ಗಣರಾಜ್ಯೋತ್ಸವ ಪರೇಡ್‌: ಮೊದಲ ಬಾರಿಗೆ ಒಂಟೆ ಪಡೆಯಲ್ಲಿ ಬಿಎಸ್‌ಎಫ್ ಮಹಿಳಾ ಸಿಬ್ಬಂದಿ ಭಾಗಿ

ಈ ವರ್ಷದ ಗಣರಾಜ್ಯೋತ್ಸವವು ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗಲಿದೆ. ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮೊದಲ ಬಾರಿಗೆ ಹನ್ನೆರಡು ಮಹಿಳಾ ಒಂಟೆ ಸವಾರರು ಗಡಿ ಭದ್ರತಾ ಪಡೆಯ(ಬಿಎಸ್‌ಎಫ್) ಪ್ರಸಿದ್ಧ...
ಬಿಎಸ್‌ಎಫ್ ಮಹಿಳಾ ಸಿಬ್ಬಂದಿ
ಬಿಎಸ್‌ಎಫ್ ಮಹಿಳಾ ಸಿಬ್ಬಂದಿ

ನವದೆಹಲಿ: ಈ ವರ್ಷದ ಗಣರಾಜ್ಯೋತ್ಸವವು ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗಲಿದೆ. ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮೊದಲ ಬಾರಿಗೆ ಹನ್ನೆರಡು ಮಹಿಳಾ ಒಂಟೆ ಸವಾರರು ಗಡಿ ಭದ್ರತಾ ಪಡೆಯ(ಬಿಎಸ್‌ಎಫ್) ಪ್ರಸಿದ್ಧ ಒಂಟೆ ತುಕಡಿಯ ಭಾಗವಾಗಲಿದ್ದಾರೆ.

ಬಿಎಸ್‌ಎಫ್ ಒಂಟೆ ತುಕಡಿಯ ಭಾಗವಾಗಿ ಬಿಎಸ್‌ಎಫ್ ಮಹಿಳಾ ಒಂಟೆ ಸವಾರರು ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ತವ್ಯ ಪಥದಲ್ಲಿ ಸಾಗಲಿದ್ದಾರೆ ಎಂದು ಬಿಎಸ್‌ಎಫ್ ಹೇಳಿದೆ.

ಈ ಮಹಿಳಾ ಒಂಟೆ ಸವಾರರು ವಿಶೇಷವಾಗಿ ವಿನ್ಯಾಸಗೊಳಿಸಿದ ರೀಗಲ್ ಸಮವಸ್ತ್ರಗಳನ್ನು ಧರಿಸಿ ಒಂಟೆಗಳ ಮೇಲೆ ಮೆರವಣಿಯಲ್ಲಿ ಸಾಗಲಿದ್ದಾರೆ.

ಭಾರತದ ಅನೇಕ ಅಮೂಲ್ಯವಾದ ಕರಕುಶಲ ಕಲೆಗಳನ್ನು ಪ್ರತಿನಿಧಿಸುವ ಸಮವಸ್ತ್ರಗಳನ್ನು ಪ್ರಸಿದ್ಧ ಫ್ಯಾಷನ್ ಡಿಸೈನರ್‌ನಿಂದ ಸಿದ್ಧಪಡಿಸಲಾಗಿದೆ ಎಂದು ಬಿಎಸ್‌ಎಫ್ ತಿಳಿಸಿದೆ.

ಬಿಎಸ್‌ಎಫ್ ಒಂಟೆ ಪಡೆ 1976 ರಿಂದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುತ್ತಿದೆ. ಈ ತುಕಡಿಯು ಸಾಮಾನ್ಯವಾಗಿ 90 ಒಂಟೆಗಳನ್ನು ಒಳಗೊಂಡಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com