
ಮದುರೈ(ತಮಿಳು ನಾಡು): ತಮಿಳು ನಾಡು ರಾಜ್ಯದಲ್ಲಿ ಸಂಕ್ರಾಂತಿ ಸಮಯದಲ್ಲಿ ಇಲ್ಲಿನ ಜನರು ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಆಡುವುದು ಸಾಮಾನ್ಯ. ಈ ಸಂದರ್ಭದಲ್ಲಿ ಹಲವು ಮಂದಿ ಹೋರಿ ತಿವಿದು ಗಾಯಗೊಂಡ, ಕೆಲವರು ಮೃತಪಟ್ಟ ಘಟನೆಗಳೂ ಈ ಹಿಂದೆ ಆಗಿವೆ.
ಮದುರೈ ಜಿಲ್ಲೆಯ ಅವನಿಯಪುರಂ ಎಂಬಲ್ಲಿ ಜಲ್ಲಿಕಟ್ಟು ವೇಳೆ ಸುಮಾರು 60 ಮಂದಿ ಗಾಯಗೊಂಡಿದ್ದು ಅವರಲ್ಲಿ 20 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ನಿನ್ನೆ ಸುಮಾರು 60 ಮಂದಿ ಗಾಯಗೊಂಡಿದ್ದು, ಅವರಲ್ಲಿ 20 ಮಂದಿ ತುಸು ಗಂಭೀರ ಗಾಯಗೊಂಡಿದ್ದಾರೆ ಅವರನ್ನು ರಾಜಾಜಿ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನುಳಿದ 40 ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಯಾವುದೇ ಸಾವು ಸಂಭವಿಸಿಲ್ಲ ಎಂದು ಮದುರೈ ಜಿಲ್ಲಾಧಿಕಾರಿ ಅನೀಶ್ ಶೇಖರ್ ತಿಳಿಸಿದ್ದಾರೆ.
Advertisement