ಮಹಾರಾಷ್ಟ್ರ: ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕಾರ! ಈ ಸರ್ಕಸ್ ಹೆಚ್ಚು ಕಾಲ ಉಳಿಯುವುದಿಲ್ಲ- ಸಂಜಯ್ ರಾವತ್

ಭಾನುವಾರ ಮಹಾರಾಷ್ಟ್ರ ರಾಜಕೀಯದಲ್ಲಾದ ದಿಢೀರ್ ಬೆಳವಣಿಗೆಯಲ್ಲಿ ಎನ್ ಸಿಪಿ ಮುಖಂಡ ಅಜಿತ್ ಪವಾರ್ ತಮ್ಮ ಹಲವು ಸಹೋದ್ಯೋಗಿಗಳೊಂದಿಗೆ ಏಕನಾಥ್ ಶಿಂಧೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಂಜಯ್ ರಾವತ್
ಸಂಜಯ್ ರಾವತ್

ಮುಂಬೈ: ಭಾನುವಾರ ಮಹಾರಾಷ್ಟ್ರ ರಾಜಕೀಯದಲ್ಲಾದ ದಿಢೀರ್ ಬೆಳವಣಿಗೆಯಲ್ಲಿ ಎನ್ ಸಿಪಿ ಮುಖಂಡ ಅಜಿತ್ ಪವಾರ್ ತಮ್ಮ ಹಲವು ಸಹೋದ್ಯೋಗಿಗಳೊಂದಿಗೆ ಏಕನಾಥ್ ಶಿಂಧೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆ ನಾಯಕ ಸಂಜಯ್ ರಾವತ್, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ತಮ್ಮ ಪಕ್ಷದ ವಿಭಜನೆಯಿಂದ ವಿಚಲಿತರಾಗಿದ್ದು, ಉದ್ದವ್ ಠಾಕ್ರೆ ಜೊತೆಗೆ ಹೊಸದಾಗಿ ಪಕ್ಷ ಚಟುವಟಿಕೆ ಪ್ರಾರಂಭಿಸಬಹುದು ಎಂದು ಹೇಳಿದ್ದಾರೆ.

ಶರದ್ ಪವಾರ್ ಅವರೊಂದಿಗೆ ಮಾತನಾಡಿದ್ದೇನೆ ಅವರು ದೃಢವಾಗಿದ್ದು, ಜನರ ಬೆಂಬಲ ನಮ್ಮ ಬೆನ್ನಿಗಿದೆ ಎಂದಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಒಡಕು ಮೂಡಿಸುವ ಮೂಲಕ ಸರ್ಕಾರ ರಚನೆಯ  ಇಂತಹ 'ಸರ್ಕಸ್' ನ್ನು ಮಹಾರಾಷ್ಟ್ರದ ಜನರು ದೀರ್ಘಕಾಲ ಸಹಿಸುವುದಿಲ್ಲ ಎಂದು ರಾವತ್ ಹೇಳಿದ್ದಾರೆ. 

"ಕೆಲವರು ಮಹಾರಾಷ್ಟ್ರದ ರಾಜಕೀಯವನ್ನು ಸಂಪೂರ್ಣವಾಗಿ ಹಾಳುಮಾಡಲು ನಿರ್ಧರಿಸಿದ್ದಾರೆಂದು ತೋರುತ್ತಿದೆ. ಅವರು ಆಯ್ಕೆಮಾಡಿದ ಹಾದಿಯಲ್ಲಿ ಮುಂದುವರಿಯಲಿ ಎಂದು ರಾವತ್  ಹೇಳುವ ಮೂಲಕ ಅಜಿತ್ ಪವಾರ್, ಸಿಎಂ ಶಿಂಧೆ ಮತ್ತು ಭಾರತೀಯ ಜನತಾ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com