ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತದ ಆರ್ಥಿಕತೆ ಒಂದಾಗಿದೆ- ರಾಷ್ಟ್ರಪತಿ ದ್ರೌಪದಿ ಮುರ್ಮು

ಕೋವಿಡ್ ಸಾಂಕ್ರಾಮಿಕದ ಪರಿಣಾಮದಿಂದ ಆರ್ಥಿಕತೆಯ ಬಹುತೇಕ ಕ್ಷೇತ್ರಗಳು ಅಲುಗಾಡಿದ್ದು, ಸರ್ಕಾರದ ಸಮಯೋಚಿತ ಮತ್ತು ಸಕ್ರಿಯ ಮಧ್ಯಸ್ಥಿಕೆಯಿಂದಾಗಿ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತದ ಆರ್ಥಿಕತೆ ಒಂದಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಪರಿಣಾಮದಿಂದ ಆರ್ಥಿಕತೆಯ ಬಹುತೇಕ ಕ್ಷೇತ್ರಗಳು ಅಲುಗಾಡಿದ್ದು, ಸರ್ಕಾರದ ಸಮಯೋಚಿತ ಮತ್ತು ಸಕ್ರಿಯ ಮಧ್ಯಸ್ಥಿಕೆಯಿಂದಾಗಿ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತದ ಆರ್ಥಿಕತೆ ಒಂದಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

74ನೇ ಗಣರಾಜ್ಯೋತ್ಸವ ದಿನಾಚರಣೆಗೂ ಮುನ್ನ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತವು ವಿಶ್ವದ ಐದನೇ ದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರವಾಗಿದೆ. ಈ ಸಾಧನೆಯನ್ನು ಜಾಗತಿಕ ಆರ್ಥಿಕತೆ ಅನಿಶ್ಚಿತತೆ ನಡುವೆ ಸಾಧಿಸಲಾಗಿದೆ ಆರ್ಥಿಕ ಕ್ಷೇತ್ರದಲ್ಲಿ ದೇಶದ ಧ್ಯೇಯೆಯಾದ (ಸರ್ವೋದಯ) ಎಲ್ಲರ ಪ್ರಗತಿಗೆ ಉತ್ತೇಜಿಸಲಾಗಿದೆ ಎಂದರು. 

ಆರಂಭಿಕ ಹಂತದಲ್ಲಿ ಕೋವಿಡ್-19 ದೇಶದ ಆರ್ಥಿಕತೆಯನ್ನು ತೀವ್ರವಾಗಿ ಹಾನಿಗೊಳಿಸಿತು ಆದರೆ ದೇಶವು ಶೀಘ್ರದಲ್ಲೇ ಕುಸಿತದಿಂದ ಹೊರಬಂದಿತು. ಸರ್ಕಾರದ ಸಮಯ ಪ್ರಜ್ಞೆ ಮತ್ತು ಕ್ರಿಯಾಶೀಲತೆಯಿಂದ ದೇಶ ಯಶಸ್ಸು ಕಂಡಿದೆ. ಆತ್ಮ ನಿರ್ಭರ ಭಾರತ ಉಪಕ್ರಮ ಪ್ರಶಂಸನಾರ್ಹ ಎಂದು ಹೇಳಿದರು. 

 ದುರ್ಬಲ ವರ್ಗದವರ ತೊಡಕುಗಳನ್ನು ನಿವಾರಿಸುವುದು ಮಾತ್ರವಲ್ಲದೇ ಅವರ ಏಳಿಗೆಗೆ ನೆರವಾಗುವುದು ನಮ್ಮ ಕರ್ತವ್ಯವಾಗಿದೆ.  ಮಾರ್ಚ್ 2020 ರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಜಾರಿಗೊಳಿಸುವ ಮೂಲಕ,  ಸರ್ಕಾರವು ಬಡ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಖಾತ್ರಿಪಡಿಸಿದೆ ಎಂದು ಅವರು ತಿಳಿಸಿದರು. 

 ಬಡ ಕುಟುಂಬಗಳ ಕಲ್ಯಾಣವನ್ನು ಪ್ರಮುಖ ಗುರಿಯಾಗಿಸಿಕೊಂಡು ಈ ಯೋಜನೆಯ ಅವಧಿಯನ್ನು ಸತತವಾಗಿ ವಿಸ್ತರಿಸಲಾಯಿತು, ಸುಮಾರು 81 ಕೋಟಿ ನಾಗರಿಕರು ಇದರ ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲು ಸರ್ಕಾರವು ಘೋಷಿಸಿದೆ. 2023 ರಲ್ಲಿ ಫಲಾನುಭವಿಗಳು ಮಾಸಿಕ ಪಡಿತರವನ್ನು ಉಚಿತವಾಗಿ ಪಡೆಯುತ್ತಾರೆ ಎಂದು ಅವರು ಹೇಳಿದರು. ಈ ಐತಿಹಾಸಿಕ ನಡೆಯೊಂದಿಗೆ ಸರ್ಕಾರ ದುರ್ಬಲ ವರ್ಗದವರ ಬಗ್ಗೆ ಕಾಳಜಿ ವಹಿಸಿದ್ದು, ಆರ್ಥಿಕ ಅಭಿವೃದ್ಧಿಯಿಂದ ಪ್ರಯೋಜನ ಪಡೆಯುವಂತೆ ಮಾಡಿದೆ ಎಂದು ಅವರು ಹೇಳಿದರು.

ಶಿಕ್ಷಣವು ಸರಿಯಾದ ಅಡಿಪಾಯವನ್ನು ನಿರ್ಮಿಸುತ್ತದೆ. ಈ ಉದ್ದೇಶಕ್ಕಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು  ಸರ್ಕಾರ ಪರಿಚಯಿಸಿದೆ.  ಇದು 21ನೇ ಶತಮಾನದ ಸವಾಲುಗಳನ್ನು ಎದುರಿಸಲು ಮಕ್ಕಳನ್ನು ಸಿದ್ದಪಡಿಸುತ್ತದೆ.ಕಲಿಕೆಯ ಪ್ರಕ್ರಿಯೆಯನ್ನು ವಿಸ್ತರಿಸುವಲ್ಲಿ ಮತ್ತು ಆಳವಾಗಿಸುವಲ್ಲಿ ತಂತ್ರಜ್ಞಾನದ ಪಾತ್ರವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಪ್ರಶಂಸಿಸುತ್ತದೆ ಎಂದು ರಾಷ್ಟ್ರಪತಿ ನುಡಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com