ಗಣರಾಜ್ಯೋತ್ಸವ ಪರೇಡ್: ಉತ್ತರಾಖಂಡ ಸ್ತಬ್ಧ ಚಿತ್ರಕ್ಕೆ ಮೊದಲ ಬಹುಮಾನ

ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ ಉತ್ತರಾಖಂಡದ ಸ್ತಬ್ಧ ಚಿತ್ರಕ್ಕೆ ಬಹುಮಾನ ದೊರೆತಿದೆ.
ಉತ್ತರಾಖಂಡ್ ಸ್ತಬ್ಧಚಿತ್ರ
ಉತ್ತರಾಖಂಡ್ ಸ್ತಬ್ಧಚಿತ್ರ

ನವದೆಹಲಿ: ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ ಉತ್ತರಾಖಂಡದ ಸ್ತಬ್ಧ ಚಿತ್ರಕ್ಕೆ ಬಹುಮಾನ ದೊರೆತಿದೆ.

ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ಸ್ತಬ್ಧ ಚಿತ್ರಗಳು 2 ಹಾಗೂ 3 ನೇ ಸ್ಥಾನಗಳನ್ನು ಅನುಕ್ರಮವಾಗಿ ಪಡೆದಿವೆ.

ಸೇನೆಯ ಪಂಜಾಬ್ ರೆಜಿಮೆಂಟ್ ಕೇಂದ್ರ ತಂಡ ಮೂರು ಸೇನಾಪಡೆಗಳ ಪೈಕಿ ಅತ್ಯುತ್ತಮ ಮಾರ್ಚಿಂಗ್ ತಂಡ ಎನಿಸಿಕೊಂಡಿದ್ದು, ಮೈ ಗೌರ್ನಮೆಂಟ್ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ನಡೆಸಿದ ಸಾರ್ವಜನಿಕ ಪೋಲ್ ನಲ್ಲಿ ಭಾರತೀಯ ವಾಯುಪಡೆ ಮೊದಲ ಸ್ಥಾನವನ್ನು ಗಳಿಸಿದೆ. 

ಮಾನಸ್ ಖಂಡ್ ಎಂಬ ಶೀರ್ಷಿಕೆಯಡಿ ಉತ್ತರಾಖಂಡ್ ನ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿತ್ತು. ಗರ್ಹ್ವಾಲ್ ಪ್ರದೇಶದಲ್ಲಿನ ಚಾರ್ ಧಾಮ್ ಮಾದರಿಯಲ್ಲಿ ಕುಮಾನ್ ಪ್ರದೇಶದಲ್ಲಿನ ಪ್ರಮುಖ ದೇವಾಲಯಗಳನ್ನು ಸಂಪರ್ಕಿಸುವ ಹಾಗೂ ಅದನ್ನು ಅಭಿವೃದ್ಧಿಪಡಿಸುವ ಮಾನಸ್ ಖಂಡ್ ಕಾರಿಡಾರ್ ಯೋಜನೆಯನ್ನು ಪ್ರದರ್ಶಿಸಲು ಈ ಸ್ತಬ್ಧಚಿತ್ರವನ್ನು ತಯಾರಿಸಲಾಗಿತ್ತು. ಇದರ ಜೊತೆಗೆ ರಾಜ್ಯದಲ್ಲಿನ ಶ್ರೀಮಂತ ವನ್ಯಜೀವಿ ಸಂಕುಲದ ಅಂಶಗಳನ್ನೂ ಪ್ರದರ್ಶಿಸಲಾಗಿತ್ತು.
 
ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳೂ ಸಹ ತಮ್ಮ ಸ್ತಬ್ಧ ಚಿತ್ರಗಳನ್ನು ಧಾರ್ಮಿಕ ಥೀಮ್ ನಡಿಯಲ್ಲೇ ತಯಾರಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com