದ ಯೋಜನೆ ರೂಪಿಸಿದ್ದು, ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ನಡೆದು ಹೋಗುವುದಕ್ಕಿಂತ ಕಾರಿನಲ್ಲಿ ಪ್ರಯಾಣಿಸಿ ಎಂದು ಅವರಿಗೆ ಸಲಹೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಶ್ರೀನಗರದಲ್ಲಿ ನಡೆಯುವ ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್‌ ಗಾಂಧಿ ಅವರೊಂದಿಗೆ ಬೆರಳೆಣಿಕೆಯಷ್ಟು ಜನ ಇರಲಿ ಎಂದು ಭದ್ರತಾ ಪಡೆಗಳು ಸಲಹೆ ನೀಡಿವೆ. ರಾಹುಲ್‌ ಗಾಂಧಿ ಅವರು ರಾತ್ರಿ ತಂಗುವ ಪ್ರದೇಶದಲ್ಲಿ ಭದ್ರತೆ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಜನವರಿ 19 ರಂದು ಲಖನ್‌ಪುರ ಮಾರ್ಗವಾಗಿ ಕಾಶ್ಮೀರ ಪ್ರವೇಶಿಸಲಿದೆ. ಜನವರಿ 25 ರಂದು ಬನಿಹಾಲ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ಇದಾದ ಎರಡು ದಿನಗಳ ಬಳಿಕ ಅನಂತ್‌ನಾಗ್ ಮೂಲಕ ಯಾತ್ರೆ ಶ್ರೀನಗರಕ್ಕೆ ಪ್ರವೇಶ ಮಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com