ಈ ಬಾರಿಯ ದೆಹಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ವೀಕ್ಷಕರ ಸಂಖ್ಯೆ ಶೇ.64ರಷ್ಟು ಕಡಿತ: ಸ್ವದೇಶಿ ಶಸ್ತ್ರಾಸ್ತ್ರಗಳಿಗೆ ಆದ್ಯತೆ

ಈ ಬಾರಿ ಕೇಂದ್ರ ಸರ್ಕಾರದ ಗಣರಾಜ್ಯೋತ್ಸವದ ಪರೇಡ್‌ಗೆ ಪಾಸ್‌ ಪಡೆದರೆ ನೀವೇ ಅದೃಷ್ಟವಂತರು ಎಂದು ಭಾವಿಸಬೇಕು. ಸರ್ಕಾರವು 45,000 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದೆ. 2020ಕ್ಕಿಂತ ಮೊದಲು ಕೋವಿಡ್ ಪೂರ್ವದಲ್ಲಿ ದೆಹಲಿಯ ಕೆಂಪುಕೋಟೆಯ ಮುಂದೆ ಪರೇಡ್ ವೀಕ್ಷಿಸಲು ಸುಮಾರು 1.25 ಲಕ್ಷ ಮಂದಿಗೆ ಅವಕಾಶ ನೀಡಲಾಗುತ್ತಿತ್ತು.
ದೆಹಲಿಯಲ್ಲಿ ಬೆಳಗಿನ ದಟ್ಟವಾದ ಮಂಜಿನ ನಡುವೆ ಭಾರತೀಯ ಭದ್ರತಾ ಪಡೆ ಸದಸ್ಯರು ಗಣರಾಜ್ಯೋತ್ಸವ ಪರೇಡ್‌ಗಾಗಿ ಪೂರ್ವಾಭ್ಯಾಸ ಮಾಡುತ್ತಿರುವುದು
ದೆಹಲಿಯಲ್ಲಿ ಬೆಳಗಿನ ದಟ್ಟವಾದ ಮಂಜಿನ ನಡುವೆ ಭಾರತೀಯ ಭದ್ರತಾ ಪಡೆ ಸದಸ್ಯರು ಗಣರಾಜ್ಯೋತ್ಸವ ಪರೇಡ್‌ಗಾಗಿ ಪೂರ್ವಾಭ್ಯಾಸ ಮಾಡುತ್ತಿರುವುದು

ನವದೆಹಲಿ: ಈ ಬಾರಿ ಕೇಂದ್ರ ಸರ್ಕಾರದ ಗಣರಾಜ್ಯೋತ್ಸವದ ಪರೇಡ್‌ಗೆ ಪಾಸ್‌ ಪಡೆದರೆ ನೀವೇ ಅದೃಷ್ಟವಂತರು ಎಂದು ಭಾವಿಸಬೇಕು. ಸರ್ಕಾರವು 45,000 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದೆ. 2020ಕ್ಕಿಂತ ಮೊದಲು ಕೋವಿಡ್ ಪೂರ್ವದಲ್ಲಿ ದೆಹಲಿಯ ಕೆಂಪುಕೋಟೆಯ ಮುಂದೆ ಪರೇಡ್ ವೀಕ್ಷಿಸಲು ಸುಮಾರು 1.25 ಲಕ್ಷ ಮಂದಿಗೆ ಅವಕಾಶ ನೀಡಲಾಗುತ್ತಿತ್ತು. ಅದನ್ನು ಈ ಬಾರಿ ಶೇಕಡಾ 64ರಷ್ಟು ಸಾರ್ವಜನಿಕರ ಪ್ರವೇಶವನ್ನು ಕಡಿತ ಮಾಡಲಾಗಿದೆ. ಕಳೆದೆರಡು ವರ್ಷಗಳಲ್ಲಿ ಸುಮಾರು 25 ಸಾವಿರ ಮಂದಿಗೆ ಅವಕಾಶ ನೀಡಲಾಗಿತ್ತು.

ಅಧಿಕೃತ ಕಾರಣವೆಂದರೆ, ದೆಹಲಿಯ ಕರ್ತವ್ಯ ಪಥವನ್ನು ದಿನದ ಬಹುಪಾಲು ಪ್ರವಾಸಿಗರಿಗೆ ಮುಕ್ತವಾಗಿ ಇಡಲಾಗಿದೆ. ಹೊಸ ಆಸನ ವ್ಯವಸ್ಥೆ ಇದೆ. ಆಸನಗಳು ಸುಸಜ್ಜಿತವಾಗಿರುತ್ತವೆ ಎಂದು ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಜೇಶ್ ರಂಜನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 45,000 ಸೀಟುಗಳಲ್ಲಿ ಸುಮಾರು 32,000 ಜನರಿಗೆ ಮುಕ್ತವಾಗಿದೆ ಎಂದು ಅವರು ಹೇಳಿದರು. ಈ ಬಾರಿ, ಎಲ್ಲಾ ಆಹ್ವಾನಗಳು ಆನ್ ಲೈನ್ ನಲ್ಲಿ ಬುಕ್ಕಿಂಗ್ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ. 

ಈ ಬಾರಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮುಖ್ಯ ವಿಷಯವಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಹೇಳಿದರು. ಗಣರಾಜ್ಯೋತ್ಸವದ ಧ್ಯೇಯ ವಾಕ್ಯ 'ಜನಭಾಗಿದಾರಿ'ಯಾಗಿದೆ. ಸೆಂಟ್ರಲ್ ವಿಸ್ಟಾ ಯೋಜನೆಗಳ ಕಾರ್ಮಿಕರು ಮತ್ತು ಅವರ ಕುಟುಂಬ, ಕರ್ತವ್ಯ ಪಥದಲ್ಲಿ ನಿರ್ವಹಣಾ ಕಾರ್ಯಕರ್ತರು, ಹಾಲಿನ ಬೂತ್ ಮಾರಾಟಗಾರರು, ತರಕಾರಿ ಮತ್ತು ಸಣ್ಣ ದಿನಸಿ ಮಾರಾಟಗಾರರು ವಿಶೇಷ ಆಹ್ವಾನಿತರಾಗಿರುತ್ತಾರೆ ಎಂದು ಅವರು ಹೇಳಿದರು.

“ನಾವು ವಿವಿಐಪಿಗಳ ಆಮಂತ್ರಣ ಪತ್ರಗಳನ್ನು ಕಡಿತಗೊಳಿಸಿದ್ದೇವೆ. ಈ ಹಿಂದೆ ನಮಗೆ ಸುಮಾರು 50,000 ಆಹ್ವಾನಗಳು ಬಂದಿದ್ದವು, ಅವುಗಳನ್ನು 12,000 ಕ್ಕೆ ಇಳಿಸಲಾಗಿದೆ ಎಂದು ರಂಜನ್ ಹೇಳಿದರು. ಮೇಕ್ ಇನ್ ಇಂಡಿಯಾ ಉತ್ಪನ್ನಗಳಾದ ಮೇಕ್ ಬ್ಯಾಟಲ್ ಟ್ಯಾಂಕ್, NAG ಕ್ಷಿಪಣಿ ವ್ಯವಸ್ಥೆ, ಬ್ರಹ್ಮೋಸ್, ಆಕಾಶ್ ಕ್ಷಿಪಣಿ, ಮತ್ತು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಸೇರಿದಂತೆ ಇತರೆ ಉತ್ಪನ್ನಗಳ ಮೇಲೆ ಪರೇಡ್ ಗಮನಹರಿಸಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್ ಸಿಸಿ ಭಾಗವಹಿಸಲಿದ್ದಾರೆ. ಈಜಿಪ್ಟ್ ಮಿಲಿಟರಿಯ 120 ಸದಸ್ಯರ ತುಕಡಿಯು ಮೊದಲ ಬಾರಿಗೆ ಕರ್ಥವ್ಯ ಪಥದಲ್ಲಿ ಮೆರವಣಿಗೆ ನಡೆಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com