ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೋರ್ವ ಡಿಸಿಎಂ ಹುದ್ದೆ ಸೃಷ್ಟಿಯಾಗಿದ್ದು, ಎನ್ ಸಿಪಿ ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ವಿಪಕ್ಷದ ನಾಯಕರೊಬ್ಬರು ತಮ್ಮ ಸರ್ಕಾರವನ್ನು ಸೇರಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಶಿಂಧೆ, ಅಭಿವೃದ್ಧಿ ಪರ ರಾಜಕಾರಣವನ್ನು ಅಭಿವೃದ್ಧಿಯ ಪುರುಷ ಬೆಂಬಲಿಸಿದ್ದಾರೆ. ಅರ್ಹತೆಯುಳ್ಳ ಕಾರ್ಯಕರ್ತರಿಗೆ ದ್ವಿತೀಯ ಸ್ಥಾನವನ್ನು ಪಡೆದಾಗ ಈ ರೀತಿಯ ಬೆಳವಣಿಗೆಗಳು ಆಗುತ್ತದೆ ಎಂದು ಹೇಳಿದ್ದಾರೆ.
"ಡಬಲ್ ಇಂಜಿನ್ ಸರ್ಕಾರ ಈಗ ಟ್ರಿಪಲ್ ಇಂಜಿನ್ ಸರ್ಕಾರವಾಗಿದೆ. ರಾಜ್ಯ ಅಭಿವೃದ್ಧಿಪಥದಲ್ಲಿರಲಿದೆ. ಈಗ ಓರ್ವ ಸಿಎಂ ಇಬ್ಬರು ಡಿಸಿಎಂ ಗಳಿದ್ದಾರೆ. ಇದು ರಾಜ್ಯದ ವೇಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ" ಎಂದು ಶಿಂಧೆ ಹೇಳಿದ್ದಾರೆ.
Advertisement